ನವದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೇಸ್ಗೆ ಸಂಬಂಧಿಸಿದಂತೆ ಸ್ಯಾಂಡಲ್ವುಡ್ ನಟ ದರ್ಶನ್ ಅವರು ಜಾಮೀನಿನ ಮೇಲೆ ಹೊರಗೆ ಇದ್ದಾರೆ. ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರದಲ್ಲಿ ದರ್ಶನ್ ರೆಗ್ಯುಲರ್ ಬೇಲ್ ಪಡೆದು ಹೊರಗೆ ಬಂದಿದ್ದರು. ಸುಪ್ರಿಂನಲ್ಲಿ ನಟ ದರ್ಶನ್ ಸೇರಿ ಏಳು ಮಂದಿಯ ವಿಚಾರಣೆ ಇವತ್ತು ಸುಪ್ರೀಂ ಕೋರ್ಟ್ ನಲ್ಲಿ ನಡೆದಿದೆ. ದರ್ಶನ್ ಜಾಮೀನು ರದ್ದು ಕೋರಿದ್ದ ಅರ್ಜಿ ವಿಚಾರಣೆ ನಡೆದಿತ್ತು. ವಕೀಲರ ವಾದ ಆಲಿಸಿದ ಕೋರ್ಟ್ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ.
ಕರ್ನಾಟಕ ಹೈಕೋರ್ಟ್ ಕಳೆದ ವರ್ಷ ಡಿಸೆಂಬರ್ 13 ರಂದು ನಟ ದರ್ಶನ್, ಪವಿತ್ರಗೌಡ, ಲಕ್ಷ್ಮಣ್, ಪ್ರದೂಶ್, ನಾಗರಾಜು, ಅನುಕುಮಾರ್ ಹಾಗೂ ಜಗದೀಶ್ ಅವರಿಗೆ ಜಾಮೀನು ನೀಡಿತ್ತು. ಆ ಬಳಿಕ ಉಳಿದ ಹತ್ತು ಮಂದಿ ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯ ಜಾಮೀನು ಮಂಜೂರಾಗಿತ್ತು.
ನೀವು ಯಾವಾಗಲೂ ಯಂಗ್ ಆಗಿ ಕಾಣಿಸ್ಬೇಕಾ!? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ!
ಇದನ್ನು ಪ್ರಶ್ನಿಸಿ ಬೆಂಗಳೂರು ನಗರ ಪೊಲೀಸರು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು. ಏಪ್ರಿಲ್ 2 ರಂದು ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಏಪ್ರಿಲ್ 22 ಕ್ಕೆ ಮುಂದೂಡಿತ್ತು. ಸದ್ಯ ಮಂಗಳವಾರ ವಿಚಾರಣೆ ನಡೆಸಿ ಹಲವು ಪ್ರಶ್ನೆಗಳನ್ನು ಕೇಳಿದ್ದು, ಇನ್ನಷ್ಟು ವಿಚಾರಣೆ ಅಗತ್ಯವಿದೆ ಎಂದು ಮೇ 14 ಕ್ಕೆ ಮುಂದೂಡಿತು.
ಸಿಂಘ್ವಿ ಪ್ರತಿವಾದ ಮಾಡಿ, ದರ್ಶನ್ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ. ಯಾವ ಜಾಗದಲ್ಲಿಯೂ ಎವಿಡೆನ್ಸ್ ಎಲ್ಲಿಯೂ ಇಲ್ಲ. ದರ್ಶನ್ ಹತ್ಯೆ ಮಾಡಿರುವುದಕ್ಕೆ ಸಾಕ್ಷ್ಯಗಳಿಲ್ಲ. ಪೋಟೊಗ್ರಾಫ್ ಗಳಿವೆ ಎಂದಿದ್ದಾರೆ.
ವಿಡಿಯೋದಲ್ಲಿ ಇಲ್ಲ. ನನ್ನ ಮೋಬೈಲ್ ನಿಂದ ವಿಡಿಯೋ ಆಗಿಲ್ಲ. ನನಗೂ ಹತ್ಯೆಗೂ ಸಂಬಂಧವಿಲ್ಲ ದರ್ಶನ್ ಪರ ವಾದ ಮಾಡಿದ್ದಾರೆ. ಮೂರು ಸೆಕೆಂಡ್ ವಿಡಿಯೋ ಇದೆ ಎನ್ನುತ್ತಿದ್ದಾರೆ. ಅದರಲ್ಲಿ ಏನು ಗೊತ್ತಾಗುತ್ತೆ, ಅದನ್ನು ಹೇಗೆ ಸಾಕ್ಷ್ಯ ಎಂದು ಪರಿಗಣಿಸಲಾಗುತ್ತೆ. ನಾನು ಕೂಡ ಆ ವಿಡಿಯೋ ನೋಡಿಲ್ಲ ಎಂದು ಸಿಂಘ್ವಿ ವಾದ ಮಾಡಿದ್ದಾರೆ.
ಐ ವಿಟ್‌ನೆಸ್‌ಗಳ ಹೇಳಿಕೆಯನ್ನು ಪಡೆಯದೆ ನನ್ನ ಬಂಧಿಸಲಾಗಿದೆ. ಬಂಧಿಸಿದ ಬಳಿಕ ಐವಿಟ್ ನೆಸ್ ಗಳ ಹೇಳಿಕೆ ಪಡೆಯಲಾಗಿದೆ. ಹತ್ಯೆ ನಡೆದಿದೆ ಎಲ್ಲಲಾದ ಜಾಗದಲ್ಲಿ ನನ್ನ ಕೆಲಸಗಾರರು ಇರಲಿಲ್ಲ. ಆ ಜಾಗದ ಮಾಲೀಕ ನಾನು ಅಲ್ಲ. ಆ ಜಾಗಕ್ಕೂ ನನಗೂ ಏನೂ ಸಂಬಂಧ ಇಲ್ಲ ಪಾರ್ಕಿಂಕ್ ಪ್ಲೇಸ್ ನಲ್ಲಿ ಹತ್ಯೆಯಾಗಿದೆ ಎನ್ನುತ್ತಿದ್ದಾರೆ. ಅದು ನನ್ನ ಜಾಗ ಅಲ್ಲ, ಅದಕ್ಕೂ ನನಗೂ ಏನೂ ಸಂಬಂಧ ಅಲ್ಲ ಎಂದು ಸಿಂಘ್ವಿ ವಾದ ಮಾಡಿದ್ದಾರೆ.ಬಂಧಿಸಿದ ರೀತಿಯೇ ಸರಿಯಿಲ್ಲ. ನನ್ನ ಬಂಧನಕ್ಕೆ ಯಾವುದೇ ಕಾರಣಗಳಿಲ್ಲ ಎಂದು ವಾದ ಮಾಡಿದ್ದಾರೆ.
ಸದ್ಯ ವಕೀಲರ ವಾದ ಆಲಿಸಿದ ಕೋರ್ಟ್ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ. ಒಂದು ವೇಳೆ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದ್ದರೆ ಕೂಡಲೇ ನಟ ಜೈಲು ಸೇರಬೇಕಾಗಿತ್ತು. ಆದರೆ, ಮೇ 14 ರವೆಗೆ ನಟ ದರ್ಶನ್ ಗೆ ರಿಲೀಫ್ ಸಿಕ್ಕಿದೆ.