ನೆಲಮಂಗಲ: ನಗರದಲ್ಲಿ ಸುರಿದ ಭಾರೀ ಮಳೆಗೆ ಸಾಕಷ್ಟು ಅವಾಂತರವೇ ಸೃಷ್ಟಿ ಆಗಿದೆ. ನೆಲಮಂಗಲ ಸುತ್ತಮುತ್ತ ಮಂಜಾನೆ ಸುರಿದ ಜೋರು ಮಳೆಗೆ ಹೆದ್ದಾರಿಗೆ ನೀರು ನುಗ್ಗಿದೆ.
ನೆಲಮಂಗಲ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆ ಜಲಾವೃತವಾಗಿದೆ. ನೆಲಮಂಗಲ ಬಳಿಯ ಅಡಕಮಾರನಹಳ್ಳಿಯ ಜೈನ್ ಟೆಂಪಲ್ ಮುಂದೆ ರಸ್ತೆ ಜಲಾವೃತವಾಗಿದೆ. ರಸ್ತೆ ಜಲಾವೃತದಿಂದ ವಾಹನ ಸವಾರರ ಪರದಾಟ ನಡೆಸಿದ್ದಾರೆ. ರಸ್ತೆಯಲ್ಲಿ ಎರಡು ನೀರು ತುಂಬಿ ಸವಾರರು ಪರದಾಟ ನಡೆಸಿದ್ದಾರೆ. ಭಾರೀ ಮಳೆ ಹಿನ್ನೆಲೆ ಟ್ರಾಫಿಕ್ ಜಾಮ್ ಆಗಿದ್ದು, ಸವಾರರು ಪರದಾಟ ನಡೆಸಿದ್ದಾರೆ.