ಕಮಲ್ ಹಾಸನ್ ಗೆ ಅದ್ಯಾಕೋ ಟೈಮ್ ಕೆಟ್ಟಂತಿದೆ. ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ ಎಂದು ವಿವಾದಾತ್ಮಕ ಹೇಳಿಕೆ ಕೊಟ್ಟು ಕನ್ನಡಿಗರ ಕಣ್ಣು ಕೆಂಪಾಗಿಸಿದ್ದ ಕನ್ನಡ ವಿರೋಧಿ ಕಮಲ್ ಗೆ ಮತ್ತೊಂದು ಶಾಕ್ ಎದುರುರಾಗಿದೆ. ಕರುನಾಡ ನೆಲದಲ್ಲಿ ಕಮಲ್ ಹಾಸನ್ ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಫುಲ್ ಸ್ಟಾಪ್ ಬಿದ್ದಿದ್ದು, ಇದು ಕಲೆಕ್ಷನ್ ಮೇಲೆ ದೊಡ್ಡ ಪೆಟ್ಟು ಬಿದ್ದಿದೆ. ಥಗ್ ಲೈಫ್ ಸಿನಿಮಾ ಬಾಕ್ಸಾಫೀಸ್ ನಲ್ಲಿ ಸೋತು ಸುಣ್ಣವಾಗಿದೆ. ಕಲೆಕ್ಷನ್ ಬಗ್ಗೆ ಕೇಳೋ ಆಗಿಯೇ ಇಲ್ಲ ಅಂತಾ ಪರಿಸ್ಥಿತಿ ಇದೆ. 200 ಕೋಟಿ ಬಜೆಟ್ ಸಿನಿಮಾ 50 ಕೋಟಿ ಕೂಡ ಗಳಿಸಿಲ್ಲವಂತೆ. ಇದು ಥಗ್ ಲೈಫ್ ಒಟಿಟಿ ರೈಟ್ಸ್ ಮೇಲೆ ಎಫೆಕ್ಟ್ ಬೀರಿದೆ.
ಥಗ್ ಲೈಫ್ ಬಿಡುಗಡೆಗೂ ಮೊದಲೇ ನೆಟ್ ಫ್ಲಿಕ್ಸ್ 130 ಕೊಟ್ಟು ಬಿಕರಿಯಾಗಿತ್ತು ಎಂಬ ಸುದ್ದಿ ಇದೆ. ಆದ್ರೀಗ ನೆಟ್ ಫ್ಲಿಕ್ಸ್ ಇಷ್ಟು ಮೊತ್ತದಲ್ಲಿ 20-25% ಕಡಿತದೊಂದಿಗೆ ಒಪ್ಪಂದವನ್ನು ಮರುಪರಿಶೀಲಿಸಲು ಮುಂದಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಕಡಿಮೆ ಮೊತ್ತಕ್ಕೆ ಸ್ಟ್ರೀಮಿಂಗ್ ಹಕ್ಕನ್ನು ಪಡೆಯಲು ನೆಟ್ ಫ್ಲಿಕ್ಸ್ ಮುಂದಾಗಿದೆ ಎನ್ನಲಾಗುತ್ತಿದೆ. ಇದು ಕಮಲ್ ಹಾಸನ್ ಪಾಲಿಗೆ ಇನ್ನೊಂದು ಮುಜುಗರದ ಸಂಗತಿಯಾಗಿದೆ ಅಂದರೆ ತಪ್ಪಾಲಿಕ್ಕಿಲ್ಲ.
ಕಮಲ್ ಹಾಸನ್ ನಟಿಸಿ ನಿರ್ಮಿಸಿದ್ದ ಥಗ್ ಲೈಫ್ ಗೆ ಮಣಿರತ್ನಂ ಆಕ್ಷನ್ ಕಟ್ ಹೇಳಿದ್ದರು. 3 ದಶಕದ ಬಳಿಕ ಕಮಲ್ ಮಣಿ ಮತ್ತೆ ಒಂದಾಗಿ ಈ ಚಿತ್ರ ಮಾಡಿದ್ದರು. ಆದರೆ ಅದ್ಯಾಕೋ ಈ ಜೋಡಿ ಮೋಡಿ ಮಾಡುವಲ್ಲಿ ವಿಫಲವಾಯ್ತು. ಚಿತ್ರದಲ್ಲಿ ತ್ರಿಷಾ, ಸಿಂಬು ಸೇರಿದಂತೆ ಬಹುದೊಡ್ಡ ತಾರಾಬಳಗದ ನಟಿಸಿತ್ತು.