ಬೆಂಗಳೂರು: ವಿಶ್ವದ ಖ್ಯಾತ ಜಾವೆಲಿನ್ ಎಸೆತಗಾರರು ಮತ್ತು ಭಾರತದ ಉದಯೋನ್ಮುಖ ಪ್ರತಿಭೆಗಳನ್ನ ಒಗ್ಗೂಡಿಸುತ್ತಿರುವ ಎನ್ಸಿ ಕ್ಲಾಸಿಕ್ ವೇದಿಕೆ, ಜಾವೆಲಿನ್ ಕ್ರೀಡೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ. ಆದ್ದರಿಂದ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಇಂದು ನಡೆಯುವ ನೀರಜ್ ಚೋಪ್ರಾ ಕ್ಲಾಸಿಕ್ 2025ಗೆ ಸಂಬಂಧಿಸಿದಂತೆ, ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಸಂಜೆ 4 ರಿಂದ ರಾತ್ರಿ 10 ರವರೆಗೆ ಸಂಚಾರ ಬದಲಾವಣೆಗಳನ್ನು ಮಾಡಲಾಗಿದೆ.
ಕೆಲವು ರಸ್ತೆಗಳಲ್ಲಿ ಗೂಡ್ಸ್ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ ಮತ್ತು ಪಾರ್ಕಿಂಗ್ ಸೌಲಭ್ಯಗಳ ಮಾಹಿತಿಯನ್ನು ನೀಡಲಾಗಿದೆ. ಸಾರ್ವಜನಿಕರು ಮೆಟ್ರೋ ಅಥವಾ ಇತರ ಸಾರ್ವಜನಿಕ ಸಾರಿಗೆಯನ್ನು ಬಳಸುವಂತೆ ಸೂಚಿಸಲಾಗಿದೆ.
ನೀರಜ್ ಚೋಪ್ರಾರ ಸಾಧನೆಯ ಮೂಲಕ ಜಾವೆಲಿನ್ ಕುರಿತು ಮತ್ತಷ್ಟು ಆಸಕ್ತಿ ಹೆಚ್ಚಿಸಿಕೊಂಡಿರುವ ಭಾರತೀಯ ಯುವ ಪ್ರತಿಭೆಗಳು ಜರ್ಮನಿಯ ಥಾಮಸ್ ರೋಹ್ಲರ್,
ಕೀನ್ಯಾದ ಜೂಲಿಯಸ್ ಯೆಗೊ, ಯುಎಸ್ಎನ ಕರ್ಟಿಸ್ ಥಾಂಪ್ಸನ್, ಜೆಕ್ ರಿಪಬ್ಲಿಕ್ನ ಮಾರ್ಟಿನ್ ಕೊನೆಕ್ನಿ, ಬ್ರೆಜಿಲ್ನ ಲೂಯಿಜ್ ಮೌರಿಸಿಯೊ ಡಾ ಸಿಲ್ವಾ, ಪೋಲೆಂಡ್ನ ಸಿಪ್ರಿಯನ್ ಮ್ರ್ಜಿಗ್ಲೋಡ್ ಹಾಗೂ ಏಷ್ಯಾ ಉಪಖಂಡದ ಮತ್ತೋರ್ವ ತಾರೆಯಾಗಿರುವ ಶ್ರೀಲಂಕಾದ ರುಮೇಶ್ ಪತಿರಾಜ್ ಅವರೊಂದಿಗೆ ಕಣಕ್ಕಿಳಿಯಲಿದ್ದಾರೆ.
ಹೀಗಾಗಿ, ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ಕ್ರೀಡಾಂಗಣದ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಜೆ 4ರಿಂದ ರಾತ್ರಿ 10ರ ತನಕ ಬೆಂಗಳೂರು ಸಂಚಾರಿ ಪೊಲೀಸರು ಸಂಚಾರ ಮಾರ್ಪಾಡು ಮಾಡಿದ್ದಾರೆ. ಈ ವೇಳೆ ಕ್ರೀಡಾಂಗಣದ ಸುತ್ತ ರಸ್ತೆಯಲ್ಲಿ ಗೂಡ್ಸ್ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಸಾರ್ವಜನಿಕರು ಮೆಟ್ರೋ ಮತ್ತು ಇತರ ಸಾರ್ವಜನಿಕ ಸಾರಿಗೆಯನ್ನು ಬಳಸುವಂತೆ ಸೂಚಿಸಿದ್ದಾರೆ.
ವಾಹನಗಳಿಗೆ ಪಾರ್ಕಿಂಗ್ ಸ್ಥಳಗಳು
- ಸೆಂಟ್ ಜೋಸೆಫ್ ಕಾಲೇಜ್ (ಕಾರ್ಯಕ್ರಮದ ವೀಕ್ಷಣೆಗೆ ಬರುವ ಮತ್ತು ಪಾಸ್ ಹೊಂದಿರುವ ವಾಹನಗಳಿಗೆ ಪಾರ್ಕಿಂಗ್)
- ಯುಬಿಸಿಟಿ ಮಾಲ್ ಪಾರ್ಕಿಂಗ್ (ಪೇ ಅಂಡ್ ಪಾರ್ಕಿಂಗ್)
- ಕಿಂಗ್ ವೇ/ ಲೇನ್ (ಪೇ ಅಂಡ್ ಪಾರ್ಕಿಂಗ್).
ಪಾರ್ಕಿಂಗ್ ನಿಷೇಧಿಸಿರುವ ರಸ್ತೆಗಳು :
- ಕೆಬಿ ರಸ್ತೆ
- ವಿಠಲ್ ಮಲ್ಯ ರಸ್ತೆ
- ಆರ್.ಆರ್.ಎಂ.ಆರ್ ರಸ್ತೆ
- ಕೆಜಿ ರಸ್ತೆ
- ದೇವಾಂಗ ರಸ್ತೆ
- ಎನ್.ಆರ್. ರಸ್ತೆ
- ನೃಪತುಂಗ ರಸ್ತೆ
- ಶೇಷಾದ್ರಿ ರಸ್ತೆ
- ಅಂಬೇಡ್ಕರ್ ವೀದಿ (ಎರಡು ಬದಿ)
ಪರ್ಯಾಯ ಮಾರ್ಗ
ಹೆಚ್.ಎಲ್.ಡಿ ಜಂಕ್ಷನ್ ನಿಂದ ಕೆಬಿ ರಸ್ತೆಯ ಮುಖಾಂತರ ಕ್ರೀನ್ಸ್ ಜಂಕ್ಷನ್ ಮತ್ತಯ ಶಾಂತಿನಗರ ಕಡೆ ಸಂಚರಿಸುವ ಗೂಡ್ಸ್ ವಾಹನಗಳು ಹೆಚ್.ಎಲ್.ಡಿ ಜಂಕ್ಷನ್ ಬಳಿ ಬಲತಿರುವು ಪಡೆದು ಹಡ್ನನ್ ಜಂಕ್ಷನ್ ದೇವಾಂಗ್ ಜಂಕ್ಷನ್ ಎಡತಿರುವು ಮಿಷನ್ ರಸ್ತೆ-ಫೈ ಓವರ್-ರೆಸಿಡೆನ್ಸಿ ರಸ್ತೆ ಮೂಲಕ ಸಾಗುವುದು.
ರಿಚ್ಮಂಡ್ ಜಂಕ್ಷನ್ನಿಂದ ಮೈಸೂರು ಬ್ಯಾಂಕ್ ಕಡೆ ಸಂಚರಿಸುವ ಗೂಡ್ಸ್ ವಾಹನಗಳು ಶಾಂತಿನಗರ-ಮಿಷನ್ ಮಿಷನ್ ರಸ್ತೆ-ಸುಬ್ಬಯ್ಯ ಸರ್ಕಲ್-ಲಾಲ್ಬಾಗ್ ಪೂರ್ಣಿಮಾ ಜಂಕ್ಷನ್ನಲ್ಲಿ ಬಲತಿರುವು ಪಡೆದು ಶಿವಾಜಿ ಜಂಕ್ಷನ್-ಬಲತಿರುವು-ಪುರಭವನದ ಬಳಿ ಎಡ ತಿರುವು ಪಡೆದು ಮೈಸೂರು ರಸ್ತೆ ಅಥವಾ ಎನ್.ಆರ್ ಜಂಕ್ಷನ್-ಪೊಲೀಸ್ ಠಾಣೆ ಜಂಕ್ಷನ್-ಕೆಜಿ ರಸ್ತೆ ಮುಖಾಂತರ ಮೈಸೂರು ಬ್ಯಾಂಕ್ ತಲುಪಬಹು.