ನೆಲಮಂಗಲ:- ಭೀಕರ ರಸ್ತೆ ಅಪಘಾತದಲ್ಲಿ ಕ್ಯಾಂಟರ್ ಲಾರಿ ಹರಿದು ಗೃಹಿಣಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನೆಲಮಂಗಲ ಹೊರವಲಯ ದಾಸನಪುರ ಹೋಬಳಿ ಮಾಕಳಿ ಬಳಿ ಜರುಗಿದೆ. ಯಶೋಧ 24 ಮೃತ ಮಹಿಳೆ.
ಹೆಗ್ಗಡ ದೇವನಪುರದಿಂದ ಫಂಕ್ಷನ್ ಮುಗಿಸಿ ಅಂಚೆಪಾಳ್ಯ ಕಡೆ ದಂಪತಿ ತೆರಳುತ್ತಿದ್ದರು. ಕ್ಯಾಂಟರ್ ಲಾರಿ ಅಜಾಗರೂಕತೆಯಿಂದ ಸಂಚಾರದಿಂದ ಈ ಅವಘಡ ಸಂಭವಿಸಿದೆ. ಬೈಕ್ ನಲ್ಲಿ ಯಶೋದ ಹಾಗೂ ಆಕೆಯ ಪತಿ ಸಂಚರಿಸುತ್ತಿದ್ದರು. ಈ ವೇಳೆ ಏಕಾಏಕಿ ಎಡಕ್ಕೆ ಕ್ಯಾಂಟರ್ ಚಾಲಕ ಎಳೆದಿದ್ದಾನೆ.
ಈ ವೇಳೆ ಬೈಕ್ ಗೆ ಡಿಕ್ಕಿ ಹೊಡೆದಿದೆ. ಕೂಡಲೇ ಮಹಿಳೆ ಬೈಕ್ ನಿಂದ ಬಿದ್ದಿದ್ದಾರೆ. ಕೆಳಕ್ಕೆ ಬೀಳುತ್ತಿದ್ದಂತೆ ಯಶೋಧ ಮೇಲೆ ಲಾರಿ ಹರಿದಿದೆ. ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಮೃತ ಮಹಿಳೆ ಶವವನ್ನು ನೆಲಮಂಗಲ ಸರ್ಕಾರಿ ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದೆ.