Close Menu
Ain Live News
    Facebook X (Twitter) Instagram YouTube
    Thursday, May 29
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಚೀನಾದಲ್ಲಿ ಹೊಸ ವೈರಸ್‌ ಆರ್ಭಟ: ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಿ – ಕೇಂದ್ರ ಆರೋಗ್ಯ ಸಂಸ್ಥೆ ಸಲಹೆ

    By Author AINJanuary 4, 2025
    Share
    Facebook Twitter LinkedIn Pinterest Email
    Demo

    ಬೀಜಿಂಗ್: ಚೀನಾದಲ್ಲಿ ಹೊಸ ವೈರಸ್‌ ಆರ್ಭಟ ಜೋರಾಗಿದ್ದು, ಸಾವಿರಾರು ಮಂದಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಕೋವಿಡ್‌ ತವರು ದೇಶ ಚೀನಾದಲ್ಲಿ ಹೆಚ್‌ಎಂಪಿವಿ ಹೆಸರಿನ ಹೊಸ ವೈರಸ್ ವಿಜೃಂಭಿಸುತ್ತಿದೆ. ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಜಗತ್ತು ಮತ್ತೆ ಆತಂಕಕ್ಕೆ ಒಳಗಾಗಿದೆ.

    ಇದರ ಬೆನ್ನಲ್ಲೇ ಚೀನಾದಲ್ಲಿಕಂಡು ಬಂದಿರುವ ಹ್ಯೂಮನ್ ಮೆಟಾನ್ಯೂಮೋ ವೈರಸ್ ಹರಡುವ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯದ ಅಧಿಕಾರಿ ಡಾ ಅತುಲ್ ಗೋಯೆಲ್ ಹೇಳಿದ್ದಾರೆ. ಈ ವೈರಸ್‌ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಎಲ್ಲಾ ಉಸಿರಾಟದ ಸೋಂಕುಗಳ ವಿರುದ್ಧ ಸಾಮಾನ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಸಾಕು ಎಂದು ತಿಳಿಸಿದರು.

    ದಾಲ್ಚಿನ್ನಿ ಎಲೆ ಅಡುಗೆಗೆ ಮಾತ್ರವಲ್ಲ ದೇಹಕ್ಕೂ ನೀಡುತ್ತದೆ ಆರೋಗ್ಯಕಾರಿ ಪ್ರಯೋಜಗಳು!

    ನಾವು ದೇಶದಲ್ಲಿ ಉಸಿರಾಟಕ್ಕೆ ಸಂಬಂಧಿಸಿದಂತೆ ದಾಖಲಾದ ರೋಗಿಗಳ ಡೇಟಾವನ್ನು ವಿಶ್ಲೇಷಿಸಿದ್ದೇವೆ. ಡಿಸೆಂಬರ್ 2024ರ ಡೇಟಾದಲ್ಲಿ ಯಾವುದೇ ಗಣನೀಯ ಹೆಚ್ಚಳ ಕಂಡುಬಂದಿಲ್ಲ. ನಮ್ಮ ಯಾವುದೇ ಸಂಸ್ಥೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೇಸ್‌ ದಾಖಲಾದ ಬಗ್ಗೆ ವರದಿಯಾಗಿಲ್ಲ ಎಂದು ಹೇಳಿದರು.

    HMPVಗೆ ಯಾವುದೇ ನಿರ್ದಿಷ್ಟ ಆಂಟಿವೈರಲ್ ಚಿಕಿತ್ಸೆ ಇಲ್ಲ, ಆದ್ದರಿಂದ ಅದರ ಹರಡುವಿಕೆಯನ್ನು ನಿಯಂತ್ರಿಸಲು ತಡೆಗಟ್ಟುವಿಕೆ ಮುಖ್ಯವಾಗಿದೆ. ಚೀನಾದಲ್ಲಿ HMPV ಏಕಾಏಕಿ ಹರಡಿರುವ ಬಗ್ಗೆ ಸುದ್ದಿಗಳಿವೆ. ಇದು ಯಾವುದೇ ಇತರ ಉಸಿರಾಟದ ವೈರಸ್‌ನಂತೆ ಸಾಮಾನ್ಯ ಶೀತವನ್ನು ಉಂಟುಮಾಡುತ್ತದೆ ಮತ್ತು ವಯಸ್ಸಾದವರಲ್ಲಿ ಮತ್ತು ಚಿಕ್ಕವರಲ್ಲಿ ಇದು ಜ್ವರಕ್ಕೆ ಕಾರಣವಾಗಬಹುದು ಎಂದು ವಿವರಿಸಿದರು.

    ಚಳಿಗಾಲದಲ್ಲಿ ಉಸಿರಾಟದ ವೈರಸ್ ಸೋಂಕುಗಳು ಉಲ್ಬಣವಾಗುವುದು ಸಾಮಾನ್ಯ. ಯಾರಿಗಾದರೂ ಕೆಮ್ಮು ಮತ್ತು ಶೀತ ಇದ್ದರೆ ಅವರು ಇತರ ಜನರೊಂದಿಗೆ ಸಂಪರ್ಕಕ್ಕೆ ಬರುವುದನ್ನು ತಪ್ಪಿಸಬೇಕು. ಕೆಮ್ಮು, ಶೀತ ಬಂದಾಗ ಪ್ರತ್ಯೇಕ ಕರವಸ್ತ್ರ ಅಥವಾ ಟವೆಲ್ ಬಳಸಿ ಎಂದು ಸಲಹೆ ನೀಡಿದರು.

     

    Demo
    Share. Facebook Twitter LinkedIn Email WhatsApp

    Related Posts

    ರೈತರಿಗೆ ಸಿಹಿ ಸಮಾಚಾರ: ಕಿಸಾನ್ ಕ್ರೆಡಿಟ್‌ಕಾರ್ಡ್ ಬಗ್ಗೆ ಕೇಂದ್ರದಿಂದ ಮಹತ್ವದ ಮಾಹಿತಿ!

    May 29, 2025

    ಪಾರ್ಕಿಂಗ್ ವಿಚಾರಕ್ಕೆ ಕಿರಿಕ್: ಪಕ್ಕದ ಮನೆಯವನ ಮೂಗು ಕಚ್ಚಿದ ಭೂಪ!

    May 28, 2025

    ಮತ್ತೆ ಮೊಳಗಲಿದೆ ವಾರ್‌ ಸೈರನ್‌..ನಾಳೆ 4 ರಾಜ್ಯದಲ್ಲಿ ಮಾಕ್‌ ಡ್ರೀಲ್!?

    May 28, 2025

    ಕನ್ನಡ ಕಿಡಿ ಹಚ್ಚಿಸಿದ ಕಮಲ್‌ ಹಾಸನ್‌ ರಾಜ್ಯಸಭೆ ಪ್ರವೇಶಿಸಲು ರೆಡಿ..!

    May 28, 2025

    ಗೋಲ್ಡ್ ಪ್ರಿಯರಿಗೆ ಗುಡ್ ನ್ಯೂಸ್: ಚಿನ್ನದ ದರ ಕೊಂಚ ಇಳಿಕೆ.. ಇಲ್ಲಿದೆ ಇಂದಿನ ದರಪಟ್ಟಿ!

    May 28, 2025

    ದೇಶದ ಈ ರಾಜ್ಯದಲ್ಲಿ ಜೂನ್ 2ರವರೆಗೆ ಮಳೆಯ ಅಬ್ಬರ ಜೋರು!

    May 27, 2025

    ಸಿನಿಮಾದಲ್ಲಿ ಅಮೋಘ ಸಾಧನೆ: ರಾಷ್ಟ್ರಪತಿಯಿಂದ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್!

    May 27, 2025

    ಗ್ರಾಹಕರ ಗಮನಕ್ಕೆ: 2025ರ ಜೂನ್ ತಿಂಗಳಲ್ಲಿ 13 ದಿನ ಬ್ಯಾಂಕುಗಳಿಗೆ ರಜೆ! ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್!

    May 27, 2025

    ಕಾರಿನಲ್ಲಿ ಒಂದೇ ಕುಟುಂಬದ 7 ಮಂದಿ ಶವವಾಗಿ ಪತ್ತೆ..! ಕಾರಣ ನಿಗೂಢ

    May 27, 2025

    ಭಯೋತ್ಪಾದನೆಯನ್ನ ಕೈಬಿಡದಿದ್ರೆ ನಿಮ್ಮ ಮಕ್ಕಳ ಭವಿಷ್ಯ ಕತ್ತಲಲ್ಲಿ ಮುಳುಗುತ್ತೆ: ಮೋದಿ ವಾರ್ನಿಂಗ್‌!

    May 26, 2025

    ʼಪಾಪಿʼಸ್ತಾನದ ಪರ ಬೇಹುಗಾರಿಕೆ : ಯೂಟ್ಯೂಬರ್‌ ಜ್ಯೋತಿ ಮಲ್ಹೋತ್ರಾಗೆ 14 ದಿನ ನ್ಯಾಯಾಂಗ ಬಂಧನ!

    May 26, 2025

    ಸಮುದ್ರದಲ್ಲಿ ಮಗುಚಿದ ಬಿದ್ದ ಸ್ಪೀಡ್ ಬೋಟ್: ಕೂದಲೆಳೆಯ ಅಂತರದಲ್ಲಿ ಪಾರಾದ ಸೌರವ್ ಗಂಗೂಲಿ ಕುಟುಂಬ.!

    May 26, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.