Close Menu
Ain Live News
    Facebook X (Twitter) Instagram YouTube
    Saturday, June 14
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಮುಂಗಾರು ಅವಾಂತರ: ಕರ್ನಾಟಕದ ಹಲವೆಡೆ ಅವಾಂತರ ಸೃಷ್ಟಿ; ಎಲ್ಲೆಲ್ಲಿ ಏನಾಯ್ತು? ಇಲ್ಲಿದೆ ಡೀಟೈಲ್ಸ್!

    By AIN AuthorJune 14, 2025
    Share
    Facebook Twitter LinkedIn Pinterest Email
    Demo

    ಬೆಂಗಳೂರು:- ಕಳೆದ ಮೂರ್ನಾಲ್ಕು ದಿನಗಳಿಂದ ಕರ್ನಾಟಕದಲ್ಲಿ ಸುರಿಯುತ್ತಿರುವ ಮಳೆಯಿಂದ ಸಾಕಷ್ಟು ಅವಾಂತರ ಸೃಷ್ಟಿ ಆಗಿದೆ. ಅದರಂತೆ ವಿಜಯಪುರದ ಬಸವನ ಬಾಗೇವಾಡಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.

    ಹುಬ್ಬಳ್ಳಿ ಮೇಲ್ವೇತುವೆ ಕಾಮಗಾರಿಗಾಗಿ ‘ಈದ್ಗಾ” ಕಾಂಪೌಂಡ್‌ ತೆರವು!

    ಪಟ್ಟಣದ ಲಕ್ಷ್ಮೀ ನಗರ, ರಾಯಣ್ಣ ವೃತ್ತದ ಬಳಿಯ 20ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿ ಆವಾಂತರ ಸೃಷ್ಟಿಸಿದೆ. ಮಳೆಯಿಂದಾಗಿ ಮನೆಯಲ್ಲಿದ್ದ ಧಾನ್ಯಗಳು ನೀರುಪಾಲಾಗಿವೆ.

    ಮನೆಗೆ ನೀರು ನುಗ್ಗಿ ಮನೆಯಲ್ಲಿದ್ದ ಸಾಮಗ್ರಿಗಳು ನೀರು ಪಾಲಾಗಿದ್ದು, ಮಹಿಳೆ ಕಣ್ಣೀರು ಹಾಕಿದ್ದಾಳೆ. ಇತ್ತ ಕೆರೆ ಪಕ್ಕದ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ವೃದ್ಧೆ ಪರದಾಡಿದ್ದಾಳೆ.

    ಧಾರಾಕಾರ ಮಳೆಗೆ ಕೊಚ್ಚಿಹೋದ ಆಟೋ:

    ಬೆಳಗಾವಿ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಆಟೋ ಕೊಚ್ಚಿಕೊಂಡು ಹೋಗಿ ಚಾಲಕ ಸಾವನ್ನಪ್ಪಿದ ಘಟನೆ ಯರಗಟ್ಟಿ ತಾಲೂಕಿನ ಚಿಕ್ಕಬೂದನೂರ ಗ್ರಾಮದಲ್ಲಿ ನಡೆದಿದೆ.

    ಮಳೆರಾಯನ ಅರ್ಭಟದಿಂದ ಗ್ರಾಮದ ಹೊರವಲಯದ ಹಳ್ಳ ಮೈತುಂಬಿ ಹರಿಯುತ್ತಿದೆ. ಹಳ್ಳದ ಬಳಿ ಆಟೋ ದಾಟಿಸುವಾಗ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದೆ. ಆಟೋ ಚಾಲಕನ ಮೃತದೇಹಕ್ಕಾಗಿ ಗ್ರಾಮಸ್ಥರು ಹಾಗೂ ಪೊಲೀಸರು ಹುಡುಕಾಟ ನಡೆಸಿದ್ದಾರೆ

    ಉಕ್ಕಿ ಹರಿಯುತ್ತಿರುವ ಹಳ್ಳ-ಕೊಳ್ಳಗಳು!

    ಗದಗ ಜಿಲ್ಲೆಯಲ್ಲಿಯೂ ಭಾರೀ ಮಳೆ ಆಗುತ್ತಿದ್ದು, ಧಾರಾಕಾರ ಮಳೆಯಿಂದಾಗಿ ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿದೆ. ಇನ್ನೂ ಉಕ್ಕಿ ಹರಿಯುವ ಹಳ್ಳದಿಂದ ಶಾಲೆಯಿಂದ ತಮ್ಮ ಗ್ರಾಮಕ್ಕೆ ಮರಳಲು ಮಕ್ಕಳು ಪರದಾಡುತ್ತಿದ್ದು, ವಿಶೇಷ ಕಾಳಜಿ ವಹಿಸಿ ಮಕ್ಕಳನ್ನು ಗ್ರಾಮಸ್ಥರು ಪಾರು ಮಾಡಿದ್ದಾರೆ. ಎಸ್, ಇವೆಲ್ಲಾ ದೃಶ್ಯ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ದ್ಯಾಮುಣಶಿ ಗ್ರಾಮದ ಬಳಿ ಜರುಗಿದೆ.

    ಹೀಗೆ ರಾಜ್ಯದ ಹಲವೆಡೆ ಮುಂಗಾರು ಇನ್ನಷ್ಟು ಅವಾಂತರ ಸೃಷ್ಟಿಯಾಗಿದ.

    Demo
    Share. Facebook Twitter LinkedIn Email WhatsApp

    Related Posts

    Rain News: ಕರ್ನಾಟಕದ ಈ ಜಿಲ್ಲೆಗಳಲ್ಲಿ ಇಂದು ಜೋರು ಸಾಧ್ಯತೆ: ಯೆಲ್ಲೋ ಅಲರ್ಟ್ ಘೋಷಣೆ?

    June 14, 2025

    16 ನೇ ಹಣಕಾಸಿನ ಆಯೋಗದ ಸಭೆಯಲ್ಲಿ CM ಸಿದ್ದರಾಮಯ್ಯ ಭಾಗಿ: ರಾಜ್ಯದ ಪ್ರಸ್ತಾವನೆ ಸಲ್ಲಿಕೆ!

    June 13, 2025

    Rain News: ಕರ್ನಾಟಕದಲ್ಲಿ ನಾಳೆ ರಣಭೀಕರ ಮಳೆ ಸಾಧ್ಯತೆ: ಎಲ್ಲೆಲ್ಲಿ?

    June 13, 2025

    ಬಿಗ್ ಶಾಕ್: ಬೆಂಗಳೂರು ಸೇರಿ ಕರ್ನಾಟಕದಲ್ಲಿ ಜೂ. 16ರಿಂದ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತ!

    June 13, 2025

    ಬೆಂಗಳೂರಿನ ಕ್ರಿಕೆಟ್ ವ್ಯವಸ್ಥೆ ಮೇಲೆ ಕೆಟ್ಟ ಹೆಸರು ಬಂದಿದೆ: ಕಾಲ್ತುಳಿತಕ್ಕೆ ಮೊಯ್ಲಿ ಅಸಮಾಧಾನ!

    June 13, 2025

    ವಿಮಾನದಲ್ಲಿ ಪ್ರಯಾಣಿಸೋ ಮುನ್ನ ಇದು ತಿಳಿದಿರಲಿ: ಈ ಸೀಟಲ್ಲಿ ಕೂರೋದು ಸೇಫ್!

    June 13, 2025

    ಅಹಮದಾಬಾದ್’ನಲ್ಲಿ ನಡೆದ ದುರಂತ ಭಾರತದ ಇತಿಹಾಸದಲ್ಲೇ ಅತಿ ದೊಡ್ಡದು: ಸಿಎಂ ಇಬ್ರಾಹಿಂ

    June 13, 2025

    ವಿಮಾನ ದುರಂತದ ಬಗ್ಗೆ ಭಯಾನಕ ಭವಿಷ್ಯ ನುಡಿದಿತ್ತಾ ಆ ಪತ್ರಿಕೆ? ವೈರಲ್‌ ಫೋಟೋ ಹಿಂದಿದೆ ರೋಚಕ ಕಥೆ!

    June 13, 2025

    ಅಧಿಕಾರಿ-ನೌಕರರಿಗೆ ಕ್ರೀಡಾ ಕೂಟ ಆಯೋಜಿಸುವುದರಿಂದ ಉತ್ತಮ ಬಾಂಧವ್ಯ ಬೆಳೆಯಲಿದೆ: ಮಹೇಶ್ವರ್ ರಾವ್

    June 13, 2025

    ಅರ್ಜುನ್‌ ಜನ್ಯ ಹೊಸ ಸಾಹಸ: ́45́ ಚಿತ್ರಕ್ಕಾಗಿ ಉಗಾಂಡದಿಂದ ಬಂದಿದ್ಯಾರು?

    June 13, 2025

    ಇದೊಂದು ಬ್ಯುಸಿನೆಸ್, ಮಾರ್ಕೆಟಿಂಗ್ ಹೆಚ್ಚು ಮಾಡಲು ನಟಿ ತಮನ್ನಾ ಆಯ್ಕೆ – ಎಂ.ಬಿ ಪಾಟೀಲ್

    June 13, 2025

    ತಡವಾಗಿ ಊಟ ಮಾಡುವ ಅಭ್ಯಾಸ ನಿಮಗಿದೆಯಾ? ತಕ್ಷಣ ಬದಲಾಯಿಸಿಕೊಳ್ಳಿ.. ಇಲ್ಲದಿದ್ದರೆ ಈ 5 ಕಾಯಿಲೆಗಳು ಬರೋದು ಗ್ಯಾರಂಟಿ

    June 13, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.