Close Menu
Ain Live News
    Facebook X (Twitter) Instagram YouTube
    Sunday, May 11
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಐಶ್ವರ್ಯಾ ರೈ ಅವರನ್ನು ಹೊರಗಿನವರು ಎಂದ ನವ್ಯಾ ನವೇಲಿ: ಕಾರಣವೇನು ಗೊತ್ತಾ?

    By Author AINApril 2, 2024
    Share
    Facebook Twitter LinkedIn Pinterest Email
    Demo

    ಬಾಲಿವುಡ್ ನಟಿ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಮಧ್ಯೆ ಎಲ್ಲವು ಸರಿ ಇಲ್ಲ. ಈ ಜೋಡಿ ಡಿವೋರ್ಸ್ ಪಡೆದುಕೊಳ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ತಮ್ಮ ಕುಟುಂಬದ ಮುದ್ದಿನ ಸೊಸೆಯ ಬಗ್ಗೆ ಈಗಾಗಲೇ ನಟ ಅಮಿತಾಬ್ ಬಚ್ಚನ್ ಹಾಗೂ ಜಯಾ ಬಚ್ಚನ್ ಹಾಡಿ ಹೊಗಳಿದ್ದಾರೆ. ಆದರೆ ಅಮಿತಾಭ್​ ಬಚ್ಚನ್​ ಅವರ ಪುತ್ರಿ ಶ್ವೇತಾ ಅವರಿಗೆ ಐಶ್ವರ್ಯ ರೈ ಕಂಡರೆ ಹೊಟ್ಟೆ ಉರಿ ಎಂಬ ಸುದ್ದಿ ಸಾಕಷ್ಟು ಸಮಯದಿಂದ ಕೇಳಿ ಬಂದಿದೆ. ಅಭಿಷೇಕ್ ಬಚ್ಚನ್ ಅವರು ಐಶ್ವರ್ಯಾರನ್ನು ಮದುವೆಯಾಗುವುದನ್ನು ಶ್ವೇತಾ ಬಯಸಿರಲಿಲ್ಲವಂತೆ.  ಅಭಿಷೇಕ್ ಅವರು ತಮ್ಮ  ಮಾಜಿ ಗೆಳತಿ ಕರಿಷ್ಮಾ ಕಪೂರ್ ಅವರನ್ನು ಮದುವೆಯಾಗಬೇಕು ಎನ್ನುವುದು ಅವರ ಆಸೆಯಾಗಿತ್ತು. ಇವರಿಬ್ಬರ ಸಂಬಂಧ ಅವರಿಗೆ ಇಷ್ಟವಿತ್ತು. ಏಕೆಂದರೆ  ಶ್ವೇತಾ ಯಾವಾಗಲೂ ಕರಿಷ್ಮಾ ಅವರನ್ನು ಪರಿಪೂರ್ಣ ಬಚ್ಚನ್ ಬಹು ಎಂದು ಪರಿಗಣಿಸುತ್ತಿದ್ದರು. ಅಭಿಷೇಕ್ ಕಪೂರ್ ಕುಟುಂಬದ ಅಳಿಯನಾಗಬೇಕೆಂದು ಅವರು ಬಯಸಿದ್ದರು. ಅಭಿಷೇಕ್​ ಅವರು ಐಶ್ವರ್ಯರನ್ನು ಮದುವೆಯಾಗುವ ಪಟ್ಟು ಹಿಡಿದಾಗ,  ಆ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನೆಯವರ ಮೇಲೂ ಶ್ವೇತಾ ಸಾಕಷ್ಟು ಒತ್ತಡ ಹೇರಿದ್ದರು ಎನ್ನಲಾಗಿದೆ. ಅದೇ ಕಾರಣಕ್ಕೆ ಐಶ್ವರ್ಯರನ್ನು ಕಂಡರೆ ಅವರಿಗೆ ಆಗಿ ಬರುವುದಿಲ್ಲ ಎನ್ನಲಾಗುತ್ತಿದೆ.

    ಅಮಿತಾಭ್​ ಬಚ್ಚನ್​ ಮೊಮ್ಮಗಳು, ಶ್ವೇತಾ ಅವರ ಪುತ್ರಿ ನವ್ಯಾ ನವೇಲಿ ಕಾಸ್ಮೆಟಿಕ್ ಬ್ರಾಂಡ್ L’Oréal ಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದು, ಅದರ ವಿಡಿಯೋಗಳನ್ನು ಐಶ್ವರ್ಯ ರೈ ಅವರನ್ನು ಬಿಟ್ಟು ಉಳಿದವರಿಗೆಲ್ಲಾ ಟ್ಯಾಗ್​ ಮಾಡಿದ್ದರು! ಆಗಲೇ ನವ್ಯಾಗೂ ಐಶ್ವರ್ಯ ಅವರನ್ನು ಕಂಡರೆ ಆಗುತ್ತಿಲ್ಲ ಎಂದೇ ಹೇಳಲಾಗಿತ್ತು. ಇದಕ್ಕೀಗ ಪುಷ್ಟಿ ಕೊಡಲು ಎಂಬಂತೆ ಇನ್ನೊಂದು ಹೇಳಿಕೆ ನೀಡಿದ್ದು, ಇದೀಗ ಸಕತ್​ ಸದ್ದು ಮಾಡುತ್ತಿದೆ.

    ನವ್ಯಾ ‘ವಾಟ್ ದಿ ಹೆಲ್ ನವ್ಯಾ’ ಹೆಸರಿನ ಪಾಡ್​ಕಾಸ್ಟ್ ಆರಂಭಿಸಿದ್ದು, ಅದರಲ್ಲಿ ಅತ್ತೆ ಐಶ್ವರ್ಯ​ ವಿರುದ್ಧದ ಹೇಳಿಕೆ ನೀಡಿದ್ದಾರೆ. ಈ  ಷೋಗೆ ನವ್ಯಾ ತಾಯಿ ಶ್ವೇತಾ ಹಾಗೂ ಅಜ್ಜಿ ಜಯಾ ಬಚ್ಚನ್​ ಆಗಮಿಸಿದ್ದರು. ಈ ವೇಳೆ ನಡೆದ ಮಾತುಕತೆಯಲ್ಲಿ,  ಷೋಗೆ ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್ ಅಥವಾ ಅಮಿತಾಭ್ ಬಚ್ಚನ್ ಅವರನ್ನು ಕರೆಸುವ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಇದು ಎರಡನೇ ಸೀಸನ್ ಬಹುಶಃ ಮೂರನೇ ಸೀಸನ್ ಇದ್ದರೆ ನಾನು ಅವವರನ್ನು ಆಮಂತ್ರಿಸುತ್ತೇನೆ. ಕೇವಲ ಕುಟುಂಬದವರು ಮಾತ್ರವಲ್ಲ ಕುಟುಂಬದ ಹೊರಗಿನವರಿಗೂ ಆಮಂತ್ರಣ ನೀಡುತ್ತೇನೆ. ಅದು ಸಖತ್ ಫನ್ ಆಗಿರುತ್ತದೆ. ಬೇರೆ ಬೇರೆ ಕ್ಷೇತ್ರದವರ ಅನುಭವ ತಿಳಿದುಕೊಳ್ಳಲು ಖುಷಿ ಇದೆ’ ಎಂದಿದ್ದಾರೆ.

    ನವ್ಯಾ ಸಹಜವಾಗಿಯೇ ಹೇಳಿದ್ದರು ಅದು ಬೇರೆಯದ್ದೇ ರೂಪ ಪಡೆದುಕೊಳ್ಳುತ್ತಿದೆ. ಹೊರಗಿನವರು ಎಂದರೆ ನವ್ಯಾ ಹೇಳಿರುವುದು ಐಶ್ವರ್ಯ ರೈ ಕುರಿತು ಎನ್ನಲಾಗುತ್ತಿದೆ. ಈ ಮೊದಲು ನಡೆದಿರುವ ಹಲವಾರು ಘಟನೆಗಳನ್ನು ನೆನಪಿಸಿಕೊಂಡಿರುವ ಐಶ್​ ಫ್ಯಾನ್ಸ್​, ನವ್ಯಾ ಹೇಳಿರುವುದು ಇದೇ ಉದ್ದೇಶಕ್ಕೆ ಎನ್ನುತ್ತಿದ್ದಾರೆ.

    Post Views: 1

    Demo
    Share. Facebook Twitter LinkedIn Email WhatsApp

    Related Posts

    Vikram Gaikwad: ಬಾಲಿವುಡ್‌ ಖ್ಯಾತ ಮೇಕಪ್ ಕಲಾವಿದ ವಿಕ್ರಮ್ ಗಾಯಕ್ವಾಡ್ ನಿಧನ

    May 11, 2025

    Mrunal Thakur-Sumanth: ಮೃಣಾಲ್ ಠಾಕೂರ್ ಜತೆ ಮದುವೆ ವಿಚಾರ: ಕೊನೆಗೂ ಕ್ಲಾರಿಟಿ ಕೊಟ್ಟ ನಟ ಸುಮಂತ್‌

    May 11, 2025

    Operation Sindoor: ‘ಆಪರೇಷನ್ ಸಿಂಧೂರ’ ಸಿನಿಮಾ ಪೋಸ್ಟರ್ ರಿಲೀಸ್: ಕ್ಷಮೆ ಕೇಳಿದ ನಿರ್ದೇಶಕ..! ಯಾಕೆ ಗೊತ್ತಾ..?

    May 11, 2025

    ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟ ಚಂದನ್‌ ಶೆಟ್ಟಿ..ಮತ್ತೊಂದು ಮದುವೆಗೆ ರೆಡಿ!

    May 10, 2025

    ನಿರಂತರ ನಿಂದನೆ, ಟೀಕೆ-ಟಿಪ್ಪಣೆಗಳನ್ನು ಸಮಂತಾ ನಿಭಾಯಿಸುವುದು ಹೇಗೆ?

    May 10, 2025

    ಸಂಚಿತ್ ಹೆಗ್ಡೆಗೆ ಡಿಮ್ಯಾಂಡೋ ಡಿಮ್ಯಾಂಡ್… ʼಒನ್ ಅಂಡ್ ಓನ್ಲಿ ಸುಖʼ ಎಂದ ಸಂಚಿತ್!

    May 10, 2025

    ಪತಿ ಪರಸ್ತ್ರೀ ಜೊತೆ ಓಡಾಟ..ಮಾಜಿ ಪತ್ನಿ ಎನ್ನಬೇಡಿ ಎಂದ ನಟ ರವಿ ಮೋಹನ್‌ ಪತ್ನಿ..ಆರತಿ ಬೆಂಬಲಕ್ಕೆ ನಿಂತ ನಟಿಯರು!

    May 10, 2025

    ಕಿಚ್ಚನಿಂದ ಪ್ರಧಾನಿಗೆ ಪತ್ರ…ಜೈ ಹಿಂದ್. ಜೈ ಕರ್ನಾಟಕ. ಜೈ ಭಾರತ ಎಂದ ಸುದೀಪ್! ‌

    May 10, 2025

    ʼಆಪರೇಷನ್‌ ಸಿಂಧೂರʼ ಸಿನಿಮಾದ ಪೋಸ್ಟರ್‌ ಬಿಡುಗಡೆ..ಯಾರು ಹೀರೋ?

    May 10, 2025

    ಸ್ಟಾರ್ ಸುವರ್ಣದಲ್ಲಿ ಹೊಚ್ಚ ಹೊಸ ಧಾರಾವಾಹಿ..ಸೀರಿಯಲ್‌ನತ್ತ ಬಹುಭಾಷಾ ನಟ ಸುಮನ್

    May 10, 2025

    ಹೊಸ ಮನೆ ಗೃಹಪ್ರವೇಶದ ಸಂಭ್ರಮದಲ್ಲಿ ಅಣ್ಣಯ್ಯ ಸೀರಿಯಲ್‌ ನಟಿ ನಿಶಾ!

    May 10, 2025

    ರಜನಿ ಜೈಲರ್-2ಗಾಗಿ ಬಾಲಯ್ಯ ಜೇಬಿಗಿಳಿಸಿಕೊಂಡಿದ್ದು ಎಷ್ಟು ಕೋಟಿ ಗೊತ್ತಾ?

    May 10, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.