Close Menu
Ain Live News
    Facebook X (Twitter) Instagram YouTube
    Monday, June 23
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಮುನಿರತ್ನನ ಕರ್ಮಕಾಂಡದ ದಾಖಲೆಗಳನ್ನು ಕ್ಷೇತ್ರದ ಮನೆ ಮನೆಗೆ ಹಂಚಬೇಕಾಗುತ್ತದೆ: ಡಿ.ಕೆ. ಸುರೇಶ್ ಎಚ್ಚರಿಕೆ

    By AIN AuthorApril 22, 2025
    Share
    Facebook Twitter LinkedIn Pinterest Email
    Demo

    ಬೆಂಗಳೂರು : ಬಿಜೆಪಿ ಶಾಸಕ ಮುನಿರತ್ನ ಇದೇ ರೀತಿ ನಮ್ಮ ವಿರುದ್ಧ ಇಲ್ಲಸಲ್ಲದ್ದನ್ನು ಮಾತನಾಡುವುದು ಮುಂದುವರೆಸಿದರೆ, ಆತನ ವಿರುದ್ಧ ಇರುವ ಪ್ರಕರಣದ ಮಾಹಿತಿಗಳನ್ನು ರಾಜರಾಜೇಶ್ವರಿ ನಗರ ಕ್ಷೇತ್ರದ ಪ್ರತಿ ಮನೆ ಮನೆಗೆ ಹಂಚಬೇಕಾಗುತ್ತದೆ” ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಎಚ್ಚರಿಕೆ ನೀಡಿದರು.

     

    ಸದಾಶಿವನಗರ ನಿವಾಸದಲ್ಲಿ ಸುರೇಶ್ ಅವರು ಮಾಧ್ಯಮಗೋಷ್ಠಿ ಉದ್ದೇಶಿಸಿ ಮಂಗಳವಾರ ಮಾತನಾಡಿದ  ಅವರು, ಆತನ ಕರ್ಮಾಕಾಂಡಗಳನ್ನು ನಮ್ಮ ಕಾರ್ಯಕರ್ತರು ಕೇವಲ ಒಂದು ದಿನ ಹಂಚಿ ಸುಮ್ಮನಾಗುವುದಿಲ್ಲ, ನಿರಂತರವಾಗಿ ಹಂಚಲಿದ್ದಾರೆ. ಒಕ್ಕಲಿಗರ ಹೆಣ್ಣು ಮಕ್ಕಳನ್ನು ಮಂಚಕ್ಕೆ ಕರೆಯಲು ಆತನಿಗೆ ನಾಚಿಕೆಯಾಗುವುದಿಲ್ಲವೇ? ಮತಕ್ಕಾಗಿ ದಲಿತರನ್ನು ಬಳಸಿಕೊಂಡು ಅವರಿಗೆ ಅವಾಚ್ಯವಾಗಿ ನಿಂದಿಸುತ್ತಾನೆ. ಮಾಧ್ಯಮದವರ ಮುಂದೆ ಬಾಯಿಗೆ ಬಂದಂತೆ ಮಾತನಾಡುತ್ತಾನೆ. ನಾನು ಮಾಧ್ಯಮ ನಡೆಸುತ್ತಿದ್ದೇನೆ, ನನ್ನ ಬಗ್ಗೆಯೇ ಮಾತನಾಡುತ್ತೀರಾ, ನನ್ನ ಮೇಲೆ ಕೇಸ್ ಹಾಕುತ್ತೀರಾ ಎಂದು ಬೆದರಿಕೆ ಹಾಕುತ್ತಾನೆ” ಎಂದು ಹರಿಹಾಯ್ದರು.

    ಯುಪಿಎಸ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಕನ್ನಡಿಗರ ಸಾಧನೆ

    ಆಣೆ ಪ್ರಮಾಣದ ಸವಾಲಿನ ಬಗ್ಗೆ ಕೇಳಿದಾಗ, “ಆತ ಯಾರ ಮೇಲೆ ಆಣೆ ಪ್ರಮಾಣ ಮಾಡಿಲ್ಲ? ನೀವು ಹೋದರೆ ನಿಮ್ಮ ಮೇಲೂ ಆಣೆ ಪ್ರಮಾಣ ಮಾಡುತ್ತಾನೆ. ಆತ ಆಣೆ ಪ್ರಮಾಣ ಮಾಡುವುದರಲ್ಲಿ ನಿಪುಣ. ದೂರುದಾರರೇ ಆದಿ ಚುಂಚನಗಿರಿ ಮಠದಲ್ಲಿ ಆಣೆ ಪ್ರಮಾಣಕ್ಕೆ ಕರೆದಿದ್ದರಲ್ಲ. ಅಲ್ಲಿಗೆ ಹೋಗಿ ಆಣೆ ಪ್ರಮಾಣ ಮಾಡಬೇಕಿತ್ತು. ವಿಧಾನಸೌಧದ 344, 345ನೇ ಕೊಠಡಿಯಲ್ಲಿ ಅತ್ಯಾಚಾರ ಮಾಡಲಾಗಿದೆ ಎಂಬ ಹೇಳಿಕೆಯನ್ನು ಮಾಧ್ಯಮಗಳು ಮುಚ್ಚಿಟ್ಟುಕೊಂಡಿದ್ದೀರಲ್ಲಾ ಅದು ಸರಿಯೇ? ಈ ವಿಚಾರವನ್ನು ನೀವು ಸಾರ್ವಜನಿಕರಿಗೆ ತಿಳಿಸುತ್ತಿಲ್ಲವಲ್ಲ ಎಂಬ ವ್ಯಥೆಯಾಗುತ್ತಿದೆ. ವಿಧಾನಸೌಧ ಕಟ್ಟಿರುವುದು ಏಕೆ? ರಾಜ್ಯದ ಜನರ ಕಷ್ಟಸುಖ ನೋಡಲು, ರಾಜ್ಯದ ಹಿತ ಕಾಯಲು. ಹೀಗಾಗಿ ಅದು ರಾಜ್ಯದ ಹಿರಿಮೆಯ ಪ್ರತೀಕವಾಗಿದೆ. ಅಂತಹ ವಿಧಾನಸೌಧದಲ್ಲಿ ಈತ ಇಂತಹ ಹೀನ ಕೃತ್ಯ ಮಾಡಿದ್ದಾನೆ. ಈ ಕಾರಣಕ್ಕೆ ಡಿ.ಕೆ. ಶಿವಕುಮಾರ್ ಅವರು ಆತನನ್ನು ಚಂಗ್ಲು ಎಂದು ಕರೆದಿದ್ದಾರೆ. ಆತನನ್ನು ಜತೆಯಲ್ಲಿ ಇಟ್ಟುಕೊಳ್ಳಲು ಬಿಜೆಪಿಯವರಿಗೆ ನಾಚಿಕೆ ಇಲ್ಲವೇ? ಆತನ ವಿರುದ್ಧ ಕ್ರಮ ತೆಗೆದುಕೊಳ್ಳಲು ಗೊತ್ತಿಲ್ಲವೇ? ಹಾಗಿದ್ದರೆ ಇಂತಹ ಕೃತ್ಯಕ್ಕೆ ಅವರು ಬೆಂಬಲ ನೀಡುತ್ತಾರಾ?” ಎಂದು ವಾಗ್ದಾಳಿ ನಡೆಸಿದರು.

    Demo
    Share. Facebook Twitter LinkedIn Email WhatsApp

    Related Posts

    ಇ.ಡಿ ಫೇಸ್ ಮಾಡೋಕೆ ನಮ್ಮ ಕುಟುಂಬ ರೆಡಿ: DCM ಡಿಕೆ ಶಿವಕುಮಾರ್!

    June 23, 2025

    ಇಡಿ ತನಿಖೆಗೆ ಸಂಪೂರ್ಣ ಸಹಕಾರ ಕೊಟ್ಟಿದ್ದೇನೆ: ಡಿಕೆ ಸುರೇಶ್!

    June 23, 2025

    BCCI New Rules: ಬೆಂಗಳೂರು ಕಾಲ್ತುಳಿತ ಕೇಸ್: ಸಂಭ್ರಮಾಚರಣೆಗಳಿಗೆ ಕಠಿಣ ನಿಯಮ ಜಾರಿಗೊಳಿಸಿದ ಬಿಸಿಸಿಐ

    June 23, 2025

    ಸಿದ್ದರಾಮಯ್ಯ ಅವರಿಗೆ ಮಾನ ಮರ್ಯಾದೆ ಇದ್ದರೆ ತಕ್ಷಣ ರಾಜೀನಾಮೆ ಕೊಡಬೇಕು: ಛಲವಾದಿ ನಾರಾಯಣಸ್ವಾಮಿ

    June 23, 2025

    ಸಿಎಂ ಅವರೇ ಬಿ.ಆರ್.ಪಾಟೀಲ್ ಅವರ ಬಾಯಿ ಮುಚ್ಚಿಸುವ ಆತಂಕ ನಮಗಿದೆ: ಬಿಎಸ್ ಯಡಿಯೂರಪ್ಪ

    June 23, 2025

    ED ನನ್ನ ಮೇಲೂ ಕೇಸ್ ಹಾಕಿತ್ತು. ಆಮೇಲೆ ಏನಾಯಿತು?. ಯಾರೂ ನನ್ನ ರಕ್ಷಣೆಗೆ ಬಂದಿರಲಿಲ್ಲ: ಡಿ. ಕೆ. ಶಿವಕುಮಾರ್

    June 23, 2025

    ಈ ಸರ್ಕಾರ ರಾಜ್ಯವನ್ನು ಏಳಿಗೆ ಕಡೆಗೆ ತೆಗೆದುಕೊಂಡು ಹೋಗುವುದಿಲ್ಲ: ಕುಮಾರ್ ಬಂಗಾರಪ್ಪ

    June 23, 2025

    PM Kisan 20th Installment: ಈ ದಿನವೇ ನಿಮ್ಮ ಖಾತೆ ಸೇರಲಿದೆ 2000 ರೂಪಾಯಿ..! ಇಲ್ಲಿದೆ ಡಿಟೈಲ್ಸ್

    June 23, 2025

    ಐಶ್ವರ್ಯ ಗೌಡ ವಂಚನೆ ಪ್ರಕರಣ; ಇಡಿ ತನಿಖೆಗೆ ನನ್ನ ಸಂಪೂರ್ಣ ಸಹಕಾರ: ಬಮೂಲ್ ಅಧ್ಯಕ್ಷ ಡಿ ಕೆ ಸುರೇಶ್

    June 23, 2025

    BR Patil Audio: ಆಡಿಯೋ ವೈರಲ್ ಬೆನ್ನಲ್ಲೇ ಕೈ ಶಾಸಕನಿಗೆ ಸಿಎಂ ಬುಲಾವ್!

    June 23, 2025

    ಗೋಲ್ಡ್ ಬೆಲೆಯಲ್ಲಿ ಇಳಿಕೆ! ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ

    June 23, 2025

    ಬೆಂಗಳೂರಿನಲ್ಲಿ ಜುಲೈ 26-27ರಂದು ಕುಂದಾಪ್ರ ಕನ್ನಡ ಹಬ್ಬ ಆಚರಣೆ: ಇಬ್ಬರು ಸೆಲೆಬ್ರಿಟಿಗಳಿಗೆ ವಿಶೇಷ ಸನ್ಮಾನ

    June 23, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.