ಚಿತ್ರದುರ್ಗ:- ಆಕಸ್ಮಿಕ ವಿದ್ಯುತ್ ಸ್ಪರ್ಶಿಸಿ ತಾಯಿ-ಮಗು ಇಬ್ಬರು ಸಾವನ್ನಪ್ಪಿರುವ ಘಟನೆ ಮೊಳಕಾಲ್ಮೂರಿನ ತುಮಕೂರ್ಲಹಳ್ಳಿ ಬೋವಿ ಕಾಲೋನಿಯಲ್ಲಿ ಜರುಗಿದೆ.
ಬಾತ್ ರೂಂ ಗೆ ಎಳೆದ ವಯರ್ ಮೊದಲಿಗೆ ಮಗುಗೆ ತಗಲಿತ್ತು. ಈ ವೇಳೆ ಮಗುವನ್ನು ರಕ್ಷಿಸಲು ಹೋದ ತಾಯಿಗೂ ವಿದ್ಯುತ್ ಸ್ಪರ್ಶಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ತಾಯಿ ಬೋರಮ್ಮ, ಮಗು ಅಜಯ್ ಮೃತರು. ಘಟನೆ ಸಂಬಂಧ ಮೊಳಕಾಲ್ಮೂರಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.