ಕೋಲಾರ: ಕೋಲಾರದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಜನ್ಮಕೊಟ್ಟ ತಾಯಿಯೇ ಮಗುವನ್ನು ಬಿಟ್ಟು ಹೋಗಿರುವ ಘಟನೆ ಕೋಲಾರ ನಗರದ SNR ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಮೌನಿಕಾ (19) ಮಗುವನ್ನು ಬಿಟ್ಟು ಹೋದ ಪಾಪಿ ತಾಯಿಯಾಗಿದ್ದು, ಜೂ.12 ರಂದು ಸಂಜೆ ಜಿಲ್ಲಾಸ್ಪತ್ರೆಗೆ ಹೆರಿಗೆಗೆಂದು ಬಂದಿದ್ದಳು.
ನಿಮ್ಮ ಮನೆಯಲ್ಲಿ ಸೊಳ್ಳೆಗಳ ಕಾಟ ಜಾಸ್ತಿ ಆಗಿದ್ಯಾ!? ಹಾಗಿದ್ರೆ ಹೀಗೆ ಮಾಡಿ!
ವಿಳಾಸ ಸೇರಿದಂತೆ ಯಾವುದೇ ದಾಖಲಾತಿ ನೀಡದೆ ಕುಟುಂಬದ ಮದುವೆಗೆ ಬಂದಿದ್ದೆ ಹೆರಿಗೆ ನೋವು ಎಂದು ನಾರ್ಮಲ್ ಹೆರಿಗೆ ಮಾಡಿಸಿಕೊಂಡಿದ್ದಾಳೆ. ತುರ್ತು ಹೆರಿಗೆ ಇದ್ದಿದರಿಂದ ಮಾನವೀಯತೆ ದೃಷ್ಟಿಯಲ್ಲಿ ವೈದ್ಯೆ ಡಾ.ಶಾಂತ ಹೆರಿಗೆ ಮಾಡಿದ್ದಾರೆ. ಹೆರಿಗೆ ಬಳಿಕ ನಾನು ಚಿಕ್ಕಬಳ್ಳಾಪುರ ಜಿಲ್ಲೆಯ ಪೇರೆಸಂದ್ರವಳು, ಗಂಡ ಶ್ರೀನಿವಾಸ್ ಅಂತ ಮೊಬೈಲ್ ನಂಬರ್ ಸಮೇತ ಸುಳ್ಳು ಮಾಹಿತಿ ನೀಡಿದ್ದಾಳೆ.
ನಿನ್ನೆ ಬೆಳಿಗ್ಗೆ 5 ಗಂಟೆಯಲ್ಲಿ ಟೀ ಕುಡಿದು ಬರೋದಾಗಿ ಹೇಳಿ ತಾಯಿ ಎಸ್ಕೇಪ್ ಆಗಿದ್ದಾಳೆ. ಮೌನಿಕಾ ಕೊಟ್ಟಿರುವ ನಂಬರ್ ಗೆ ಕರೆ ಮಾಡಿದ್ರೆ ರಾಂಗ್ ನಂಬರ್,ವಿಳಾಸವು ತಪ್ಪು ಎಂದು ತಿಳಿದು ಬಂದಿದೆ. ಅದಲ್ಲದೆ ತಾಯಿಯ ಆಶ್ರಯ ಸಿಗದೆ ಹೆಣ್ಣು ಶಿಶು ಆಸ್ಪತ್ರೆಯಲ್ಲಿ ನರಳಾಡಿದ್ದು, ಮಗು 1.5 ಕೆಜಿ ಇರೋದ್ರಿಂದ ಬೇರೆಯವರ ಎದೆ ಹಾಲು ಕುಡಿಸಿ ವೈದ್ಯರಿಂದ ಆರೈಕೆ ಮಾಡಲಾಗಿದೆ. ಇನ್ನೂ ಸಿಸಿ ಟಿವಿ ಆಧರಿಸಿ ಕ್ರೂರ ತಾಯಿಗಾಗಿ ಕೋಲಾರ ನಗರ ಪೊಲೀಸರು ಹುಡುಕಾಟ ನಡೆಸುತ್ತಿದ್ದು,
ಕೋಲಾರ ಜಿಲ್ಲಾಸ್ಪತ್ರೆಯ ಸಿಬ್ಬಂದಿಗಳ, ಸೆಕ್ಯೂರಿಟಿ ವೈಫಲ್ಯದಿಂದ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಆಗ ತಾನೇ ಹೆರಿಗೆ ಆಗಿರುವ ಮಹಿಳೆಯನ್ನು ವಾರ್ಡ್ ನಿಂದ ಹೊರಗೆ ಕಳುಹಿಸಿದ್ದು ಯಾರು? ಹೊರಗೆ ಟೀ ಕುಡಿದು ಬರ್ತೀನಿ ಅಂದಾಗ ಅನುಮತಿ ನೀಡಿದ್ದು ಯಾರು ? ಸೇರಿದಂತೆ ಏನೇ ನಡೆದರು, ಯಾರೇ ಬಂದು ಹೋದರು ಹೇಳೋರು, ಕೇಳೋರು ಇಲ್ಲ ಎಂಬ ಸಾಕಷ್ಟು ಪ್ರಶ್ನೆಗಳು ಕೋಲಾರ ಜಿಲ್ಲಾಸ್ಪತ್ರೆ ವಿರುದ್ಧ ಕೇಳಿ ಬಂದಿದೆ.