ವಿಜಯಪುರ: ಇಂದಿರಾ ಗಾಂಧಿ ಮಾಡಿದ ತಪ್ಪನ್ನು ಮೋದಿ ಅವರು ಮಾಡಬಾರದು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಭಾರತಕ್ಕೆ ಪಿಓಕೆ ಬಿಟ್ಟುಕೊಡುವುದು, ಸಿಂಧೂ ನದಿ ನೀರನ್ನು ನಾವೇ ಬಳಸಿಕೊಳ್ಳುವುದು ಸೇರಿದಂತೆ ಮೋದಿ ಅವರು ಹಾಕಿದ ಷರತ್ತುಗಳು ಉತ್ತಮವಾಗಿದ್ದು, ಎಲ್ಲವನ್ನು ನಾನು ಸ್ವಾಗತಿಸುತ್ತೇನೆ. ಯುದ್ಧ ವಿರಾಮ ಘೋಷಣೆ ಮಾಡಿದಾಗ ಬಹಳ ದೇಶ ಭಕ್ತರಿಗೆ ಬೇಸರ, ನೋವಾಗಿತ್ತು ಆಗಿತ್ತು.
ವಿಜ್ಞಾನಿಗಳನ್ನೇ ಅಚ್ಚರಿಗೊಳಿಸಿದೆ ಈ ಹಣ್ಣು..! ಎಷ್ಟೇ ಗಂಭೀರ ಕಾಯಿಲೆಯಾಗಿದ್ರೂ ಅದರಿಂದ ಸಿಗಲಿದೆ ಮುಕ್ತಿ
ಆದರೆ ಈ ಹಿಂದೆ ನೆಹರು, ಇಂದಿರಾ ಗಾಂಧಿ ಮಾಡಿದ ತಪ್ಪನ್ನು ಮೋದಿ ಅವರು ಮಾಡಬಾರದು ಎನ್ನುವುದು ದೇಶದ ಜನರ ಭಾವನೆ. ಶಿಮ್ಲಾ ಒಪ್ಪಂದವನ್ನ ಪಾಕಿಸ್ತಾನ ತಾನೇ ಮಾಡಿಕೊಂಡಿದೆ. ಇಂದಿರಾ ಗಾಂಧಿ ಮಾಡಿದ ತಪ್ಪಿನಿಂದ ಲಾಹೋರ್ ನಮ್ಮ ದೇಶದ ಭಾಗ ಆಗುವುದು ತಪ್ಪಿದಂತಾಯಿತು. ದೇಶದ ಜನರಿಗೆ ಮೋದಿಯವರ ಮೇಲೆ ನಂಬಿಕೆಯಿದೆ ಎಂದು ಹೇಳಿದರು.
ದೇಶದ ಜನರು ಅಂಜಬಾರದು, ನಮ್ಮ ಹತ್ತಿರ ಕೂಡ ಅಣುಬಾಂಬ್ ಇದೆ. ಕೇವಲ ನಮ್ಮ ಒಂದು ಬ್ರಹ್ಮೋಸ್ ಇದ್ದರೆ ಸಾಕು ಪಾಕಿಸ್ತಾನ ನಾಶ ಮಾಡಬಹುದು. ಪ್ರಧಾನಮಂತ್ರಿಗಳು ಇದೇ ರೀತಿ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು. ಅವರು ಇದೇ ರೀತಿ ಇದ್ದರೆ ಪ್ರಧಾನಿಗಳ ಮೇಲೆ ವಿಶ್ವಾಸ ಉಳಿಯುತ್ತದೆ. ಒಂದು ಹೆಜ್ಜೆ ಹಿಂದೆ ಸರಿದರೂ ಕೂಡ ಸರಿಯಾಗಲ್ಲ. ಹಿಂದೂಗಳನ್ನು ರಕ್ಷಣೆ ಮಾಡುತ್ತೀವಿ ಎಂಬ ಕಾರಣಕ್ಕೆ ಹಿಂದೂಗಳು ಬಿಜೆಪಿಗೆ, ಮೋದಿಯವರಿಗೆ ಮತ ಹಾಕುತ್ತಾರೆ. ಹೀಗಾಗಿ ನಾವು ಹಿಂದೆ ಸರಿದರೆ ಸರಿಯಿರಲ್ಲ ಎಂದರು.