ನಗರದ ಡಿಎಆರ್ ಪೊಲೀಸ್ ಮೈದಾನದಲ್ಲಿ ಇಂದು ಬೆಳಿಗ್ಗೆ ಎಸ್ಪಿ ಡಾ.ಶೋಭಾರಾಣಿ ಅವರು ರೌಡಿಶೀಟರ್ ಗಳ ಪರೇಡ್ ನಡೆಸಿದ್ದರು. ಜಿಲ್ಲೆಯ ಒಟ್ಟು 17 ಪೋಲಿಸ್ ಠಾಣೆಗಳ ವ್ಯಾಪ್ತಿಯ 400 ಕ್ಕೂ ಹೆಚ್ಚು ರೌಡಿ ಶೀಟರ್ ಗಳು ಈ ಪರೇಡ್ ನಲ್ಲಿ ಹಾಜರಿದ್ದರು ಎಂದು ತಿಳಿದು ಬಂದಿದೆ.
ನಗರದ ಕೌಲ್ ಬಜಾರ್, ಗಾಧಿನಗರ, ಬ್ರೂಸ್ ಪೇಟೆ, ಎಪಿಎಂಸಿ, ಬಳ್ಳಾರಿ ಗ್ರಾಮೀಣ, ಕುರುಗೋಡು ಪೋಲಿಸ್ ಠಾಣೆ ಸೇರಿದಂತೆ ಜಿಲ್ಲೆಯ 17 ಪೋಲಿಸ್ ಠಾಣೆಯ ರೌಡಿಶೀಟರ್ ಗಳಿಗೆ ಎಸ್ಪಿ ಡಾ.ಶೋಭಾರಾಣಿಯವರು ಕ್ಲಾಸ್ ತೆಗೆದುಕೊಂಡರು. ಜಿಲ್ಲೆಯ 400 ಕ್ಕೂ ಹೆಚ್ಚು ರೌಡಿ ಶೀಟರ್ ಗಳ ಪೈಕಿ 67 ಜನ ಆ್ಯಕ್ಟಿವ್ ರೌಡಿಗಳಿದ್ದಾರೆಂದು ತಿಳಿದು ಬಂದಿದೆ.
ವಿಜ್ಞಾನಿಗಳನ್ನೇ ಅಚ್ಚರಿಗೊಳಿಸಿದೆ ಈ ಹಣ್ಣು..! ಎಷ್ಟೇ ಗಂಭೀರ ಕಾಯಿಲೆಯಾಗಿದ್ರೂ ಅದರಿಂದ ಸಿಗಲಿದೆ ಮುಕ್ತಿ
ಇನ್ನು ರೌಡಿಶೀಟರ್ ಗಳಿಗೆ ಕ್ಲಾಸ್ ತೆಗೆದುಕೊಂಡ ಎಸ್ಟಿ ಡಾ.ಶೋಭಾರಾಣಿಯವರು ಅಕ್ರಮ ಚಟುವಟಿಕೆಗಳಲ್ಲಿ ಭಾಗಯಾಗದಂತೆ ಸೂಚಿಸಿದರಲ್ಲದೇ, ರೌಡಿಗಳ ವೃತ್ತಿಯನ್ನು ವಿಚಾರಿಸಿದ ಎಸ್ಪಿಯವರು ಇನ್ನು ಮುಂದೆ ಕ್ರೈಂ ನಲ್ಲಿ ಯಾರು ಸಹ ಭಾಗಿಯಾಗಬಾರದು ಎಂದು ಖಡಕ್ ಎಚ್ಚರಿಕೆ ನೀಡಿದರು.