ಚಿತ್ರದುರ್ಗ : ಹೊಳಲ್ಕೆರೆ ಸಮೀಪದಲ್ಲಿ ಸಿನಿಮಾ ರೀತಿಯಲ್ಲಿ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸಾವನ್ನಪ್ಪಿದ್ದಾನೆ. ಮೃತನನ್ನು ಚಿತ್ರದುರ್ಗ ತಾಲೂಕಿನ ಅನ್ನೆಹಾಳ್ ವಡ್ಡರ ಹಟ್ಟಿ ಗ್ರಾಮದ ನಿವಾಸಿ ಮನು (25) ಎಂದು ಗುರುತಿಸಲಾಗಿದೆ.
ಮನು ಖಾಸಗಿ ಫೈನಾನ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದು ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿರುವ ವೇಳೆ ಈ ಒಂದು ಅಪಘಾತ ಸಂಭವಿಸಿದೆ. ಈ ಒಂದು ವಿಡಿಯೋ ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರಿನ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು, ಎಲ್ಲೆಡೆ ವೈರಲ್ ವೈರಲಾಗಿದೆ. ಕಾರಿನ ಚಾಲಕ ಅಜಾಗ್ರಕತೆಯಿಂದ ಬೈಕ್ ಚಾಲಕನಿಗೆ ಡಿಕ್ಕಿಹೊಡೆದಿದ್ದು, ಅಲ್ಲಿಂದ ಪರಾರಿಯಾಗಿದ್ದಾನೆ.
ಸ್ಥಳೀಯರು ಬೈಕ್ ಸವಾರರನ್ನು ಉಪಚರಿಸಿ ಹೊಳಲ್ಕೆರೆ ಆಸ್ಪತ್ರೆಗೆ ರವಾನಿಸಿದ್ದಾರೆ ಅಪಘಾತದಲ್ಲಿ ತೆಲೆಗೆ ಮತ್ತು ಬೆನ್ನುನ ಮೂಳೆಗೆ ಬಲವಾದ ಪಟ್ಟು ಬಿದ್ದಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಇನ್ನು ಹೊಳಲ್ಕೆರೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.