ವಿಜಯಪುರ : ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿಯನ್ನು ಜಾರಿ ಮಾಡಬೇಕೆಂದು ಸಂಸದ ರಮೇಶ್ ಜಿಗಿಜಿಣಿಗಿ ಆಗ್ರಹಿಸಿದರು. ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಸದಾಶಿವ ಆಯೋಗ ಒಳ ಮೀಸಲಾತಿ ಜಾರಿಯಾಗಬೇಕೆಂದು 2011-12 ರಲ್ಲಿ ವರದಿ ಸಲ್ಲಿಸಿದೆ. 2015-16 ರಲ್ಲಿ ಕಾಂತರಾಜ್ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಹಾಗಾದರೆ ಮೊದಲು ಸಲ್ಲಿಕೆಯಾದ ವರದಿ ಯಾವುದು ಎಂದು ಸರ್ಕಾರಕ್ಕೆ ಪ್ರಶ್ನಿಸಿದರು.ʼ
ಒಂದೆಡೆ ಅಹಿಂದ ನಾಯಕನೆಂದು ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ಒಳ ಮೀಸಲಾತಿ ಜಾರಿ ಮಾಡದ ಕಾರಣ ದಲಿತರು ಯಾಕೆ ಸಿದ್ಧರಾಮಯ್ಯನ ಹಿಂದೆ ಹೋಗಬೇಕು..? 1983 ರಲ್ಲಿ ಒಳ ಮೀಸಲಾತಿ ಆಗಬೇಕೆಂದು ಒತ್ತಾಯ ಮಾಡಿದವನೇ ನಾನು. ಇದು ಯಾರಿಗೂ ವಿಷಯ ಗೊತ್ತಿಲ್ಲ. ಒಳ ಮೀಸಲಾತಿ ಜಾರಿ ಆಗಲೇಬೇಕು ಇಲ್ಲದಿದ್ದರೆ ನಿಮ್ಮನ್ನು ಬಿಡಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಮುಂದೆ ನಮ್ಮ ಸರ್ಕಾರ ಬರಲಿ ಏನು ಮಾಡುತ್ತೇವೆ ಎಂದು ತೋರಿಸುತ್ತೇವೆ. ಒಳ ಮೀಸಲಾತಿಗಾಗಿ ಹೋರಾಟ ಮಾಡಿ ಎಷ್ಟೋ ಜನ ಪ್ರಾಣ ಬಿಟ್ಟರು. ಒಳ ಮೀಸಲಾತಿ ಜಾರಿ ಮಾಡಬೇಕು ಜಾರಿಯಾಗಲೇಬೇಕು ಜಾರಿ ಮಾಡುವವರಿಗೂ ಬಿಡಲ್ಲ ಎಂದರು.