ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ನಯನ್‌ತಾರಾ ಬಹುಬೇಡಿಕೆ ನಟಿ. ಶಾರುಖ್ ಖಾನ್ ಜವಾನ್ ಮೂಲಕ ಬಾಲಿವುಡ್‌ಗೂ ಅಡಿ ಇಟ್ಟಿರುವ ಲೇಡಿ ಸೂಪರ್ ಸ್ಟಾರ್ ಸಂಭಾವನೆ ವಿಚಾರದಲ್ಲಿ ಸುದ್ದಿಯಾಗಿದ್ದಾರೆ.
ದಕ್ಷಿಣ ಭಾರತ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಂಬರ್ 1 ನಟಿ ಎಂಬ ಕೀರ್ತಿ ನಯನ್‌ತಾರಾಗೆ ಸಿಕ್ಕಿದ್ದು, ಅಭಿಮಾನಿಗಳು ಖುಷಿಯಾಗಿದ್ದಾರೆ. ಆದರೆ ಇದು ನಿರ್ಮಾಪಕರಿಗೆ ಹೊಡೆತವೇ ಸರಿ. ನಯನ್ ತಾರಾ ಮಹಿಳಾ ಪ್ರಧಾನ ಸಿನಿಮಾಗಳ ಮೂಲಕವೇ ಖ್ಯಾತಿ ಗಳಿಸಿದವರು. ವಿಭಿನ್ನ ಪಾತ್ರಗಳ ಪೋಷಣೆ ಮಾಡುತ್ತಾ ಬಂದಿರುವ ಸೂಪರ್ ಬ್ಯೂಟಿ ಜವಾನ್ ಚಿತ್ರಕ್ಕೆ ಬರೋಬ್ಬರಿ 10 ಕೋಟಿ ಹಣ ಪಡೆದಿದ್ದರಂತೆ. ಇದೀಗ ಅದರ ದುಪ್ಪಟ್ಟು ಸಂಭಾವನೆ ಪಡೆಯಲಿದ್ದಾರೆ ಎಂಬ ಸುದ್ದಿ ಕಾಲಿವುಡ್ ಅಂಗಳದಲ್ಲಿ ಹರಿದಾಡ್ತಿದೆ.
ಚಿರಂಜೀವಿ ಹೊಸ ಸಿನಿಮಾಗಾಗಿ ಲೇಡಿ ಸೂಪರ್ ಸ್ಟಾರ್ ಬರೋಬ್ಬರಿ 18 ಕೋಟಿ ರೂಪಾಯಿ ಡಿಮ್ಯಾಂಡ್ ಮಾಡಿದ್ದರಂತೆ. ಈ ಚಿತ್ರದಲ್ಲಿ ಅವರ ಕಾಲ್ಶೀಟ್ ಹೆಚ್ಚಿನ ದಿನ ಇದೆಯಂತೆ. ಅಲ್ಲದೆ, ಅವರ ಪಾತ್ರ ಕೂಡ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ. ಈ ಎಲ್ಲಾ ಕಾರಣದಿಂದ ಅವರು ಇಷ್ಟು ದೊಡ್ಡ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದಾರೆ. ಸದ್ಯ ನಿರ್ಮಾಪಕರು ಈ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ. ಇದು ನಿಜವಾದಲ್ಲಿ ಅವರು ದಕ್ಷಿಣ ಭಾರತದ ಅತಿ ಹೆಚ್ಚಿನ ಸಂಭಾವನೆ ಪಡೆದ ನಟಿ ಆಗಲಿದ್ದಾರೆ.
30 ಕೋಟಿ ರೂಪಾಯಿ ಸಂಭಾವನೆ ಪಡೆಯುವ ಮೂಲಕ ಪ್ರಿಯಾಂಕಾ ಚೋಪ್ರಾ ಭಾರತದಲ್ಲಿ ಅತಿ ದುಬಾರಿ ನಟಿ ಎನಿಸಿಕೊಂಡಿದ್ದಾರೆ. ರಾಜಮೌಳಿ-ಮಹೇಶ್ ಬಾಬು ಚಿತ್ರಕ್ಕೆ ಇಷ್ಟು ಹಣ ಪಡೆದಿದ್ದಾರಂತೆ. ಇನ್ನು, ಕಂಗನಾ ರಣಾವತ್ ಚಿತ್ರವೊಂದಕ್ಕೆ 15-20 ಕೋಟಿ ರೂಪಾಯಿ ರೆಮ್ಯೂನರೇಷನ್ ತೆಗೆದುಕೊಳ್ಳುತ್ತಾರಂತೆ. ಇದಾದ ಬಳಿಕದ ಸ್ಥಾನದಲ್ಲಿ ನಯನತಾರಾ ಇದ್ದು, ಹೀಗಾಗಿ ದಕ್ಷಿಣ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂಬ ಖ್ಯಾತಿಗೆ ಅವರು ಪಾತ್ರರಾಗಿದ್ದಾನೆ.