ತವರಿನಲ್ಲಿ ಭಾರತೀಯ ಮಹಿಳಾ ತಂಡದ ವಿರುದ್ಧ ಸಣ್ಣ ಸರಣಿ ಆಡುತ್ತಿರುವ ಇಂಗ್ಲೆಂಡ್ ತಂಡಕ್ಕೆ ಇದು ದೊಡ್ಡ ಹೊಡೆತವಾಗಿದೆ. ಸರಣಿಯನ್ನು ಕಳೆದುಕೊಂಡಿರುವ ತಂಡಕ್ಕೆ ನಾಯಕಿ ನ್ಯಾಟ್ ಸಿವರ್-ಬ್ರಂಟ್ ಅವರ ಕೊರತೆ ಎದುರಾಗಿದೆ.
ಎಡ ತೊಡೆಸಂದು ಗಾಯದಿಂದಾಗಿ ಅವರು ಮೂರನೇ ಟಿ20ಐ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಸ್ಕ್ಯಾನಿಂಗ್ ನಂತರ, ಬ್ರಂಟ್ಗೆ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ. ಮುಂದಿನ ಎರಡು ಪಂದ್ಯಗಳನ್ನು ಟ್ಯಾಮಿ ಬ್ಯೂಮಾಂಟ್ ಮುನ್ನಡೆಸಲಿದ್ದಾರೆ.
ಕುಂಬಳಕಾಯಿ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಕಣ್ಣು, ಚರ್ಮ, ಕೂದಲು ಎಲ್ಲದಕ್ಕೂ ಮದ್ದು!
‘ಸ್ಕ್ಯಾನಿಂಗ್ ನಂತರ ಉಳಿದ ಎರಡು ಟಿ20ಐಗಳಿಂದ ಬ್ರಂಟ್ ಹೊರಗುಳಿದಿದ್ದಾರೆ. ನಾಲ್ಕನೇ ಮತ್ತು ಐದನೇ ಪಂದ್ಯಗಳನ್ನು ಮುನ್ನಡೆಸಿದ್ದ ಬ್ಯೂಮಾಂಟ್ ಕೊನೆಯ ಎರಡು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.
ಬ್ರಂಟ್ ಬದಲಿಗೆ ಮಾಯಾ ಬುಚಿಯರ್ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ. ಆದಾಗ್ಯೂ, ಏಕದಿನ ಸರಣಿಗೂ ಮುನ್ನ ಬ್ರಂಟ್ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ’ ಎಂದು ಇಂಗ್ಲೆಂಡ್ ಮಂಡಳಿ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.