ಕನ್ನಡ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಜನ್ಯ ತಮ್ಮ ಬರ್ತಡೇಯನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ಕರುನಾಡ ಕಿಂಗ್ ಶಿವರಾಜ್‌ಕುಮಾರ್ ಮನೆಗೆ ದಂಪತಿ ಸಮೇತ ಅರ್ಜುನ್ ಜನ್ಯ ಭೇಟಿ ಕೊಟ್ಟಿದ್ದಾರೆ. ಈ ವೇಳೆ ಶಿವಣ್ಣ ದಂಪತಿ ಅರ್ಜುನ್ ಜನ್ಯ ಬರ್ತಡೇಯನ್ನು ಸರಳವಾಗಿ ಆಚರಿಸಿದ್ದಾರೆ.
ಶಿವಣ್ಣ ನಾಗವಾರ ನಿವಾಸದಲ್ಲಿ ಅರ್ಜುನ್ ಜನ್ಯ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆ ಜನ್ಯ ಪತ್ನಿ ಮತ್ತು ಮಗಳು ಸಾಥ್ ಕೊಟ್ಟಿದ್ದಾರೆ. 45 ಸಿನಿಮಾ ಮೂಲಕ ಸಂಗೀತ ನಿರ್ದೇಶಕರಾಗಿರುವ ಅರ್ಜುನ್ ಜನ್ಯ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ.
ಅರ್ಜುನ್ ಜನ್ಯ ನಿರ್ದೇಶನದ 45 ಸಿನಿಮಾದಲ್ಲಿ ಶಿವಣ್ಣ, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟಿಸಿದ್ದಾರೆ. ರಮೇಶ್ ರೆಡ್ಡಿ ನಿರ್ಮಾಣದಲ್ಲಿ ಈ ಚಿತ್ರ ಮೂಡಿಬಂದಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 45 ಸಿನಿಮಾ ತಯಾರಾಗಿದ್ದು, ಸತ್ಯ ಹೆಗಡೆ ಚಿತ್ರಕ್ಕ ಕ್ಯಾಮೆರಾ ಹಿಡಿದಿದ್ದಾರೆ. ಆಗಸ್ 15ಕ್ಕೆ 45 ಸಿನಿಮಾ ತೆರೆಗೆ ಬರಲಿದೆ.