ಜೂನಿಯರ್ ಎನ್‌ಟಿಆರ್ ಹಾಗೂ ಪ್ರಶಾಂತ್ ನೀಲಾ ಕಾಂಬಿನೇಷನ್ ಸಿನಿಮಾದ ಬಿಡುಗಡಗೆ ಮುಹೂರ್ತ ಫಿಕ್ಸ್ ಆಗಿದೆ. ಸ್ಪೆಷಲ್ ಪೋಸ್ಟರ್ ಮೂಲಕ ಚಿತ್ರತಂಡ ರಿಲೀಸ್ ಡೇಟ್ ಘೋಷಿಸಿದೆ. ಮುಂದಿನ ವರ್ಷದ ಜೂನ್ 25ಕ್ಕೆ ನೀಲ್-ಎನ್‌ಟಿಆರ್ ಸಿನಿಮಾ ತೆರೆಗೆ ಬರಲಿದೆ.
ತಾರಕ್ ಬರ್ತಡೇಗೆ ಫಸ್ಟ್ ಗ್ಲಿಂಪ್ಸ್!
ಜೂನಿಯರ್ ಎನ್‌ಟಿಆರ್ ಬರ್ತಡೇಗೆ ಚಿತ್ರತಂಡ ಫಸ್ಟ್ ಗ್ಲಿಂಪ್ಸ್ ರಿಲೀಸ್ ಮಾಡೋದಾಗಿ ಘೋಷಿಸಿದೆ. ಮುಂದಿನ ತಿಂಗಳ 20ರಂದು ಈ ಚಿತ್ರದ ಮೊದಲ ಝಲಕ್ ರಿಲೀಸ್ ಆಗಿದೆ. ಸದ್ಯ ಚಿತ್ರತಂಡ ಟೈಟಲ್ ರಿವೀಲ್ ಮಾಡಿಲ್ಲ. ಆದ್ರೆ ಡ್ರ್ಯಾಗನ್ ಎಂಬ ಶೀರ್ಷಿಕೆಯನ್ನು ಫಿಕ್ಸ್ ಮಾಡಿದೆ ಎಂಬ ಸುದ್ದಿ ಇದೆ.
ಜ್ಯೂ.ಎನ್‌ಟಿಆರ್ ಹೊಸ ಚಿತ್ರದ ಚಿತ್ರೀಕರಣ ಉತ್ತರ ಕನ್ನಡದ ಕಡಲ ಕಿನಾರೆಯಲ್ಲಿ ನಡೆಯುತ್ತಿದೆ. ಕುಮುಟಾದ ರಾಮನಗಿಂಡಿ ಬೀಚ್‌ನಲ್ಲಿ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಚಿತ್ರಕ್ಕಾಗಿ ಯಂಗ್ ಟೈಗರ್ ಭರ್ಜರಿಯಾಗಿ ದೇಹ ದಂಡಿಸಿದ್ದಾರೆ. ಪಾತ್ರಕ್ಕಾಗಿ 5 ತಿಂಗಳಲ್ಲಿ ಬರೋಬ್ಬರಿ 18 ಕೆಜಿ ತೂಕ ಇಳಿಸಿಕೊಂಡಿದ್ದಾರಂತೆ.
ಈಗಾಗಲೇ ವಿಶಾಖಪಟ್ಟಣಂ ಹಾಗೂ ಹೈದರಾಬಾದ್‌ನಲ್ಲಿ ಒಂದೊಂದು ಹಂತದ ಚಿತ್ರೀಕರಣವನ್ನು ತಂಡ ಮುಗಿಸಿದೆ. ಇದೀಗ ಕುಮಟಾದಲ್ಲಿ ದೊಡ್ಡ ಶೆಡ್ಯೂಲ್ ಶೂಟಿಂಗ್ ನಡೆಯುತ್ತಿದೆ. ಹೆಚ್ಚು ಪ್ರಚಲಿತದಲ್ಲಿರದ ಸಮುದ್ರ ತೀರವನ್ನು ಆಯ್ಕೆ ಮಾಡಿಕೊಂಡು ಬೃಹತ್ ಸೆಟ್ ನಿರ್ಮಿಸಲಾಗಿದೆ. ದೊಡ್ಡ ಬಜೆಟ್ ಅಲ್ಲಿ ಮೂಡಿಬರುತ್ತಿರುವ ಚಿತ್ರ ಇದಾಗಿದ್ದು, ಮುಂದಿನ ವರ್ಷ ತೆರೆಗೆ ಬರಲಿದೆ. ಜ್ಯೂ.ಎನ್‌ಟಿಆರ್‌ಗೆ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಇದೆ.