Close Menu
Ain Live News
    Facebook X (Twitter) Instagram YouTube
    Monday, June 23
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಬೆಂಗಳೂರಿನಲ್ಲಿ ಹೊಸ ಬಿರ್ಲಾ ಓಪಸ್ ಪೇಂಟ್ ಸ್ಟುಡಿಯೋ ಆರಂಭ

    By AIN AuthorApril 24, 2025
    Share
    Facebook Twitter LinkedIn Pinterest Email
    Demo

    ಬೆಂಗಳೂರು: ಆದಿತ್ಯ ಬಿರ್ಲಾ ಗ್ರೂಪ್ ಅಡಿಯಲ್ಲಿ ಗ್ರಾಸಿಂ ಇಂಡಸ್ಟ್ರೀಸ್ ಭಾಗವಾಗಿರುವ ಬಿರ್ಲಾ ಓಪಸ್ ಪೇಂಟ್ಸ್ ಇಂದು ಬೆಂಗಳೂರಿನಲ್ಲಿ ತನ್ನ ಹೊಸ ಬಿರ್ಲಾ ಓಪಸ್ ಪೇಂಟ್ ಸ್ಟುಡಿಯೋ ಪ್ರಾರಂಭಿಸಿದೆ. ಗುರುಗ್ರಾಮ್, ಲಖನೌ, ಮುಂಬೈ ಮತ್ತು ನವಿ ಮುಂಬೈಗಳಲ್ಲಿ ಯಶಸ್ವಿಯಾಗಿ ತನ್ನ ಪೇಂಟ್ ಸ್ಟುಡಿಯೋಗಳ ಯಶಸ್ವಿ ಪ್ರಾರಂಭದ ನಂತರ ಇದೀಗ ಬೆಂಗಳೂರಿನಲ್ಲಿ ಕಂಪನಿ ಮಾಲೀಕತ್ವದ ಮತ್ತು ಕಂಪನಿ ನಿರ್ವಹಣೆಯ ಎಕ್ಸ್ಪೀರಿಯೆನ್ಸ್ ಸ್ಟೋರ್ ಆರಂಭಿಸಿದೆ.

    ಪೇಂಟ್ ಸ್ಟುಡಿಯೋಗಳನ್ನು ಸೃಜನಶೀಲತೆಯ ಕೇಂದ್ರಗಳಾಗಿ ವಿನ್ಯಾಸಗೊಳಿಸಿದ್ದು, ಅವು ಸಾಂಪ್ರದಾಯಿಕ ಪೇಂಟ್ ಮಳಿಗೆಗಳಿಗೂ ವಿಭಿನ್ನವಾಗಿವೆ. ಇದು ಎಕ್ಸ್ಪೀರಿಯೆನ್ಸ್ ಸೆಂಟರ್ ಆಗಿದ್ದು ಇದು ಗ್ರಾಹಕರಿಗೆ ಹೊಸ ಐಡಿಯಾಗಳನ್ನು ಕಂಡುಕೊಳ್ಳಲು ಅವಕಾಶ ಕಲ್ಪಿಸುವುದೇ ಅಲ್ಲದೆ ಬಣ್ಣಗಳನ್ನು ನಿಜ ಜೀವನದ ಪರಿಸರದಲ್ಲಿ ಮುಟ್ಟುವ, ಭಾವಿಸುವ ಮತ್ತು ಅನುಭವ ಪಡೆದುಕೊಳ್ಳಲು ಅವಕಾಶ ನೀಡುತ್ತದೆ.

    ಗ್ರಾಹಕರು ತಮ್ಮ ನೆಚ್ಚಿನ ಬಣ್ಣದ ಆಯ್ಕೆ, ರಚನೆಗಳು ಮತ್ತು ಬಳಕೆಯ ತಂತ್ರಗಳ ಕುರಿತು ವೈಯಕ್ತಿಕಗೊಳಿಸಿದ ಸಲಹೆಗಳು ಮೂಲಕ ಉಚಿತ ಪರಿಣಿತರ ಮಾರ್ಗದೆರ್ಶನ ಪಡೆದುಕೊಳ್ಳಬಹುದು. ಸುಧಾರಿತ ವಿಶುಯಲೈಸೇಷನ್ ಸಾಧನಗಳು ಗೃಹ ಮಾಲೀಕರಿಗೆ ಅವರ ಆಯ್ಕೆ ಮಾಡಲಾದ ಬಣ್ಣಗಳು ನಿಜ ಜೀವನದ ಹಿನ್ನೆಲೆಗಳಲ್ಲಿ ಹೇಗೆ ಕಾಣುತ್ತವೆ ಅನ್ನೋದನ್ನು ಕೂಡ ಪ್ರೀವ್ಯೂ ಸಹ ಸಿಗಲಿದೆ. ಪೇಂಟ್ಸ್ ಆಚೆಗೂ ಪೇಂಟ್ ಸ್ಟುಡಿಯೋ ವಾಲ್ ಪೇಪರ್ ಗಳು, ಡಿಸೈನರ್ ಫಿನಿಷ್ ಗಳು ಮತ್ತು ಸಮಗ್ರ ಅಲಂಕರಣದ ಪರಿಹಾರಕ್ಕೆ ವಿಶೇಷ ಕೋಟಿಂಗ್ ಆಯ್ಕೆಗಳನ್ನು ಕೂಡಾ ಹೊಂದಿರುತ್ತದೆ.

     

    ಈ ಮಳಿಗೆಯು ಪೂರ್ಣ ಶ್ರೇಣಿಯ 170+ ಉತ್ಪನ್ನಗಳನ್ನು ಪ್ರದರ್ಶಿಸುವುದಲ್ಲದೆ ವಿಶೇಷ ಸೇವೆಗಳನ್ನೂ ಒದಗಿಸುತ್ತದೆ. ಅದರಲ್ಲಿ ಬಣ್ಣದ ಆಯ್ಕೆ, ಆವಿಷ್ಕಾರಕ ಬಳಕೆ ತಂತ್ರಗಳು ಮತ್ತು ಶ್ರೀಮಂತ ಸ್ಥಳೀಯ ಪರಂಪರೆಯಿಂದ ಸ್ಫೂರ್ತಿ ಪಡೆದ ಕ್ಯುರೇಟೆಡ್ ಡೆಕೊರ್ ಪರಿಹಾರಗಳನ್ನು ಕುರಿತು ಪರಿಣಿತರ ಸಲಹೆಗಳನ್ನೂ ಪಡೆಯಬಹುದು.

     

    ಬಿರ್ಲಾ ಓಪಸ್ ಪೇಂಟ್ಸ್ ಭಾರತದಾದ್ಯಂತ ತನ್ನ ರೀಟೇಲ್ ವ್ಯಾಪ್ತಿ ವಿಸ್ತರಿಸುವ ಪ್ರಗತಿಯ ಕಾರ್ಯತಂತ್ರದಲ್ಲಿ ಗಮನಾರ್ಹ ಹೆಜ್ಜೆಯಾಗಿದೆ. ಅನುಭವಪೂರ್ವಕ ರೀಟೇಲ್ ಗೆ ಹೆಚ್ಚು ಆದ್ಯತೆ ನೀಡಿ ಕಂಪನಿಯು ಮುಂದಿನ ತಿಂಗಳುಗಳಲ್ಲಿ ದೆಹಲಿ, ಹೈದರಾಬಾದ್, ಕೊಲ್ಕತಾ, ಜೈಪುರ, ಅಹಮದಾಬಾದ್ ಮತ್ತು ಸೂರತ್ ಗಳಲ್ಲಿ ಹೆಚ್ಚುವರಿ ಎಕ್ಸ್ಪೀರಿಯೆನ್ಸ್ ಸೆಂಟರ್ ಗಳನ್ನು ತೆರೆಯಲು ಯೋಜಿಸಿದೆ.

    ಬಿರ್ಲಾ ಓಪಸ್ ಪೇಂಟ್ಸ್ ಸಿಇಒ ಶ್ರೀ ರಕ್ಷಿತ್ ಹರ್ಗವೆ ಅವರು ಮಾತನಾಡಿ, “ಬೆಂಗಳೂರಿನಲ್ಲಿ ನಮ್ಮ ಮೊದಲ ಪೇಂಟ್ ಸ್ಟುಡಿಯೊ ಪ್ರಾರಂಭಿಸುವುದು ಬಿರ್ಲಾ ಓಪಸ್ ಪೇಂಟ್ಸ್ ಗೆ ಪ್ರಮುಖ ಮೈಲಿಗಲ್ಲಾಗಿದೆ. ಈ ಸ್ಟುಡಿಯೊ ಬರೀ ಭೌತಿಕ ತಾಣಕ್ಕಿಂತ ಹೆಚ್ಚಿನದಾಗಿದೆ. ಇದು ಆವಿಷ್ಕಾರ, ಶ್ರೇಷ್ಠತೆ ಮತ್ತು ಗ್ರಾಹಕರ ಅನುಭವ ಹೆಚ್ಚಿಸಲು ನಮ್ಮ ಬದ್ಧತೆಯನ್ನು ಪ್ರತಿನಿಧಿಸುತ್ತದೆ. ಪ್ರತಿ ಅಂಶವನ್ನೂ ಗೃಹ ಮಾಲೀಕರು ಅವರ ಸ್ಥಳಗಳನ್ನು ನೈಜ ಮಾಸ್ಟರ್ ಪೀಸ್ ಗಳಾಗಿ ಪರಿವರ್ತಿಸಲು ಸನ್ನದ್ಧವಾಗಿಸುವಂತೆ ಎಚ್ಚರಿಕೆಯಿಂದ ರೂಪಿಸಲಾಗಿದೆ. ನಮ್ಮ ಗುರಿ ಗ್ರಾಹಕರು ಪೇಂಟ್ಸ್ ನ ಪರಿವರ್ತನೀಯ ಶಕ್ತಿಯನ್ನು ಪೂರ್ಣವಾಗಿ ಅನುಭವಿಸುವ ಪರಿಸರಗಳನ್ನು ಸೃಷ್ಟಿಸುವ ಮೂಲಕ ಅದನ್ನು ಲಭ್ಯ ಹಾಗೂ ಸ್ಫೂರ್ತಿಯುತವಾಗಿಸುವುದು ಎಂದರು.

     

    ಪ್ರತಿಯೊಂದು ಬಿರ್ಲಾ ಓಪಸ್ ಪೇಂಟ್ ಸ್ಟುಡಿಯೊ ವಾಸ್ತುಶಿಲ್ಪಿಗಳು ಮತ್ತು ಒಳಾಂಗಣ ವಿನ್ಯಾಸಕರಿಗೆ ಸಂಪನ್ಮೂಲಗಳು, ನಮೂನೆಗಳು ಮತ್ತು ಪರಿಣಿತರ ಬೆಂಬಲದ ಮೂಲಕ ವೃತ್ತಿಪರರನ್ನು ಸಹಯೋಗ ಸಾಧಿಸಲು ಮತ್ತು ಸುಲಭವಾಗಿ ಸೃಷ್ಟಿಸಲು ಅಗತ್ಯವಾದ ವಿಶೇಷ ಕೆಲಸದ ತಾಣವಾಗಿ ಕೆಲಸ ಮಾಡುತ್ತದೆ. ಈ ಎಕ್ಸ್ಪೀರಿಯೆನ್ಸ್ ಸೆಂಟರ್ ಗಳು ನಮ್ಮ ಪೇಂಟ್ ಕ್ರಾಫ್ಟ್ ಪೇಂಟಿಂಗ್ ಸೇವೆಯ ಮೂಲಕ ಪೇಂಟಿಂಗ್ ಸೇವೆಗಳನ್ನೂ ಒದಗಿಸುತ್ತಿದ್ದು ಪ್ರತಿ ಪೇಂಟ್ ಸ್ಟುಡಿಯೊ ಕೂಡಾ ಸ್ಥಳೀಯ ಸಂಸ್ಕೃತಿ, ಪರಂಪರೆ ಮತ್ತು ವಾಸ್ತುಶಿಲ್ಪದಿಂದ ಸ್ಫೂರ್ತಿ ಪಡೆದ ಬಣ್ಣಗಳನ್ನು ಹೊಂದಿವೆ.

     

    ಬಿರ್ಕಾ ಓಪಸ್ ಪೇಂಟ್ ಸ್ಟುಡಿಯೋ ವಿಳಾಸ:

    ಗ್ರೌಂಡ್ ಫ್ಲೋರ್, ಅರ್ಬನ್ ವಾಲ್ಟ್, 732, ಚಿನ್ಮಯ ಮಿಷನ್ ಆಸ್ಪತ್ರೆ ರಸ್ತೆ, ಸ್ಟಾರ್ ಬಕ್ಸ್ ಎದುರು, ಇಂದಿರಾನಗರ, ಸ್ಟೇಜ್ 1, ಬೆಂಗಳೂರು-560038

    Demo
    Share. Facebook Twitter LinkedIn Email WhatsApp

    Related Posts

    ಮಿತ್ರ ಪಕ್ಷ ಬಿಜೆಪಿಗೆ ಬಿಗ್ ಶಾಕ್: ‘ಕಮಲ’ ನಾಯಕನನ್ನ ಜೆಡಿಎಸ್​ಗೆ ಕರೆ ತಂದ್ರು ಕುಮಾರಸ್ವಾಮಿ!

    June 22, 2025

    ನಿರುದ್ಯೋಗಿಗಳಿಗೆ ಗುಡ್ ನ್ಯೂಸ್: ಸೆಂಟ್ರಲ್ ಬ್ಯಾಂಕಿನಲ್ಲಿ 4500 ಹುದ್ದೆಗಳು ಖಾಲಿ.. ಅರ್ಹರು ಇಂದೇ ಅಪ್ಲೈ ಮಾಡಿ!

    June 22, 2025

    ಜನಸಾಮಾನ್ಯರ ಮಕ್ಕಳಿಗಾಗಿ ಕೃಷಿ ಕಾಲೇಜು ಸ್ಥಾಪನೆ: ಡಿಸಿಎಂ ಡಿ.ಕೆ.ಶಿವಕುಮಾರ್

    June 22, 2025

    ಕೊಲೆಸ್ಟ್ರಾಲ್‌, ಗ್ಯಾಸ್ಟ್ರಿಕ್ ಇರೋರಿಗೆ ಒಣ ಶುಂಠಿ ಸೇವನೆ ಬೆಸ್ಟ್ ಅಂತೆ!

    June 22, 2025

    ಸಂಕಷ್ಟದಲ್ಲಿ ಮಾವು ಬೆಳೆಗಾರರು: ನೆರವಿಗೆ ಮುಂದಾದ ಕೇಂದ್ರ: 2.5 ಲಕ್ಷ ಟನ್​​ ಮಾವು ಖರೀದಿಗೆ ಒಪ್ಪಿಗೆ!

    June 22, 2025

    ಇನ್ಮುಂದೆ ಸುಳ್ಳು ಸುದ್ದಿ, ದ್ವೇಷ ಭಾಷಣ ಮಾಡಿದ್ರೆ ದಂಡದ ಜೊತೆ ಜೈಲೂಟ ಫಿಕ್ಸ್!

    June 22, 2025

    ವಿದ್ಯಾರ್ಥಿಗಳು, ಪೋಷಕರು ಮಿಸ್ ಮಾಡ್ದೆ ಸುದ್ದಿ ಓದಿ: ಇನ್ಮುಂದೆ ಶಾಲೆಗಳಲ್ಲಿ ಹೊಸ ರೂಲ್ಸ್! ಏನದು?

    June 22, 2025

    ಆಗಸದಲ್ಲಿ ಹಾರುತ್ತಿದ್ದ ವಿಮಾನದಲ್ಲಿ ಇಂಧನ ಖಾಲಿ: ಬೆಂಗಳೂರಲ್ಲಿ ತುರ್ತು ಭೂಸ್ಪರ್ಶ!

    June 22, 2025

    ಹಳೇ ಬಟ್ಟೆ ದಾನ ಮಾಡ್ತಿದ್ದೀರಾ!? ಎಚ್ಚರ, ಈ ತಪ್ಪು ಮಾಡೋ ಮುನ್ನ ಸುದ್ದಿ ನೋಡಿ!

    June 22, 2025

    ಬೆಂಗಳೂರಿಗರ ಗಮನಕ್ಕೆ: ಇಂದು ಈ ಪ್ರದೇಶದಲ್ಲಿ ಇರಲ್ಲ ಕರೆಂಟ್!

    June 22, 2025

    ರಾತ್ರಿ ಮಲಗಿದ್ದಾಗ ಕೈ-ಕಾಲು ಸೆಳೆತ ಆಗೋದ್ಯಾಕೆ? ಕಾರಣ ತಿಳಿದ್ರೆ ಶಾಕ್ ಆಗ್ತೀರಾ?

    June 22, 2025

    ಎತ್ತಿನಹೊಳೆ ಯೋಜನೆಯಲ್ಲಿ ಮೊದಲು ಕುಡಿಯುವ ನೀರು ಪೂರೈಕೆ, ನಂತರ ಕೆರೆಗಳಿಗೆ ನೀರು: ಡಿಸಿಎಂ ಡಿ.ಕೆ. ಶಿವಕುಮಾರ್

    June 21, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.