Close Menu
Ain Live News
    Facebook X (Twitter) Instagram YouTube
    Monday, June 23
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಗಮನಿಸಿ.. ಹೊಸ ವರ್ಷಕ್ಕೆ ಹೊಸ ರೂಲ್ಸ್: UPI, LPG ಸಿಲಿಂಡರ್, GST ನಿಯಮಗಳಲ್ಲಿ ಭಾರೀ ಬದಲಾವಣೆ

    By Author AINJanuary 1, 2025
    Share
    Facebook Twitter LinkedIn Pinterest Email
    Demo

    2025ರ ಜನವರಿಯಿಂದ ಭಾರತದಲ್ಲಿ ಹಲವು ನಿಯಮಗಳು ಬದಲಾಗುತ್ತಿದೆ. ಹೌದು ಈ ಬದಲಾವಣೆ ನಿಮ್ಮ ಜೇಬಿಗೆ ಕತ್ತರಿ ಕೂಡ ಹಾಕಬಹುದು. ಹೌದು ಇದು ನಿಮ್ಮ ದಿನನಿತ್ಯ ವ್ಯವಹಾರಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಹಾಗೂ ವಸ್ತುಗಳ ಬೆಲೆಯಲ್ಲಿ ಬದಲಾವಣೆಯನ್ನು ತರಲಿದೆ. HDFC ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್‌ಗಳು ಮತ್ತು LPG ಸಿಲಿಂಡರ್‌ನ ಬೆಲೆಗೆ ಸಂಬಂಧಿಸಿದ ನಿಯಮಗಳನ್ನು ಇದು ಒಳಗೊಂಡಿದೆ. ಈ ಬಗ್ಗೆ ಇಲ್ಲಿದೆ ವಿವರ

    ಎಫ್‌ಡಿ ನಿಯಮಗಳ ಬದಲು

    ಬ್ಯಾಂಕೇತರ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿ) ಹಾಗೂ ವಸತಿ ಹಣಕಾಸು ಕಂಪನಿಗಳು (ಎಚ್‌ಎಫ್‌ಸಿ) ಜನವರಿ 1ರಿಂದ ಸ್ಥಿರ ಠೇವಣಿಗಳಿಗೆ ಸಂಬಂಧಿಸಿದ ನಿಯಮಗಳನ್ನು ಬದಲಾವಣೆ ಮಾಡಲಿವೆ. ಗ್ರಾಹಕರ ಠೇವಣಿಗಳ ಸುರಕ್ಷತೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಆರ್‌ಬಿಐ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಎಫ್‌ಡಿ ನಿಯಮಗಳಲ್ಲಿ ಬದಲಾವಣೆ ತರಲಿವೆ. ಎಫ್‌ಡಿಗೆ ಒಬ್ಬರಿಗಿಂತ ಹೆಚ್ಚಿನ ಜನರನ್ನು ನಾಮಿನಿಗಳನ್ನಾಗಿ ಮಾಡುವುದು ಸೇರಿ ಕೆಲ ನಿಯಮಗಳು ಬದಲಾವಣೆ ಆಗಲಿವೆ.

    ಕಾರುಗಳು ಇನ್ನೂ ದುಬಾರಿ

    ಹೊಸ ವರ್ಷದಲ್ಲಿ ಹೊಸ ಕಾರು ಖರೀದಿಸಲು ತೀರ್ಮಾನಿಸಿದವರ ಜೇಬಿಗೆ ಕತ್ತರಿ ಬೀಳಲಿದೆ. ಜನವರಿಯಿಂದಲೇ ಕಾರುಗಳ ಬೆಲೆಯಲ್ಲಿ ಶೇ. 2ರಿಂದ ಶೇ. 4ರಷ್ಟು ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ. ಮಾರುತಿ ಸುಜುಕಿ, ಟಾಟಾ ಮೋಟರ್ಸ್, ಹ್ಯುಂಡೈ, ಮಹೀಂದ್ರಾ, ಹೋಂಡಾ ಹಾಗೂ ಕಿಯಾ ಸೇರಿ ಪ್ರಮುಖ ಕಂಪನಿಗಳು ಕಾರುಗಳ ಬೆಲೆಯನ್ನು ಏರಿಕೆ ಮಾಡಲಿವೆ ಎಂದು ನಿರೀಕ್ಷಿಸಲಾಗಿದೆ.

    ಉತ್ಪಾದನೆ ವೆಚ್ಚ, ನೌಕರರ ಸಂಬಳ, ಸರಕು ಸಾಗಣೆ ವೆಚ್ಚಗಳ ಏರಿಕೆ ಹಾಗೂ ವಿದೇಶಿ ವಿನಿಮಯದಲ್ಲಿ ಏರಿಳಿತ ಉಂಟಾಗುತ್ತಿರುವ ಕಾರಣ ಕಂಪನಿಗಳು ಕಾರುಗಳ ಬೆಲೆಯನ್ನು ಏರಿಕೆ ಮಾಡಲಿವೆ ಎನ್ನಲಾಗುತ್ತಿದೆ.

    ಜಿಎಸ್‌ಟಿ ನಿಯಮಗಳು ಕಠಿಣ

    ತೆರಿಗೆದಾರರಿಗೆ ಜಿಎಸ್‌ಟಿ ಪೋರ್ಟಲ್‌ಗೆ ಪ್ರವೇಶ ಪಡೆಯಲು ಇರುವ ನಿಯಮಗಳು ಇನ್ನಷ್ಟು ಕಠಿಣವಾಗಲಿವೆ. ಭದ್ರತೆ ದೃಷ್ಟಿಯಿಂದ ಜಿಎಸ್‌ಟಿ ಪೋರ್ಟಲ್‌ಗೆ ಭೇಟಿ ನೀಡಿದಾಗ ಬಹುಮಾದರಿಯ ದೃಢೀಕರಣ ಜಾರಿಗೆ ತರಲಾಗುತ್ತಿದೆ. ಇದರ ಜತೆಗೆ ತೆರಿಗೆದಾರರು, ಕಂಪನಿಗಳಿಗೂ ಕೆಲ ಕಠಿಣ ನಿಯಮಗಳು ಜಾರಿಗೆ ಬರಲಿವೆ ಎಂದು ಮೂಲಗಳು ತಿಳಿಸಿವೆ.

    ಎಲ್‌ಪಿಜಿ ಸಿಲಿಂಡರ್‌ ಬೆಲೆ ಏರಿಕೆ

    2025ರ ಜನವರಿ 1ರಂದು ಎಲ್‌ಪಿಜಿ ಬೆಲೆಯೇರಿಕೆಯಾಗುವ ಸಾಧ್ಯತೆ ಇದೆ. ಕಳೆದ ಕೆಲ ದಿನಗಳಿಂದ ಅಡುಗೆ ಅನಿಲ ಸಿಲಿಂಡರ್‌ ಬೆಲೆಯಲ್ಲಿ ವ್ಯತ್ಯಾಸ ಉಂಟಾಗಿಲ್ಲ. ಹಾಗಾಗಿ, ಹೊಸ ವರ್ಷದ ಮೊದಲ ದಿನ ಬೆಲಯೇರಿಕೆ ಮಾಡುವ ಸಾಧ್ಯತೆ ಇದೆ. ಇನ್ನು ವಾಣಿಜ್ಯ ಬಳಕೆ ಸಿಲಿಂಡರ್‌ಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ಮುಂದಿನ ತಿಂಗಳು ಕೂಡ ಏರಿಕೆಯಾಗುವ ಅಂದಾಜಿದೆ.

    ‘ಯುಪಿಐ 123ಪೇ’ ಮಿತಿ ಹೆಚ್ಚಳ

    ‘ಯುಪಿಐ 123ಪೇ’ಯಲ್ಲಿ ಹಣ ವರ್ಗಾವಣೆ ಮಿತಿಯನ್ನು ಜನವರಿ 1ರಿಂದ ಏರಿಕೆ ಮಾಡಲಾಗುತ್ತದೆ. ಮಿತಿಯು 10 ಸಾವಿರ ರೂ.ಗೆ ಏರಿಕೆಯಾಗಲಿದೆ. ಇದಕ್ಕೂ ಮೊದಲು, ಗರಿಷ್ಠ 5 ಸಾವಿರ ರೂ. ಮಾತ್ರ ಟ್ರಾನ್ಸ್‌ಫರ್‌ ಮಾಡಬಹುದಿತ್ತು. ಫೀಚರ್‌ಫೋನ್‌ ಹೊಂದಿರುವ ಬಳಕೆದಾರರಿಗೆ ಮತ್ತು ಸೀಮಿತ ಅಥವಾ ಇಂಟರ್ನೆಟ್‌ ಸಂಪರ್ಕವಿಲ್ಲದ ಬಳಕೆದಾರರಿಗಾಗಿ ಇರುವ ಪಾವತಿ ವ್ಯವಸ್ಥೆ ಇದಾಗಿದೆ.

     

    Demo
    Share. Facebook Twitter LinkedIn Email WhatsApp

    Related Posts

    ಕುಡಿದು ಕಾರು ಚಲಾಯಿಸಿ ಡಿವೈಡರ್ ಗೆ ಡಿಕ್ಕಿ: ಚಾಲಕನ ಅಜಾಗರೂಕತೆಗೆ ಸರಣಿ ಅಪಘಾತ!

    June 23, 2025

    ಹೆಲ್ಮೆಟ್ ಹಾಕದಿದ್ದನ್ನು ಪ್ರಶ್ನಿಸಿದ ಸಂಚಾರಿ ಪೊಲೀಸರಿಗೆ ಅವಾಜ್: ಜೆಡಿಎಸ್ ಮುಖಂಡ ಅರೆಸ್ಟ್?

    June 23, 2025

    ಕರ್ನಾಟಕದ ಈ ಜಿಲ್ಲೆಗಳಲ್ಲಿ ಜೂ.26 ರಿಂದ ಮಳೆ ಅಬ್ಬರ ಹೆಚ್ಚಳ: ಯೆಲ್ಲೋ ಅಲರ್ಟ್ ಘೋಷಣೆ!

    June 23, 2025

    ಬೆಂಗಳೂರು| ಪ್ರತಿಷ್ಟಿತ ಐಸ್ ಕ್ರೀಂ ಪಾರ್ಲರ್ ಬಳಿ ಕಿಡಿಗೇಡಿಗಳ ಗೂಂಡಾವರ್ತನೆ!

    June 23, 2025

    ಬೆಂಗಳೂರಿಗರ ಗಮನಕ್ಕೆ: ಇಂದು ಈ ಏರಿಯಾಗಳಲ್ಲಿ ಇರಲ್ಲ ಕರೆಂಟ್!

    June 23, 2025

    ಮಿತ್ರ ಪಕ್ಷ ಬಿಜೆಪಿಗೆ ಬಿಗ್ ಶಾಕ್: ‘ಕಮಲ’ ನಾಯಕನನ್ನ ಜೆಡಿಎಸ್​ಗೆ ಕರೆ ತಂದ್ರು ಕುಮಾರಸ್ವಾಮಿ!

    June 22, 2025

    ಕಾರಿನಡಿ ಸಿಲುಕಿ ವೃದ್ಧ ಸಾವು: ಆಂಧ್ರ ಮಾಜಿ ಸಿಎಂ ಜಗನ್ ರ‍್ಯಾಲಿ ವೇಳೆ ದುರಂತ!

    June 22, 2025

    ನಿರುದ್ಯೋಗಿಗಳಿಗೆ ಗುಡ್ ನ್ಯೂಸ್: ಸೆಂಟ್ರಲ್ ಬ್ಯಾಂಕಿನಲ್ಲಿ 4500 ಹುದ್ದೆಗಳು ಖಾಲಿ.. ಅರ್ಹರು ಇಂದೇ ಅಪ್ಲೈ ಮಾಡಿ!

    June 22, 2025

    ಜನಸಾಮಾನ್ಯರ ಮಕ್ಕಳಿಗಾಗಿ ಕೃಷಿ ಕಾಲೇಜು ಸ್ಥಾಪನೆ: ಡಿಸಿಎಂ ಡಿ.ಕೆ.ಶಿವಕುಮಾರ್

    June 22, 2025

    ಇರಾನ್ ಅಧ್ಯಕ್ಷ ಮಸೂದ್ ಜತೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ: ಏನೆಲ್ಲಾ ಚರ್ಚೆ ಆಯ್ತು?

    June 22, 2025

    ಸಂಕಷ್ಟದಲ್ಲಿ ಮಾವು ಬೆಳೆಗಾರರು: ನೆರವಿಗೆ ಮುಂದಾದ ಕೇಂದ್ರ: 2.5 ಲಕ್ಷ ಟನ್​​ ಮಾವು ಖರೀದಿಗೆ ಒಪ್ಪಿಗೆ!

    June 22, 2025

    ಇನ್ಮುಂದೆ ಸುಳ್ಳು ಸುದ್ದಿ, ದ್ವೇಷ ಭಾಷಣ ಮಾಡಿದ್ರೆ ದಂಡದ ಜೊತೆ ಜೈಲೂಟ ಫಿಕ್ಸ್!

    June 22, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.