ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಬಾಲಕೃಷ್ಣ ಸಿನಿರಂಗದಲ್ಲಿ 50 ವರ್ಷ ಕಳೆದಿದ್ದಾರೆ. ತಮ್ಮ ವಿಭಿನ್ನ ಮ್ಯಾರಿಸಂ, ಆಕ್ಟಿಂಗ್ ಮೂಲಕ ಗಮನಸೆಳೆದಿರುವ ನಟ ಆಗಾಗ ಟ್ರೋಲ್ ಆಗ್ತಾನೆ ಇರ್ತಾರೆ. ಬಿಲ್ಡನ್ ಬಾಲಯ್ಯ ಅಂತಾನೇ ಕರೆಸಿಕೊಳ್ಳುವ ಅವರು ಇತ್ತೀಚೆಗಷ್ಟೇ ಅದ್ಧೂರಿಯಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕೇಕ್ ಕತ್ತಿರುವ ವೇಳೆ ಚಾಕು ಹಿಡಿದು ಸ್ಟೈಲ್ ಮಾಡಿದ್ದ ಬಾಲಯ್ಯ ಆ ಬಳಿಕ ವೇದಿಕೆ ಮೇಲೆ ಏರಿದ್ದರು. ಈ ವೇಳೆ ಬಾಲಯ್ಯನ ಮೀಸೆ ಉದುರಿದೆ.
ಬಾಲಯ್ಯ ರೀಲ್ ಹಾಗೂ ರಿಯಲ್ ನಲ್ಲಿ ಮೀಸೆ ತಿರುವ ಗತ್ತು ಗೈರತ್ತಿಗೆ ಅವರೇ ಸರಿಸಾಟಿ. ಇಂತಹ ಬಾಲಯ್ಯ ಮೊನ್ನೆ ತಮ್ಮ ಬರ್ತಡೇ ಸಂದರ್ಭದಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ರೋಷಾವೇಷದಲ್ಲಿ ಭಾಷಣ ಮಾಡುವಾಗ ಮೀಸೆ ಉದುರಿದ ಪ್ರಸಂಗ ನಡೆದಿದೆ. ವೇದಿಕೆ ಮೇಲೆ ಬಾಲಯ್ಯ ಗಮ್ ಕೊಡ್ರೋ, ಗಮ್ ಕೊಡ್ರೋ ಎಂದು ಗೋಗರೆದಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.
ಬಾಲಕೃಷ್ಣ ಅವರಿಗೆ ಸದ್ಯ ವಯಸ್ಸು 65. ವಯಸ್ಸಾದ್ರೂ ಬಾಲಯ್ಯ ಯುವ ನಟಿಯೊಂದಿಗೆ ಭರ್ಜರಿಯಾಗಿ ಕುಣಿಯುತ್ತಾರೆ. ಕೆಲವೊಮ್ಮೆ ಸಿಕ್ಕಾಪಟ್ಟೆ ಟ್ರೋಲ್ ಆಗ್ತಾರೆ. ಆದರೂ ಬಾಲಯ್ಯ ತಮ್ಮ ಆಟ್ಟಿಟ್ಯೂಡ್ ಕಡಿಮೆ ಮಾಡಿಕೊಳ್ಳೋದಿಲ್ಲ. ನಾನು ಇರೋದು ಹೀಗೆ ಅಂತಾ ನಕ್ಕು ಮುಂದೆ ಸಾಗ್ತಾರೆ.