ನೆಲಮಂಗಲ:- ತಾಲ್ಲೂಕಿನಲ್ಲಿ ಈಚೆಗೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ರೌಡಿಶೀಟರ್‌ಗಳನ್ನು ಕರೆಸಿ ಪೊಲೀಸರಿಂದ ರೌಡಿ ಪರೇಡ್ ಮಾಡಲಾಯಿತು. ನೆಲಮಂಗಲ ಉಪ ವಿಭಾಗದ ಮಾದನಾಯಕನಹಳ್ಳಿ ಪೊಲೀಸರಿಂದ 60 ಕ್ಕೂ ಹೆಚ್ಚು ರೌಡಿಶೀಟರ್ ಪರೇಡ್ ಮಾಡಲಾಗಿದೆ.
ಹ್ಯಾಟ್ರಿಕ್ ಹೀರೋ ಶಿವಣ್ಣ ಮನೆಯಲ್ಲಿ ಒಂದೂವರೆ ಗಂಟೆ ಸಿಕ್ರೇಟ್ ಮೀಟಿಂಗ್: ಯಾರೆಲ್ಲಾ ಭಾಗಿಯಾಗಿದ್ದರು?
ಈ ವೇಳೆ ಸಾಕಷ್ಟು ಪ್ರಕರಣದಲ್ಲಿ ಭಾಗಿಯಾಗಿದ್ದ ರೌಡಿಶೀಟರಗಳ ಮಾಹಿತಿ ಸಂಗ್ರಹಿಸಲಾಗಿದೆ. ಇನ್ನೂ ನೆಲಮಂಗಲದ ಬೆತ್ತನಗೆರೆ ಶಂಕರ, ಬಂಡೆ ಮಂಜ ಸೇರಿದಂತೆ ಹಲವರು ಗೈರಾಗಿದ್ಜರು. ರೌಡಿಶೀಟರಗಳ ಮಾಹಿತಿ ಜೊತೆಗೆ ಅವರು ಚಲನವಲನಗಳ ಪರಿಶೀಲನೆ ಮಾಡುತ್ತಿದ್ದಾರೆ. ಸನ್ನಡತೆಯ ಆಧಾರದ ಮೇಲೆ ಕೆಲ ರೌಡಿಶೀಟರ್ ಪಟ್ಟಿ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗಿದೆ.
ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ರೌಡಿಶೀಟರಗಳ ಪಟ್ಟಿ ಪರಿಶೀಲನೆ ಮಾಡಲಾಗಿದೆ. 10 ವರ್ಷದಿಂದ ಯಾವುದೇ ಪ್ರಕರಣದಲ್ಲಿ ಭಾಗಿಯಾಗದವರನ್ನ ಕೈಬಿಡುವ ಬಗ್ಗೆ ಪರಿಶೀಲನೆ ಮಾಡಮಾಡಲಾಗಿದೆ. ಭಾಗಿಯಾದವರ ಹಿನ್ನೆಲೆ ಮಾಹಿತಿ ಪಡೆದು ಪೊಲೀಸರು ಕಳುಹಿಸಿದ್ದಾರೆ.