ಯಾದಗಿರಿ :-ದೇಶದ ಹಲವೆಡೆ ಧರ್ಮದ ವಿಚಾರಕ್ಕೆ, ನಂಬಿಕೆಗಳ ವಿಚಾರಕ್ಕೆ ಜಗಳ, ಕಿತ್ತಾಟ, ಗಲಭೆಗಳು ನಡೆಯುತ್ತಿರುವ ಹೊತ್ತಲ್ಲಿ, ಕರ್ನಾಟಕ ರಾಜ್ಯದ ಹಲವೆಡೆ ಗ್ರಾಮಗಳ ಜನರು ಧಾರ್ಮಿಕ ಭಾವ್ಯಕ್ಯತೆ ಮೆರೆದು ಇಡೀ ದೇಶಕ್ಕೆ ಕೋಮು ಸೌಹಾರ್ದತೆಯ ಸಂದೇಶ ರವಾನಿಸಿದ್ದಾರೆ. ಮುಸ್ಲಿಮರೇ ಇಲ್ಲದ ಊರಲ್ಲೂ ಮೊಹರಂ ಹಬ್ಬ ಆಚರಣೆ ಮಾಡಿ ಧಾರ್ಮಿಕ ಭಾವೈಕ್ಯತೆಯ ಹಾಗೂ ಸಹೋದರತ್ವದ ಸಂದೇಶ ಸಾರಿದ್ದಾರೆ.
ಒಬಿಸಿ ಸಲಹಾ ಮಂಡಳಿಯ ಅಧ್ಯಕ್ಷರಾಗಿ ಸಿದ್ದರಾಮಯ್ಯ ನೇಮಕ ವಿಚಾರ: ವದಂತಿಗೆ ತೆರೆ ಎಳೆದ CM ಕಚೇರಿ!
ಮುಸ್ಲಿಮರೇ ಇಲ್ಲದ ಊರಲ್ಲಿ ಮೊಹರಂ ಆಚರಣೆ ಮಾಡಿದ್ದು, ಇದು ಎಲ್ಲರ ಗಮನ ಸೆಳೆದಿದೆ. ಜಿಲ್ಲೆಯ ಸುರಪುರ ತಾಲೂಕಿನ ತಳವಾರಗೇರಿ ಗ್ರಾಮದಲ್ಲಿ ಅಲೈ ಕುಣಿತದಿಂದ ಹಿಡಿದು ಅಲೈ ದೇವರು ಹಿಡಿಯುವ ಕೆಲಸವನ್ನ ಹಿಂದೂಗಳೇ ಮಾಡುತ್ತಾ ಬಂದಿದ್ದಾರೆ. ದಶಮಾನಗಳಿಂದ ಹಿಂದೂಗಳೇ ಮೊಹರಂ ಆಚರಣೆ ಮಾಡಿಕೊಂಡು ಬಂದಿದ್ದು. ಮುಸ್ಲಿಮರೇ ಇಲ್ಲದ ಈ ಊರಲ್ಲಿ ಹಿಂದೂಗಳು ಮೊಹರಂ ಹಬ್ಬ ಆಚರಣೆಗೆ ಪ್ರಮುಖ ಕಾರಣವೂ ಸಹ ಇದೆ.
ಶತಮಾನಗಳಿಂದ ಮೊಹರಂ ಹಬ್ಬವನ್ನ ನಾಡಿನಾದ್ಯಂತ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಆದ್ರೆ ಮುಸ್ಲಿಂ ಸಮುದಾಯದ ಪ್ರಮುಖ ಹಬ್ಬಗಳಲ್ಲಿ ಈ ಮೊಹರಂ ಹಬ್ಬ ಕೂಡ ಒಂದಾಗಿದೆ. ಹಸೇನ ಹುಸೇನರ ಕರ್ಬಾಲಕ್ಕೆ ಹೋಗಿದ್ದು ಅದೆ ದಿನ ಕೊನೆಯಾಗಿದ್ದಕ್ಕೆ ಶೋಕದಿಂದ ಮುಸ್ಲಿಮರು ಮೊಹರಂ ಹಬ್ಬವನ್ನ ಆಚರಿಸುತ್ತಾರೆ. ಆದ್ರೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಳವಾರಗೇರಿ ಗ್ರಾಮದಲ್ಲಿ ಮುಸ್ಲಿಮರ ಒಂದೆ ಒಂದು ಮನೆ ಇಲ್ಲದೆ ಇದ್ದರೂ ಹಿಂದೂಗಳು ಮೊಹರಂ ಆಚರಣೆ ಮಾಡ್ತಾಯಿದ್ದಾರೆ.
ಕಳೆದ ಹಲವು ದಶಕಗಳಿಂದ ಹಿಂದೂಗಳು ಮುಸ್ಲಿಮರಂತೆ ಮೊಹರಂ ಹಬ್ಬವನ್ನ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಮೊಹರಂ ಹಬ್ಬ ಒಂದು ತಿಂಗಳು ಇರುವ ಮೊದಲೇ ಗ್ರಾಮದ ಎಲ್ಲಾ ಹಿಂದೂಗಳ ತಮಗಾದಷ್ಟು ದೇಣಿಗೆಯನ್ನ ಹಾಕಿ ಮೊಹರಂ ಹಬ್ಬಕ್ಕೆ ತಯಾರಿ ಮಾಡಿಕೊಳ್ಳುತ್ತಾರೆ. ಅಲೈ ದೇವರು ಪ್ರತಿಷ್ಠಾಪನೆ ಮಾಡುವ ಆಶುರಖಾನವನ್ನ ಸ್ವಚ್ಚಗೊಳಿಸಿ ಸುಣ್ಣ ಬಣ್ಣವನ್ನ ಬಳಿದು ಸಿದ್ದ ಪಡಿಸಿಕೊಳ್ಳುತ್ತಾರೆ.. ಆರು ದಿನಗಳ ಕಾಲ ನಡೆಯುವ ಮೊಹರಂ ಹಬ್ಬದಲ್ಲಿ ಹಸೇನ್, ಹುಸೇನ್, ಲಾಲಬಾಸ್, ಕಾಸಿಂಸಾಬ್,ಹಾಗೂ ಮೌಲಾಲಿ ದೇವರ ಪಂಚೆಗಳನ್ನ ಪ್ರತಿಷ್ಠಾಪನೆ ಮಾಡುತ್ತಾರೆ.
ಗ್ರಾಮದಲ್ಲಿ ಆರು ದಿನಗಳ ಕಾಲ ನಡೆಯುವ ಮೊಹರಂ ಇವತ್ತು ಕೊನೆ ದಿನವಾಗಿದೆ. ಅಂದ್ರೆ ದೇವರ ಪಂಚೆಗಳನ್ನ ದಪನ್ ಮಾಡಲಾಗುತ್ತೆ. ಹೀಗಾಗಿ ದಪನ್ ಅಂತ ಕರೆಯಲಾಗುತ್ತೆ. ಇನ್ನು ಇವತ್ತಿನ ಎಲ್ಲಾ ಅಲೈ ದೇವರ ಪಂಚೆಗಳನ್ನ ಹಿಡಿದು ಹಿಂದೂಗಳು ಸವಾರಿ ಮಾಡ್ತಾರೆ. ರಮೇಶ್,ಶಾಂತಪ್ಪ,ಸಣ್ಣದೇವಪ್ಪ ಹಾಗೂ ಶಶಿಕುಮಾರಸ್ವಾಮಿ ದೇವರ ಪಂಜೆಗಳನ್ನ ಹಿಡಿದು ಸವಾರಿ ಮಾಡುತ್ತಾರೆ. ಇವತ್ತು ಕೊನೆ ದಿನವಾಗಿದ್ದರಿಂದ ಎಲ್ಲಾ ದೇವರುಗಳನ್ನ ಹಿಡಿದು ಸವಾರಿ ಮಾಡಲಾಗಿದೆ. ನೂರಾರು ಯುವಕರು ತಮಟೆ ಸದ್ದಿಗೆ ಮೊಹರಂ ಹೆಜ್ಜೆಗಳನ್ನ ಹಾಕುತ್ತಾರೆ.ಬಹಳಷ್ಟು ಜನ ಸಂಭ್ರಮದಿಂದ ಒಂದೆ ಬಣ್ಣ ಬಟ್ಟೆಗಳನ್ನ ಧರಿಸಿಕೊಂಡು ಅಲೈ ಕುಣಿಯುತ್ತಾರೆ.