ಮುಂಬೈ: ದೊಡ್ಡ ಬಜೆಟ್ನಲ್ಲಿ ಮೂಡಿಬರುತ್ತಿರುವ ‘ರಾಮಾಯಣ’ ಸಿನಿಮಾದ ಫಸ್ಟ್ ಲುಕ್ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಸಾಕಷ್ಟು ಗಮನ ಸೆಳೆಯುತ್ತಿದೆ. ಈ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನ ಪಾತ್ರ ನಿರ್ವಹಿಸುತ್ತಿದ್ದು, ಈಗ ಹೊಸ ವಿವಾದವೊಂದು ಚರ್ಚೆಗೆ ಗ್ರಾಸವಾಗಿದೆ.
ರಣಬೀರ್ ಕಪೂರ್ ಅವರು ಹಿಂದೆ ನೀಡಿದ್ದ ಸಂದರ್ಶನವೊಂದರ ವಿಡಿಯೋ ಇದೀಗ ವೈರಲ್ ಆಗಿದ್ದು, ಅದರಲ್ಲಿ ಅವರು ತಮ್ಮ ಗೋಮಾಂಸ ಪ್ರಿಯತೆಯನ್ನು ಒಪ್ಪಿಕೊಂಡಿದ್ದಾರೆ. ಈ ಕಾರಣದಿಂದ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ಕೇಳಿಬರುತ್ತಿದೆ.
ಕುಂಬಳಕಾಯಿ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಕಣ್ಣು, ಚರ್ಮ, ಕೂದಲು ಎಲ್ಲದಕ್ಕೂ ಮದ್ದು!
ಈ ಹಿಂದೆ ನಟಿ ಕಂಗನಾ ರಣಾವತ್ ಕೂಡ ರಾಮನ ಪಾತ್ರಕ್ಕೆ ರಣಬೀರ್ ಸೂಕ್ತನಲ್ಲವೆಂದು ವಾದಿಸಿದ್ದರು. ಇದೀಗ ‘ಗೋಮಾಂಸ ತಿನ್ನುವವನು ರಾಮನ ಪಾತ್ರ ಮಾಡಬಹುದೆ?’ ಎಂಬ ಪ್ರಶ್ನೆಗಳು ಜನರಲ್ಲಿ ಎದ್ದಿವೆ. ರಣಬೀರ್ ಕಪೂರ್ ಈ ವಿವಾದದ ಬಗ್ಗೆ ಇನ್ನೂ ಯಾವುದೇ ಸ್ಪಷ್ಟನೆ ನೀಡಿಲ್ಲ. ಚಿತ್ರತಂಡದ ಸ್ಪಂದನೆಯೂ ಇನ್ನಷ್ಟೇ ಬರಬೇಕಿದೆ.