ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನವವಿವಾಹಿತೆ ಮಂಗಳಮುಖಿಯ ಬರ್ಬರ ಕೊಲೆ ನಡೆದಿರುವ ಘಟನೆ ಬೆಂಗಳೂರಿನ ಗಾಯತ್ರಿ ಲೇಔಟ್ನಲ್ಲಿ ಜರುಗಿದೆ.
40 ವರ್ಷದ ತನುಶ್ರೀ ಮೃತ ಮಂಗಳಮುಖಿ. ಮೂರು ತಿಂಗಳ ಹಿಂದೆ ಜಗನ್ನಾಥ್ ಎಂಬುವರ ಜೊತೆ ತನುಶ್ರೀ ವಿವಾಹವಾಗಿತ್ತು. ಮೂರು ದಿನಗಳ ಹಿಂದೆಯೇ ತನುಶ್ರೀಯನ್ನು ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.
ಕೊಲೆ ತನುಶ್ರೀಯ ಪತಿ ಜಗನ್ನಾಥ್ ಮತ್ತು ಮನೆಗೆಲಸದಾಕೆ ಪರಾರಿಯಾಗಿದ್ದಾರೆ. ತನುಶ್ರೀ ಅವರು ಸಂಗಮ ಎಂಬ ಹೆಸರಿನ ಎನ್ಜಿಒ ನಡೆಸುತ್ತಿದ್ದರು. ಘಟನಾ ಸ್ಥಳಕ್ಕೆ ಕೆ.ಆರ್.ಪುರಂ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.