ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ರಾಜಮೌಳಿ ಜೊತೆ ಹೊಸ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಪ್ಯಾನ್ ವರ್ಲ್ಡ್ ಲೆವೆಲ್ ನಲ್ಲಿ ಈ ಪ್ರಾಜೆಕ್ಟ್ ತಯಾರಾಗುತ್ತಿದೆ. ಈ ಸಿನಿಮಾದಲ್ಲಿ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಕೂಡ ನಟಿಸುತ್ತಿದ್ದಾರೆ. ಹೀಗಾಗಿ ಮಹೇಶ್ ಬಾಬು ಫ್ಯಾಮಿಲಿ ಮತ್ತು ಪ್ರಿಯಾಂಕಾ ಫ್ಯಾಮಿಲಿ ನಡುವೆ ಆತ್ಮೀಯತೆ ಹುಟ್ಟಿಕೊಂಡಿದೆ.
ಇತ್ತೀಚೆಗೆ ಇಡೀ ಪ್ರಿನ್ಸ್ ಕುಟುಂಬ ರೋಮ್ ಗೆ ಭೇಟಿ ನೀಡಿತ್ತು. ಈ ವೇಳೆ ಪ್ರಿಯಾಂಕಾ ಪತಿ ನಿಕ್ ಜೋನಸ್ ಕಾನ್ಸರ್ಟ್ನಲ್ಲಿ ಮಹೇಶ್ ಬಾಬು ಫ್ಯಾಮಿಲಿ ಭಾಗವಹಿಸಿದೆ.
ನಿಕ್ ಸಂಗೀತ ಕಾರ್ಯಕ್ರಮದಲ್ಲಿ ಸಿತಾರಾ, ನಮ್ರತಾ ಹಾಗೂ ಗೌತಮ್ ಪಾಲ್ಗೊಂಡಿದ್ದಾರೆ. ಈ ಸಂದರ್ಭದ ಫೋಟೋಗಳನ್ನು ನಮ್ರತಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ಪ್ರಿಯಾಂಕಾಗೆ ಧನ್ಯವಾದ ತಿಳಿಸಿದ್ದಾರೆ.ಪ್ರಿಯಾಂಕಾ ಚೋಪ್ರಾ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಅಮೆರಿಕದ ಖ್ಯಾತ ಪಾಪ್ ಸಿಂಗರ್ ನಿಕ್ ಜೋನಸ್ ಅವರು ಸಂಗೀತ ಕಾರ್ಯಕ್ರಮದ ಬಳಿಕ ಪ್ರಿನ್ಸ್ ಕುಟುಂಬ ಅವರ ಜೊತೆ ಫೋಟೋಗೆ ಪೋಸ್ ಕೊಟ್ಟಿದೆ.
ಪ್ರಿನ್ಸ್ ಫ್ಯಾಮಿಲಿ ಜೊತೆ ಪ್ರಿಯಾಂಕಾ ಪತಿ..ಹಾಲಿವುಡ್ ಸಿಂಗರ್ಗೆ ಟಾಲಿವುಡ್ ನಂಟು ಬೆಳೆದಿದ್ದೇಗೆ?
By Author AIN