ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒಂಟಿ ಮಹಿಳೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿ ಹಲವು ಮಾಹಿತಿ ಲಭ್ಯವಾಗಿದೆ. ಕೊಲೆಯಾದ ಮಹಿಳೆಯನ್ನು ಬೀದರ್ ಮೂಲದ ಲತಾ ಎಂದು ಗುರುತಿಸಲಾಗಿದೆ.
ಎಸ್, ಬೆಂಗಳೂರಿನ ಕಾಟನ್ಪೇಟೆ ದರ್ಗಾ ರಸ್ತೆಯಲ್ಲಿ ಮನೆಯಲ್ಲಿ ಒಬ್ಬಂಟಿಯಾಗಿದ್ದ ಮಹಿಳೆಯನ್ನು ಬರ್ಬರವಾಗಿ ಹತ್ಯೆಗೈದು ಅಂದಾಜು 1 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿ ದುಷ್ಕರ್ಮಿಗಳು ಪರಾರಿಯಾಗಿದ್ದರು. ಲತಾ ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಕಾಟನ್ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಒಂದು ವರ್ಷದ ಹಿಂದೆ ಕಟ್ಟಡದಲ್ಲಿ ಲತಾ ಬಾಡಿಗೆಗೆ ಬಂದಿದ್ರು. ಮೃತ ಮಹಿಳೆ ಗಂಡ ಬೆಂಗಳೂರಿನಲ್ಲಿ ಹೋಲ್ ಸೇಲ್ ಬಟ್ಟೆ ವ್ಯಾಪಾರ ಮಾಡುತ್ತಿದ್ದರು. ಈ ದಂಪತಿಗಳು ತಮ್ಮ ಮಗಳ ಮದುವೆಗೆ ತಯಾರಿ ನಡೆಸ್ತಿದ್ದರು. ಮಗಳ ಮದುವೆಗೆ ಅಂತಾ ಚಿನ್ನಾಭರಣ, ನಗದು ಹಣ ಮನೆಯಲ್ಲಿಟ್ಟಿದ್ದರು. ಗಂಡ ಅಂಗಡಿಗೆ ಹೋಗಿದ್ರೆ ಮಗಳು ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಹೋಗಿದ್ಲು.. ಮಗ ಸ್ಕೂಲ್ ಗೆ ಹೋಗಿದ್ದ ಹಿನ್ನೆಲೆ ಮನೆಯಲ್ಲಿ ಲತಾ ಒಬ್ಬಳೇ ಇದ್ದಳು. ಈ ವೇಳೆ ಮನೆಗೆ ನುಗ್ಗಿ ಹತ್ಯೆ ಮಾಡಿ ಹಂತಕರು ಎಸ್ಕೇಪ್ ಅಗಿದ್ದಾರೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಮಧ್ಯಾಹ್ನ ಊಟಕ್ಕೆ ಅಂತಾ ಪತಿ ಪ್ರಕಾಶ್ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮನೆಯಲ್ಲಿದ್ದ 20 ಲಕ್ಷ ನಗದು ಹಣ ಹಾಗೂ ಚಿನ್ನಾಭರ ಸಮೇತ ಎಸ್ಕೇಪ್ ಆಗಿದ್ದಾರೆ. ಪರಿಚಯಸ್ತನಿಂದಲೇ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.