ವಿಜಯಪುರ : ಮೊಹರಂ ಹಬ್ಬದ ಪ್ರಯುಕ್ತ ಆಟವಿ ದಿನದ ಆಚರಣೆ ವೇಳೆ ಲಾಲಸಾ ಅವಟಿ ನಿಗಿ ನಿಗಿ ಕೆಂಡದ ಮೇಲೆ ಕಂಬಳಿ ಹಾಸಿ ಕುಳಿತಿದಿದ್ದಾರೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದಲ್ಲಿ ಘಟನೆ ನಡೆದಿದೆ. ಮೊಹರಂ ಹಬ್ಬದ ಪ್ರಯುಕ್ತವಾಗಿ ನಿಗಿ ನಿಗಿ ಕೆಂಡದ ಮೇಲೆ ಹಾದು ಹೋಗುವ ಸಂಪ್ರದಾಯವಿದೆ. ಹಬ್ಬ ಆಚರಣೆ ವೇಳೆ ಹಲವರು ಕೆಂಡದ ಮೇಲೆ ಹಾದು ಹೋಗುವ ವಾಡಿಕೆ ಇದೆ. ಆದರೆ ಲಾಲಸಾ ಅವಟಿ ಎಂಬುವರು ಕೆಂಡದ ಮೇಲೆ ಕಂಬಳಿ ಹಾಸಿ ಕುಳಿತು ಭಕ್ತಿ ಪ್ರದರ್ಶನ ಮಾಡಿದ್ದಾರೆ