ಧಾರವಾಡ ; ರಾಜ್ಯದಲ್ಲಿ ಮುಸ್ಲಿಮರು ಬಿಟ್ಟು ಬೇರೆ ಯಾರು ಸುರಕ್ಷಿತ ಇಲ್ಲ ಎಂದು ವಿಧಾನಸಭಾ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಆರೋಪ ಮಾಡಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ವಿದ್ಯಾರ್ಥಿ ಜನಿವಾರ ತೆಗೆಸಿದ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಸಿದ್ಧರಾಮಯ್ಯ ನವರ ಸರ್ಕಾರ ಮುಸ್ಲಿಮರಿಗೆ ಬಿಟ್ಟು ಬೇರೆ ಯಾರಿಗೂ ಸರ್ಕಾರನೇ ಇಲ್ಲ ಎಂಬಂತೆ ಮಾಡುತ್ತಿದ್ದುಈ ರಾಜ್ಯದಲ್ಲಿ ಮುಸ್ಲಿಮರು ಬಿಟ್ಟು ಬೇರೆ ಯಾರು ಸುರಕ್ಷಿತ ಇಲ್ಲಾ ಎಂದು ಕಿಡಿ ಕಾರಿದರು.
ಹಳೆ ಪ್ರೇಮಿಯಿಂದ ಬ್ಲ್ಯಾಕ್‌ಮೇಲ್: ಮರ್ಯಾದೆಗೆ ಅಂಜಿ ನೇಣಿಗೆ ಶರಣಾದ ಯುವತಿ – ಡೆತ್ ನೋಟ್ ನಲ್ಲಿ ಏನಿತ್ತು?
ಇವತ್ತು ಜನಿವಾರ ಕೇವಲ ಒಂದೇ ಸಮಾಜಕ್ಕೆ ಅಲ್ಲ, ಹಿಂದೂ ಧರ್ಮದ ಅವಿಭಾಜ್ಯ ಅಂಗ ಆಗಿದ್ದು. ಮಹಾಭಾರತದ ಕಾಲದಿಂದ ನಾವು ನೋಡಿದ್ದೇವೆ. ಬ್ರಾಹ್ಮಣ ಸಮಾಜ, ಜೈನ ಸಮಾಜದಲ್ಲಿ ಜನಿವಾರ ಹಾಕುವಂತ ಪದ್ಧತಿ ಇದೆ. ಲಿಂಗಾಯತರು ಶಿವ ದಾರ ಹಾಕ್ತಾರೆ. ಬೇರೆ ಬೇರೆ ಪದ್ಧತಿ ಸನಾತನ ಧರ್ಮದಲ್ಲಿ ಇವೆ ಇವತ್ತು ಮುಸ್ಲಿಮರಿಗೆ ಬುರ್ಕಾ ಹಾಕಲು ವಿರೋಧ ಇಲ್ಲಾ, ಹಿಜಾಬ್ ಹಾಕಲು ವಿರೋಧ ಇಲ್ಲಾ. ಆದರೆ ಒಳಗೆ ಇರುವ ಜನಿವಾರ ಹಾಕಿಕೊಂಡರೆ ಇವರಿಗೆ ಅವರಿಗೆ ತೊಂದರೆ ಆಗಿದೆ.ಇವರು ಮೇಲೆ ಕುತು ಏನು ಕುಮ್ಮಕ್ಕು ಕೊಡುತಿದ್ದಾರೆ, ಅವರು ಯಾರಿಗೆ ಸಂದೇಶ ಕೊಡುತ್ತಿದ್ದಾರೆ. ಅವರು ಇದರ ಮೇಲೆ ಕುಣಿಯುತಿದ್ದಾರೆ. ಹೀಗಾಗಿ ಶಿವಮೊಗ್ಗ, ಬೀದರ್ ಹಾಗೂ ಧಾರವಾಡದಲ್ಲಿ ಈ ಘಟನೆ ಆಗಲು ಸಿದ್ಧರಾಮಯ್ಯ ನವರ ಕುಮ್ಮಕ್ಕು ಕಾರಣ ಆಗಿದೆ .ಅವರ ನೇರವಾಗಿ ಹೇಳದೇ ಸಂದೇಶದ ಮೂಲಕ ಇದನ್ನ ಮಾಡುತ್ತಿದ್ದಾರೆ ಎಂದರು.