2025ರ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕಳಪೆ ಪ್ರದರ್ಶನ ತೋರಿದ್ದು, ಆಡಿರುವ 9 ಪಂದ್ಯದಲ್ಲಿ ಕೇವಲ 2 ಪಂದ್ಯದಲ್ಲಿ ಮಾತ್ರ ಗೆಲುವು ಕಂಡಿದೆ.
Gmail ಅಪ್ಲಿಕೇಶನ್’ನಲ್ಲಿ ಹೊಸ ರೀತಿಯ ಸ್ಕ್ಯಾಮ್ ಪತ್ತೆ..! ತಜ್ಞರು ಕೊಟ್ಟ ಎಚ್ಚರಿಕೆ ಏನೂ ಗೊತ್ತಾ..?
ನಿನ್ನೆಯ ಪಂದ್ಯದಲ್ಲಿ ಸಿಎಸ್‌ಕೆ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೂಡ 5 ವಿಕೆಟ್‌ಗಳಿಂದ ಸೋತಿತು. ಈ ಸೋಲಿನಿಂದಾಗಿ ತಂಡವು ಪ್ಲೇಆಫ್ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ. ಹೀನಾಯ ಸೋಲಿನಿಂದ ಸಿಎಸ್‌ಕೆ ನಾಯಕ ಎಂಎಸ್ ಧೋನಿ ತುಂಬಾ ನಿರಾಶೆಗೊಂಡಂತೆ ಕಂಡುಬಂದರು. ಯಾಕೆಂದರೆ ಧೋನಿ ಕೂಡ ತಮ್ಮ ತಂಡಕ್ಕೆ ಹೆಚ್ಚಿನ ಕೊಡುಗೆ ಒದಗಿಸಲು ಸಾಧ್ಯವಾಗಿಲ್ಲ. ಇದರಿಂದಾಗಿ ತಂಡವು ಸಾಕಷ್ಟು ನಷ್ಟ ಅನುಭವಿಸಿದೆ. ಸಿಎಸ್‌ಕೆ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ
ತಂಡದ ಸೋಲಿನ ನಂತರ, ನಾಯಕ ಧೋನಿ ಬೇಸರ ವ್ಯಕ್ತಪಡಿಸಿ, ತಮ್ಮ ತಂಡ ನಿರಂತರವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಲೇ ಇತ್ತು, ಇದರಿಂದಾಗಿ ಪಂದ್ಯದ ಮೇಲೆ ಹಿಡಿತ ಸಾಧಿಸುವುದು ಕಷ್ಟವಾಯಿತು ಎಂದು ಹೇಳಿದರು. ಮೊದಲ ಇನ್ನಿಂಗ್ಸ್ ಪಿಚ್ ಉತ್ತಮವಾಗಿದೆ ಎಂದು ನಾಯಕ ಬಣ್ಣಿಸಿದರೂ, ಚೆಂಡು ಹೆಚ್ಚು ತಿರುವು ಪಡೆಯುತ್ತಿರಲಿಲ್ಲವಾದ್ದರಿಂದ ಆ ಪಿಚ್‌ನಲ್ಲಿ 155 ರನ್‌ಗಳ ಸ್ಕೋರ್ ಸಮರ್ಥನೀಯವಲ್ಲ ಎಂದು ಒಪ್ಪಿಕೊಂಡರು. ‘ಹೌದು, 8 ರಿಂದ 10 ಓವರ್‌ಗಳ ನಂತರ ಪಿಚ್ ವೇಗದ ಬೌಲರ್‌ಗಳಿಗೆ ಸ್ವಲ್ಪ ಭಿನ್ನವಾಯಿತು, ಆದರೆ ನಾವು ನಮ್ಮ ಖಾತೆಗೆ ಇನ್ನೂ ಕೆಲವು ರನ್‌ಗಳನ್ನು ಸೇರಿಸಬೇಕಾಗಿತ್ತು’ ಎಂದು ಹೇಳಿದ್ದಾರೆ.
ಎರಡನೇ ಇನ್ನಿಂಗ್ಸ್‌ನಲ್ಲಿ ಸ್ಪಿನ್ನರ್‌ಗಳಿಗೆ ಸ್ವಲ್ಪ ಸಹಾಯ ಸಿಕ್ಕಿತು ಮತ್ತು ಅವರು ಉತ್ತಮ ಲೈನ್ ಮತ್ತು ಲೆಂತ್‌ನಲ್ಲಿ ಬೌಲಿಂಗ್ ಮಾಡಿದರು, ಆದರೆ ತಂಡವು ಸುಮಾರು 15-20 ರನ್ ಕಡಿಮೆ ಗಳಿಸಿತು ” ಎಂದು ಧೋನಿ ಹೇಳಿದರು