ಮಂಡ್ಯ : ಮದ್ದೂರು ಪಟ್ಟಣದಲ್ಲಿ ತಾಲೂಕು ಮಟ್ಟದ ವಿವಿಧ ಕಛೇರಿಗಳು ಬಾಡಿಗೆ ಕಟ್ಟಡಗಳಲ್ಲಿದ್ದು, ಅವುಗಳನ್ನು ಒಂದೇ ಸಂಕೀರ್ಣದಲ್ಲಿ ಕ್ರೂಡಿಕರಿಸುವ ಬಗ್ಗೆ ಯೋಜನೆ ಸಿದ್ಧವಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಶನಿವಾರ ಹೇಳಿದರು. ಮದ್ದೂರು ತಾಲೂಕಿನ ಕದಲೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯ ಮೇಲಂತಸ್ಥಿನ ಕಟ್ಟಡ ನಿರ್ಮಾಣ ಹಾಗೂ ಚನ್ನಸಂದ್ರ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಮದ್ದೂರು ಪಟ್ಟಣದಲ್ಲಿ ನೂತನವಾಗಿ ನ್ಯಾಯಲಯ ಸಂಕೀರ್ಣವನ್ನು 29 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲು ಸರ್ಕಾರದ ಮಟ್ಟದಲ್ಲಿ ಪ್ರಸ್ತಾವನೆ ಅಂತಿಮ ಹಂತದಲ್ಲಿದ್ದು, ಆದಷ್ಟು ಬೇಗ ಮುಖ್ಯಮಂತ್ರಿಗಳ ಅನುಮೋದನೆ ಪಡೆದು ನ್ಯಾಯಾಲಯ ಸಂಕೀರ್ಣಕ್ಕೆ ಚಾಲನೆ ನೀಡಲಾಗುವುದು.
ಗರ್ಭಿಣಿಯರು ಪಾನೀಪುರಿ ತಿನ್ನುವುದು ಒಳ್ಳೆಯದೋ, ಕೆಟ್ಟದ್ದೋ..? ಇಲ್ಲಿದೆ ಮಾಹಿತಿ
ಹಾಲಿ ಇರುವ ನ್ಯಾಯಾಲಯದ ಕಟ್ಟಡದಲ್ಲಿ ನ್ಯಾಯಾಲಯದ ಸಭಾಂಗಣಗಳ ಸ್ಥಳಾವಕಾಶ ಕೊರತೆಯಿದ್ದು, ಬಹಳಷ್ಟು ಸಮಸ್ಯೆಯಾಗುತ್ತಿದೆ. ಹೀಗಾಗಿ ನೂತನ ಕಟ್ಟಡದ ನಿರ್ಮಾಣದ ಬಳಿಕ ಹಾಲಿ ಕಟ್ಟಡವನ್ನು ತಾಲೂಕು ಆಡಳಿತದ ಸುಪರ್ದಿಗೆ ತೆಗೆದುಕೊಂಡು ಈಗ ಬಾಡಿಗೆ ಕಟ್ಟಡಗಳಲ್ಲಿರುವ ತಾಲೂಕು ಮಟ್ಟದ ವಿವಿಧ ಇಲಾಖೆಗಳನ್ನು ನ್ಯಾಯಾಲಯದ ಸಂಕೀರ್ಣಕ್ಕೆ ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಈಗಾಗಲೇ ತಾಲೂಕು ಪಂಚಾಯತಿ ನೂತನ ಕಟ್ಟಡಕ್ಕೆ 4 ಕೋಟಿ ರೂ ವೆಚ್ಚದಲ್ಲಿ ಚಾಲನೆ ನೀಡಲಾಗುತ್ತಿದ್ದು, ಎಲ್ಲಾ ಕಟ್ಟಡಗಳು ಒಂದೇ ಕಡೆ ಇರುವುದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಕಛೇರಿಯಿಂದ ಕಛೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗದು ಎಂದು ತಿಳಿಸಿದರು.
ಇನ್ನು ಶಾಸಕರು ಕ್ಷೇತ್ರದಲ್ಲಿ ಗುದ್ದಲಿಪೂಜೆ ಮಾಡೋದಷ್ಟೆ ಕೆಲಸ, ಯಾವ ಕಾಮಗಾರಿಗಳು ಪ್ರಗತಿಯಲ್ಲಿಲ್ಲ ಎಂಬ ವಿರೋಧಿಗಳ ಅಪಪ್ರಚಾರಕ್ಕೆ ನಾನು ಭರವಸೆ ನೀಡುವ ವ್ಯಕ್ತಿಯಲ್ಲ ಕೆಲಸ ಮಾಡಿ ತೊರಿಸುವ ವ್ಯಕ್ತಿ ಈಗಾಗಲೇ ಎರಡೇ ವರ್ಷದಲ್ಲಿ ಕ್ಷೇತ್ರದಾದ್ಯಂತ 1 ಸಾವಿರ ಕೋಟಿ ಅನುದಾನ ತಂದು ಅಭಿವೃದ್ಧಿ ಪರ್ವ ಪ್ರಾರಂಭ ಮಾಡಿದ್ದೇನೆ. ಇದನ್ನು ಸಹಿಸದ ಕೆಲ ವಿರೋಧಿಗಳು ಇಲ್ಲ ಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ.
ಕ್ಷೇತ್ರದಾಂದ್ಯತ ಕೆಲವು ಶುಭಾ ಸಮಾರಂಭಗಳಲ್ಲಿ ನಾನು ಭಾಗಿಯಾಗುತ್ತಿದ್ದೇನೆ.
ನನಗೆ ಸಮಯದ ಅಭಾವವಿದೆ. ಮುಂದಿನ 1 ತಿಂಗಳಲ್ಲಿ ಅಭಿವೃದ್ಧಿ ಕಾರ್ಯಗಳ ಸಾಕ್ಷಿ ಗುಡ್ಡೆಯನ್ನು ವಿರೋಧಿಗಳ ಮುಂದೆ ಇಡಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ತಿರುಗೇಟು ನೀಡಿದರು.
ಮದ್ದೂರು ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಬೇಕೆಂದು ಪಣ ತೊಟ್ಟಿದ್ದೇನೆ. ಹೀಗಾಗಿ ನನ್ನ ಸ್ವಗ್ರಾಮದಿಂದಲೇ ಇದಕ್ಕೆ ಮುನ್ನುಡಿ ಬರೆದಿದ್ದೇನೆ. ಈಗಾಗಲೇ ಗ್ರಾಮಗಳ ರಸ್ತೆಯೂ ಒತ್ತುವರಿಯಿಂದಾಗಿ ಕಿರಿದಾದ ರಸ್ತೆಗಳಾಗಿದ್ದವು. ನಿಡಘಟ್ಟ ಗ್ರಾಮದಿಂದ ಕದಲೂರು ಮಾರ್ಗವಾಗಿ ಕುಣಿಗಲ್ ರಸ್ತೆವರೆಗೂ ಅದನ್ನು ತೆರವು ಕಾರ್ಯಾಚರಣೆ ಮೂಲಕ ರಸ್ತೆ ಅಗಲೀಕರಣ ಮಾಡಲಾಗಿದೆ. ಕೆರೆ ಅಭಿವೃದ್ಧಿ ಜೊತೆಗೆ ಪಾದಚಾರಿ ಮಾರ್ಗ, ಸೌಂದರ್ಯಕರಣ, ಡಿಜಿಟಲ್ ಲೈಬ್ರರಿ, ಪಾರ್ಕ್, ಅತ್ಯಾಧುನಿಕ ಬೀದಿ ದೀಪಗಳು, ಕಾಲುವೆಗಳಿಗೆ ಚೆಕ್ ಡ್ಯಾಂ ಹಾಗೂ ಹಲವು ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲಾಗಿದೆ ಎಂದರು.
ಇದೇ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷ ತಿಮ್ಮೇಗೌಡ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಗ್ರಾಮ ಪಂಚಾಯಿತಿ ಸದಸ್ಯ ಲೋಕೇಶ್ ಮುಖಂಡರಾದ ಕೆ.ಎಂ.ರವಿ, ಚಂದ್ರು, ಲೋಕೇಶ್ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ