ನೆಲಮಂಗಲ: ಒಂದೂವರೆ ತಿಂಗಳ ಗಂಡು ಮಗುವನ್ನು ನೀರು ಕಾಯಿಸುವ ಹಂಡೆಯಲ್ಲಿ ಮುಳುಗಿಸಿ ತಾಯಿಯೇ ಕೊಲೆ ಮಾಡಿದಂತಹ ಭಯಾನಕ ಘಟನೆ ನೆಲಮಂಗಲ ತಾಲೂಕಿನ ವಿಶ್ವೇಶ್ವರಪುರದಲ್ಲಿ ನಡೆದಿದೆ.
ಈ ಹಣ್ಣಿಗೆ ಹೃದಯಾಘಾತ ತಡೆಯೋ ಶಕ್ತಿ ಇದೆ.. ವಾರದಲ್ಲಿ ಒಮ್ಮೆಯಾದರೂ ತಪ್ಪದೇ ಸೇವಿಸಿ!
ಪವನ್ ಮತ್ತು ರಾಧಾ ದಂಪತಿಯ ಕಂದಮ್ಮನನ್ನು ತಾಯಿ ರಾಧಾ ಕೈಯಿಂದ ಹತ್ಯೆಯಾಗಿದ್ದು, ಶೌಚಾಲಯದಲ್ಲಿ ನೀರು ಕಾಯಿಸಲು ಇಡಲಾಗಿದ್ದ ಹಂಡೆಯಲ್ಲೇ ಮಗುವನ್ನು ಮುಳುಗಿಸಿ ಕೊಲೆ ಮಾಡಲಾಗಿದೆ ಎಂಬುದಾಗಿ ಶಂಕಿಸಲಾಗಿದೆ.
ಬಡತನ, ಪತಿಯ ಕುಡಿತದ ಚಟ, ಹಾಗೂ ಮಗುವಿನ ಆರೈಕೆ ಸಾಮರ್ಥ್ಯದ ಕೊರತೆಯ ಕಾರಣ ಈ ಕೃತ್ಯಕ್ಕೆ ಮುಂದಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಪತಿ ಪವನ್ ಆಟೋ ಚಾಲಕರಾಗಿದ್ದು, ಪ್ರತಿದಿನವೂ ಮದ್ಯಪಾನ ಮಾಡುತ್ತಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದಂಪತಿಯ ನಡುವೆ ನಿರಂತರ ಕಲಹ ನಡೆಯುತ್ತಿತ್ತು ಎಂಬ ಮಾಹಿತಿ ಲಭಿಸಿದೆ.
ಘಟನೆ ತಿಳಿದು ಬೆಚ್ಚಿಬಿದ್ದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ನೆಲಮಂಗಲ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಾಯಿ ರಾಧಾಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.