ಮಂಡ್ಯ : ಸಾವಿನ ಮನೆಯಲ್ಲಿ ಯಾರೂ ರಾಜಕಾರಣ ಮಾಡಬಾರದು. ಫಹಲ್ಗಾಮ್ ನಲ್ಲಿ ನಡೆದ ಘಟನೆ ನಿಜಕ್ಕೂ ಖಂಡನೀಯ ಎಂದು ಶಾಸಕ ರವಿಕುಮಾರ್ ಗಾಣಿಗ ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯದಲ್ಲಿ ಮಾತನಾಡಿದ ಅವರು,ಸಂವಿಧಾನವನ್ನು ತಿರುಚಿ ರಾಜಕಾರಣ ಮಾಡುವುದು ಸರಿಯಲ್ಲ. ಸಂವಿಧಾನಕ್ಕೆ ನಾವು ಗೌರವ ಕೊಡಬೇಕು. ಹೆಣ ಇಟ್ಟುಕೊಂಡು ರಾಜಕಾರಣ ಮಾಡುವುದು ಸರಿಯಲ್ಲ. ನಾವು ಶಾಂತಿ ಪ್ರಿಯರು ಈ ಘಟನೆ ನಿಜಕ್ಕೂ ಖಂಡನೀಯ.
ಸಾವಿನ ಮನೆಯೆಂಬುದು ಕಾಣದೇ ರಾಜಕಾರಣ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಭಾರತದಲ್ಲಿ ಹೆಣದ ಮೇಲಿನ ರಾಜಕಾರಣ ನಡೆಯಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರಕ್ಕೆ ಜನ ತಕ್ಕ ಉತ್ತರ ನೀಡಲಿದ್ದಾರ ಎಂದು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ರವಿಕುಮಾರ್ ಗಣಿಗ ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ಬಿಜೆಪಿಗರ ಜನಾಕ್ರೋಶ ಯಾತ್ರೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಹಿಳೆಯರ ಬಾಯಿಗೆ ಮೋದಿ ಮಣ್ಣಾಕಿದರು. ಮೋದಿ ಬೆಲೆ ಏರಿಕೆ ಮಾಡಿದ್ದಾರೆ. ಅವರ ವಿರುದ್ದ ಇಂದು ಮಂಡ್ಯದಲ್ಲಿ ಪ್ರತಿಭಟನೆ ಮಾಡ್ತಿದ್ದಾರಾ?. ಮಹಿಳೆಯರ ಬಾಯಿಗೆ ಮೋದಿಯವ್ರು ಮಣ್ಣಾಕಿದ್ದಾರೆ. ಮಹಿಳೆಯರ ಬಾಯಿಗೆ ಮೋದಿ ಮಣ್ಣಾಕಿದಕ್ಕೆ ಪ್ರತಿಭಟನೆ ಮಾಡ್ತಿದ್ದಾರಾ..? ಎಂದು ಪ್ರಶ್ನಿಸಿದರು.