ಮೀರತ್: ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದ ಸೌರಭ್ ರಜಪೂತ್ ಕೊಲೆ ಪ್ರಕರಣದಲ್ಲಿ ನಿತ್ಯ ಹಲವು ಹೊಸ ವಿಚಾರಗಳು ಬಹಿರಂಗಗೊಳ್ಳುತ್ತಿವೆ. ತನ್ನ ಪತಿಯನ್ನು ಕೊಂದ ಆರೋಪ ಹೊತ್ತಿರುವ ಮುಸ್ಕಾನ್ ಗರ್ಭಿಣಿಯಾಗಿರುವುದು ದೃಢಪಟ್ಟಿದೆ. ಹೌದು. ಕಳೆದ ಕೆಲ ದಿನಗಳಿಂದ ಜೈಲಿನಲ್ಲಿದ್ದ ಆರೋಪಿ ಮುಸ್ಕಾನ್ ಆರೋಗ್ಯ ತೀರಾ ಹದಗೆಟ್ಟಿತ್ತು. ಹೀಗಾಗಿ ಜೈಲಾಧಿಕಾರಿಗಳು ಮಹಿಳಾ ವೈದ್ಯರನ್ನ ಕರೆಸಿ, ತಪಾಸಣೆ ಮಾಡಿದ್ರು.
ಆಗ ಮುಸ್ಕಾನ್ ಗರ್ಭಿಣಿ ಎಂದು ವೈದ್ಯರು ತಿಳಿಸಿದ್ದರು. ಅದರಂತೆ ಸಹ ಪರೀಕ್ಷೆಗಾಗಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿತ್ತು. ಅಲ್ಟ್ರಾಸೌಂಡ್ ಸೇರಿದಂತೆ ವಿವಿಧ ರೀತಿಯ ಆರೋಗ್ಯ ತಪಾಸಣೆ ನಡೆಸಲಾಯಿತು. ಈ ವೇಳೆ ಮುಸ್ಕಾನ್ ಗರ್ಭ ಧರಿಸಿರುವುದು ಅಲ್ಟ್ರಾಸೌಂಡ್ ಟೆಸ್ಟ್ನಲ್ಲಿ ದೃಢಪಟ್ಟಿದೆ. ಸದ್ಯ ವೈದ್ಯರು ಹೆರಿಗೆಗೆ 4 ರಿಂದ 6 ವಾರಗಳ ಸಮಯ ನೀಡಿದ್ದಾರೆ. ಈ ಹಿನ್ನೆಲೆ ಜೈಲಿನಲ್ಲಿ ಗರ್ಭಿಣಿಯರಿಗೆ ನೀಡುವ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲು ಜೈಲಾಧಿಕಾರಿಗಳು ಮುಂದಾಗಿದ್ದಾರೆ.
ನೀವು ಸ್ವಿಮಿಂಗ್ ಮಾಡುತ್ತೀರಾ..? ಹಾಗಾದ್ರೆ ಮೊದಲು ಈ ವಿಷಯಗಳನ್ನು ತಿಳಿದುಕೊಳ್ಳಿ..!
ಇನ್ನೂ ಮುಸ್ಕಾನ್ ಗರ್ಭಿಯಾದ ವಿಷಯ ತಿಳಿದು ಪತ್ನಿಯಿಂದ ಕೊಲೆಯಾದ ಸೌರಭ್ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ. ಅವಳ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗು ಸೌರಭ್ನದ್ದಲ್ಲ, ಒಂದು ವೇಳೆ ಸೌರಭ್ನದ್ದೇ ಆಗಿದ್ದರೆ, ನಾವೇ ದತ್ತು ಪಡೆದು ಸಾಕುತ್ತೇವೆ. ಆದ್ರೆ ಆ ಮಗು ಸೌರಭ್ನದ್ದಾ ಅಥವಾ ಅವಳ ಪ್ರಿಯಕರ ಸಾಹಿಲ್ನದ್ದಾ ಎಂಬುದು ದೃಢವಾಗಬೇಕು. ಅದಕ್ಕಾಗಿ ಡಿಎನ್ಎ ಪರೀಕ್ಷೆ ನಡೆಬೇಕು ಎಂದು ಜೈಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಮಾರ್ಚ್ 4 ರಂದು ಮೀರತ್ನಲ್ಲಿ ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಜಪೂತ್ ಅವರನ್ನು ಕ್ರೂರವಾಗಿ ಹತ್ಯೆ ಮಾಡಲಾಗಿತ್ತು. ಅದೇ ದಿನ, ಆರೋಪಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರೇಮಿ ಸಾಹಿಲ್ ಶುಕ್ಲಾ ಸ್ವಿಫ್ಟ್ ಡಿಜೈರ್ ಕ್ಯಾಬ್ ಬುಕ್ ಮಾಡಿ ಶಿಮ್ಲಾ-ಮನಾಲಿಗೆ 15 ದಿನಗಳ ಪ್ರವಾಸಕ್ಕೆ ತೆರಳಿದರು.
ಇಬ್ಬರೂ 54,000 ರೂ.ಗೆ ಕಾರನ್ನು ಬುಕ್ ಮಾಡಿದ್ದರು. ಪ್ರವಾಸದ ಸಮಯದಲ್ಲಿ, ಮುಸ್ಕಾನ್ ಅವರಿಗೆ ವಾಟ್ಸಾಪ್ನಲ್ಲಿ ಸಂದೇಶ ಕಳುಹಿಸಿದರು, ಶಿಮ್ಲಾದ ಹೋಟೆಲ್ನಲ್ಲಿ ಸಾಹಿಲ್ನ ಹುಟ್ಟುಹಬ್ಬಕ್ಕೆ ಕೇಕ್ ತರಲು ಕೇಳಿದ್ದರು. ಸಾಹಿಲ್ ಪ್ರತಿದಿನ ಸಂಜೆ ಮದ್ಯಪಾನ ಮಾಡುತ್ತಿದ್ದನು ಆದರೆ ಮುಸ್ಕಾನ್ ಕುಡಿದಿದ್ದನ್ನು ಅವನು ಎಂದಿಗೂ ನೋಡಿಲ್ಲ. ಆದಾಗ್ಯೂ, ಅವರು ಮೀರತ್ಗೆ ಹಿಂತಿರುಗುತ್ತಿರುವಾಗ ಮುಸ್ಕಾನ್ ಮದ್ಯಪಾನ ಮಾಡುವುದನ್ನು ನೋಡಿದ್ದೇನೆ ಎಂದಿದ್ದಾರೆ.
ಮುಸ್ಕಾನ್ ಮತ್ತು ಸಾಹಿಲ್ ವಿಚಾರಣೆಯ ಸಮಯದಲ್ಲಿ ಮಾರ್ಚ್ 4 ರಂದು ಸೌರಭ್ನನ್ನು ಕೊಂದಿದ್ದಾಗಿ ಒಪ್ಪಿಕೊಂಡರು. ಕೊಲೆಯ ನಂತರ, ಅವರು ಅವರ ದೇಹವನ್ನು ತುಂಡುಗಳಾಗಿ ಕತ್ತರಿಸಿ, ಡ್ರಮ್ನಲ್ಲಿ ಇರಿಸಿ ಸಿಮೆಂಟ್ನಿಂದ ಮುಚ್ಚಿದರು. ಇದಾದ ನಂತರ ಇಬ್ಬರೂ ಶಿಮ್ಲಾ-ಮನಾಲಿಗೆ ಭೇಟಿ ನೀಡಲು ಹೋದರು. ಪ್ರಸ್ತುತ ಪೊಲೀಸರು ಆರೋಪಿಗಳಿಬ್ಬರನ್ನೂ ಬಂಧಿಸಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ.