ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದ ಪ್ರಸಾದ್ ಅದ್ಭುತ ಹಾಡುಗಾರ್ತಿ. ತಾವು ಹಾಡುವ ಹಾಡುಗಳನ್ನು ಶಿವಶ್ರೀ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಅಂತೇಯೇ ನಮ್ಮ ಮನೆಗೆ ಹೊಸ ಸದಸ್ಯಳ ಆಗಮನವಾಗಿದೆ ಎಂದು ತೇಜಸ್ವಿ ಸೂರ್ಯ ಸಾಮಾಜಿಕ ಸೋಷಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡಿದ್ದಾರೆ. ‘‘ಇಂದು, ಶುಭ ಆಷಾಢ ಶುಕ್ರವಾರದಂದು, ನಮ್ಮ ಕುಟುಂಬಕ್ಕೆ ಹೊಸ ಸದಸ್ಯಳನ್ನು ಸ್ವಾಗತಿಸಿದೆವು. ನಾವು ಅವಳನ್ನು ಗೌರಿ, ಲಕ್ಷ್ಮಿ, ರಾಧೆ ಹೀಗೆಲ್ಲ ಹೆಸರುಗಳಿಂದ ಕರೆಯುತ್ತಿದ್ದೇವೆ. ಅವಳು ತುಂಬಾ ದೈವಿಕಳಾಗಿದ್ದು, ಹಾಡನ್ನು ಇಷ್ಟಪಡುತ್ತಾಳೆ’’ ಎಂದು ಸೂರ್ಯ ಉಲ್ಲೇಖಿಸಿದ್ದಾರೆ. ಅಂದಹಾಗೆ, ತೇಜಸ್ವಿ ಸೂರ್ಯ ಮನೆಗೆ ಹೆಣ್ಣು ಕರುವೊಂದರ ಆಗಮನವಾಗಿದ್ದು, ಅದನ್ನು ತೇಜಸ್ವಿ ಅವರ ಪತ್ನಿ ಹಾಡು ಹಾಡಿ ಸ್ವಾಗತಿಸಿದ್ದಾರೆ. ಕರು ಹಾಡಿಗೆ ತಲೆಗೂಗಿದೆ.
Video: ಸಂಸದ ತೇಜಸ್ವಿ ಸೂರ್ಯ ಪತ್ನಿ ಹಾಡಿಗೆ ತಲೆದೂಗಿದ ಕರು!
By Author AIN