ವಾಷಿಂಗ್ಟನ್: ಅಮೆರಿಕ ಮೂಲದ ಭಾರತೀಯ ಉದ್ಯಮಿಯೊಬ್ಬರು ತಮ್ಮ ಪತ್ನಿ ಮತ್ತು ಚಿಕ್ಕ ಮಗನನ್ನು ಕೊಂದು ನಂತರ ತಾವೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಏಪ್ರಿಲ್ 24 ರಂದು ವಾಷಿಂಗ್ಟನ್ನ ನ್ಯೂಕ್ಯಾಸಲ್ ಪ್ರದೇಶದಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಘಟನೆಯ ಸಮಯದಲ್ಲಿ ದಂಪತಿಗೆ ಮತ್ತೊಬ್ಬ ಮಗ ಮನೆಯಲ್ಲಿ ಇಲ್ಲದ ಕಾರಣ ಬದುಕುಳಿದಿದ್ದಾನೆ.
ಮೃತರನ್ನು ಹರ್ಷವರ್ಧನ ಎಸ್ ಕಿಕ್ಕೇರಿ (57), ಶ್ವೇತಾ ಪನ್ಯಂ (44) ಹಾಗೂ ದಂಪತಿಯ 14 ವರ್ಷದ ಮಗ ಎಂದು ಗುರುತಿಸಲಾಗಿದೆ. ಮೃತ ಬಾಲಕ ಹಾಗೂ ಇನ್ನೋರ್ವ ಮಗನ ಗುರುತನ್ನು ಪೊಲೀಸರು ಬಿಡುಗಡೆ ಮಾಡಿಲ್ಲ.
kshaya Tritiya 2025: ಅಕ್ಷಯ ತೃತೀಯದಂದೇ ಚಿನ್ನ ಖರೀದಿಸಲು ಕಾರಣವೇನು..? ಇಲ್ಲಿದೆ ಮಾಹಿತಿ
ಈ ಉಗ್ರ ಕೃತ್ಯಕ್ಕೆ ಕಾರಣ ಏನು ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ದಂಪತಿ ಅನ್ಯೋನ್ಯವಾಗಿದ್ದರು, ಅಲ್ಲದೇ ನೆರೆಹೊರೆಯವರ ಬಳಿ ಚೆನ್ನಾಗಿದ್ದರು ಎಂದು ತಿಳಿದುಬಂದಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಹರ್ಷವರ್ಧನ್, 2017ರಲ್ಲಿ ಅಮೆರಿಕದಿಂದ ಬಂದು, ಮೈಸೂರಿನಲ್ಲಿ ಹೋಲೋವರ್ಲ್ಡ್ ಕಂಪನಿ ಸ್ಥಾಪಿಸಿದ್ದರು. ಅವರ ಪತ್ನಿ ಕಂಪನಿಯ ಸಹ-ಸಂಸ್ಥಾಪಕರಾಗಿದ್ದರು. 2022ರ ಕೋವಿಡ್ -19 ಸಮಯದಲ್ಲಿ ಕಂಪನಿಯು ಬಂದ್ ಆಗಿತ್ತು. ಬಳಿಕ ಅವರು ಅಮೆರಿಕಕ್ಕೆ ತೆರಳಿದ್ದರು.
ಹರ್ಷವರ್ಧನ್ ಗಡಿ ಭದ್ರತೆ ವಿಚಾರದಲ್ಲಿ ರೋಬೋಟ್ಗಳನ್ನು ಬಳಸುವ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದರು. ಇನ್ನೂ ರೊಬೊಟಿಕ್ಸ್ನಲ್ಲಿ ಪರಿಣಿತರಾದ ಇವರು ಯುಎಸ್ನಲ್ಲಿ ಮೈಕ್ರೋಸಾಫ್ಟ್ಗಾಗಿಯೂ ಕೆಲಸ ಮಾಡಿದ್ದರು.