ಮಾಸ್ಕೋ: ರಷ್ಯಾದ ಅಧಿಕಾರಿಗಳು ನಿಗೂಢ ವೈರಸ್ ಹರಡುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ, ಈ ವೈರಸ್‌ಗೆ ತೀವ್ರ ಜ್ವರ ಮತ್ತು ರಕ್ತಸಿಕ್ತ ಕೆಮ್ಮಿನಂತಹ ಲಕ್ಷಣಗಳಿವೆ. ಸುದ್ದಿ ವರದಿಗಳ ಪ್ರಕಾರ, ಸೋಂಕಿತರು ಒಂದೇ ರೀತಿಯ ಲಕ್ಷಣಗಳನ್ನು ಅನುಭವಿಸುತ್ತಿದ್ದಾರೆ, ಏಕೆಂದರೆ ಅನಾರೋಗ್ಯವು ಜ್ವರದಂತೆ ದೇಹದ ನೋವಿನೊಂದಿಗೆ ಪ್ರಾರಂಭವಾಗಿ ವೇಗವಾಗಿ ಹದಗೆಡುತ್ತದೆ.
ಮಧುಮೇಹಿಗಳ ಗಮನಕ್ಕೆ: ಶುಗರ್ ಕಂಟ್ರೋಲ್ ಮಾಡಲು ಖಾಲಿ ಹೊಟ್ಟೆಗೆ ಈ ಒಣ ಹಣ್ಣು ಸೇವಿಸಿ!
ಹೌದು ಅಲ್ಲಿನ ಪ್ರಜೆಗಳು ತೀವ್ರ ಸ್ವರೂಪದ ಶ್ವಾಸಕೋಶ ಸಂಬಂಧಿ ರೋಗಗಳು, ದೀರ್ಘಕಾಲಿಕ ಜ್ವರದಿಂದ ಬಳಲುತ್ತಿದ್ದಾರೆ. ವೈರಸ್ ಕಾರಣದಿಂದ ಅವರು ಕೆಮ್ಮುವಾಗ ರಕ್ತ ಕೂಡ ಬೀಳುತ್ತಿದೆ. ಹಲವು ನಗರಗಳಲ್ಲಿ ಈ ವೈರಸ್ ತೀವ್ರ ವೇಗದಲ್ಲಿ ಹಬ್ಬುತ್ತಿದೆ. ವೈದ್ಯರು ಕೋವಿಡ್ ಟೆಸ್ಟ್ ಮಾಡಿದಾಗ ನೆಗೆಟಿವ್ ಎಂದು ಬಂದಿದೆ.
ಹೀಗಾಗಿ ಇದು ಹೊಸ ವೈರಸ್ ಆಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಈ ವರದಿಗಳನ್ನು ರಷ್ಯಾ ತಳ್ಳಿ ಹಾಕಿದೆ. ಮಿಸ್ಟರಿ ವೈರಸ್ ಕುರಿತ ವರದಿಗಳು ಆಧಾರರಹಿತ. ಅಂಥಾದ್ದೇನು ನಮ್ಮ ದೇಶದಲ್ಲಿ ಕಂಡುಬಂದಿಲ್ಲ ಎಂದು ರಷ್ಯಾ ತಿಳಿಸಿದೆ.