Close Menu
Ain Live News
    Facebook X (Twitter) Instagram YouTube
    Thursday, May 29
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಮುಂಗಾರು ಅಬ್ಬರ: ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

    By Author AINMay 28, 2025
    Share
    Facebook Twitter LinkedIn Pinterest Email
    Demo

    ಬೆಂಗಳೂರು: ರಾಜ್ಯಾದ್ಯಂತ ಮುಂಗಾರು ಮಳೆ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಪರಿಹಾರ ಕಾರ್ಯದ ಉಸ್ತುವಾರಿ ನೋಡಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
    ಮಳೆಯಿಂದ ಆಗಿರುವ ಅನಾಹುತದ ಬಗ್ಗೆ ಇಂದು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಮುಖ್ಯಮಂತ್ರಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶಿಸಿದರು.
    ಜೋರು ಮಳೆಯಿಂದ ಹಾನಿಗೆ ಒಳಗಾಗಿರುವ ಮತ್ತು ಪ್ರವಾಹ ಪೀಡಿತ ಪ್ರದೇಶಗಳಿಗೆ ತಕ್ಷಣ ಭೇಟಿ ನೀಡಿ ಪರಿಸ್ಥಿತಿಯನ್ನು ಸಮಗ್ರವಾಗಿ ಅವಲೋಕಿಸುವಂತೆ ಜಿಲ್ಲಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ.
    ಹಾಗೂ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಈ ಬಗ್ಗೆ ಕಟ್ಟೆಚ್ಚರ ಮತ್ತು ತೀವ್ರ ನಿಗಾವಹಿಸಿ ತಕ್ಷಣ ತಕ್ಷಣ ಪರಿಹಾರ ಕಾರ್ಯಗಳನ್ನು ಸಮರೋಪಾದಿಯಲ್ಲಿ ನಿರ್ವಹಿಸಲು ಸೂಚನೆ ನೀಡಿದ್ದಾರೆ.

    ಮೇ. 30, 31ಕ್ಕೆ ಸಭೆ ಕರೆದ ಸಿಎಂ
    ರಾಜ್ಯದಲ್ಲಿ ಆದ ಮಳೆ ಹಾನಿ ಬಗ್ಗೆ ಸಮಗ್ರ ಅವಲೋಕನ‌ ನಡೆಸಲು ಮೇ 30, 31 ರಂದು DC , CEO ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆಯನ್ನು ಕರೆಯುವಂತೆ ಮುಖ್ಯಮಂತ್ರಿಗಳು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚನೆ ನೀಡಿದ್ದಾರೆ.

    ಮುಂಗಾರು ಹೊಡೆತ: ಪ್ರವಾಹ ಪೀಡಿತ ಪ್ರದೇಶಗಳಿಗೆ ಸಂತೋಷ್‌ ಲಾಡ್‌ ಭೇಟಿ

    ಸದ್ಯ ತೆಗೆದುಕೊಂಡಿರುವ ಕ್ರಮಗಳು…

     ರಾಜ್ಯದಲ್ಲಿ 170 ತಾಲ್ಲೂಕುಗಳನ್ನು ಪ್ರವಾಹ/ಭೂಕುಸಿತಕ್ಕೆ ಗುರಿಯಾಗುವ ತಾಲ್ಲೂಕುಗಳೆಂದು ಗುರುತಿಸಲಾಗಿದ್ದು, ಮುಂಜಾಗ್ರತೆಯಾಗಿ 2,296 ಕಾಳಜಿ/ಆಶ್ರಯ ತಾಣಗಳನ್ನು ಗುರುತಿಸಲಾಗಿದೆ.

     ಬಿ.ಬಿ.ಎಂ.ಪಿ ವ್ಯಾಪ್ತಿಯಲ್ಲಿ 201 ಸ್ಥಳಗಳನ್ನು ಪ್ರವಾಹ ಪೀಡಿತ ಸ್ಥಳಗನ್ನು ಗುರುತಿಸಲಾಗಿದೆ.

     ಮೇ-26, 2025 ರವರೆಗೆ ರಾಜ್ಯದಲ್ಲಿ 45 ಮನೆಗಳು ಸಂಪೂರ್ಣವಾಗಿ ಹಾನಿಗೊಂಡಿದ್ದು, 1,385 ಮನೆಗಳು ಭಾಗಶಃ ಹಾನಿಯಾಗಿದ್ದು, ಅದರಲ್ಲಿ ಶೇ.99% ರಷ್ಟು ಆರ್ಥಿಕ ಸಹಾಯ ಧನವನ್ನು ಪಾವತಿ ಮಾಡಲಾಗಿದೆ.

     ಮೇ-26, 2025 ರಂತೆ ವಿಪತ್ತು ನಿರ್ವಹಣೆಗಾಗಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಪಿ.ಡಿ ಖಾತೆಯಲ್ಲಿ ರೂ.97,351.95 ಲಕ್ಷಗಳು ಅನುದಾನವಿರುತ್ತದೆ.

    Demo
    Share. Facebook Twitter LinkedIn Email WhatsApp

    Related Posts

    ಹುಟ್ಟಿನಿಂದಲೇ ಮೊಣಕಾಲು ಚಲನೆಗೆ ತೊಂದರೆ: 9 ವರ್ಷದ ಬಾಲಕಿಗೆ ಹೊಸ ಜೀವನೋತ್ಸಾಹ ನೀಡಿದ ಮೆಡಿಕವರ್ ಆಸ್ಪತ್ರೆ

    May 29, 2025

    ಹಳೇಹುಬ್ಬಳ್ಳಿ ಗಲಭೆ ಕೇಸ್‌ ವಾಪಸ್ : ರಾಜ್ಯ ಸರ್ಕಾರಕ್ಕೆ ಭಾರಿ ಹಿನ್ನಡೆ, 43 ಕ್ರಿಮಿನಲ್‌ ಪ್ರಕರಣ ವಾಪಸ್‌ ರದ್ದು ಮಾಡಿದ ಹೈಕೋರ್ಟ್

    May 29, 2025

    ಸರ್ಕಾರಿ ಶಾಲಾ ಮಕ್ಕಳೊಂದಿಗೆ ಸಿಎಂ ಸಿದ್ದರಾಮಯ್ಯ ಬಿಂದಾಸ್‌ ಟಾಕ್

    May 29, 2025

    ಕ್ಷಮೆ ಕೇಳಲ್ಲ ಕಮಲ್‌ ಹಾಸನ್‌ ಪಟ್ಟು, ಸಿನಿಮಾ ರಿಲೀಸ್‌ ಮಾಡಕ್ಕೆ ಬಿಡಲ್ಲ ಕನ್ನಡಿಗರ ಸಿಟ್ಟು!

    May 29, 2025

    35 ಸಾಧಕರಿಗೆ ಜೀ ಕನ್ನಡ ನ್ಯೂಸ್‌ ವಾಹಿನಿಯ ರಿಯಲ್‌ ಸ್ಟಾರ್ಸ್ ಅವಾರ್ಡ್ಸ್‌ ಪ್ರದಾನ‌

    May 29, 2025

    Rain News: ಕರ್ನಾಟಕದ ಈ ಜಿಲ್ಲೆಗಳಲ್ಲಿ ಇಂದು ಧಾರಕಾರ ಮಳೆ ಸಾಧ್ಯತೆ!

    May 29, 2025

    ಅಪ್ರಾಪ್ತೆಗೆ ಲೈಂಗಿಕ ಕಿರುಕುಳ: ಡ್ಯಾನ್ಸ್ ಮಾಸ್ಟರ್ ಅರೆಸ್ಟ್!

    May 29, 2025

    Bengaluru: ಪಕ್ಕದ ಕಾರಿಗೆ ನೀರು ಹಾರಿಸಿದ್ದಕ್ಕೆ ವ್ಯಕ್ತಿಯ ಬೆರಳು ಕಟ್!

    May 29, 2025

    ರಾಯಚೂರಿನಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ!

    May 29, 2025

    ಕ್ಷಮೆ ಕೇಳಲ್ಲ ಎಂದ ಕಮಲ್ ಹಾಸನ್: ನಟನ ಬ್ಯಾನರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ!

    May 29, 2025

    ಬಿಜೆಪಿ ಮುಖಂಡ ಪ್ರಿಯಾಂಗು ಪಾಂಡೆ ಮೇಲೆ ಗುಂಡಿನ ದಾಳಿ ಕೇಸ್: ಮತ್ತೋರ್ವ ಆರೋಪಿ ಅರೆಸ್ಟ್!

    May 29, 2025

    ರೈತರಿಗೆ ಸಿಹಿ ಸಮಾಚಾರ: ಕಿಸಾನ್ ಕ್ರೆಡಿಟ್‌ಕಾರ್ಡ್ ಬಗ್ಗೆ ಕೇಂದ್ರದಿಂದ ಮಹತ್ವದ ಮಾಹಿತಿ!

    May 29, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.