ಹುಬ್ಬಳ್ಳಿ: ದೇಶದಲ್ಲಿ ಎಲ್ಲಿಯವರೆಗೆ ಇವರೆಲ್ಲಾ ಇರುತ್ತಾರೆ ಅಲ್ಲಿಯವರೆಗೆ ಭಾರತದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಿಂದೂಗಳ ಪಕ್ಷವೇ ಅಲ್ಲ. ಅದು ಹುಟ್ಟಿದ್ದೇ ಮುಸ್ಲಿಂರಿಗಾಗಿ. ಎಲ್ಲಿಯವರಗೆ ದೇಶದಲ್ಲಿ ಮುಸ್ಲಿಂರು ಮತ್ತು ತಾಯಿಗಂಡರು ಇರುತ್ತಾರೋ ಅಲ್ಲಿವರೆಗೆ ಅವರು ಕಲ್ಲು ಹೊಡೆಯೋರೆ. ಸಿಎಂ ಸಿದ್ದರಾಮಯ್ಯ ಪಾಕಿಸ್ತಾನ ಏಜೆಂಟ್ ಇದ್ದಂತೆ. ಅವರು ಬೇಕಾದರೆ ಪಾಕಿಸ್ತಾನಕ್ಕೆ ಹೋಗಿ ಪ್ರಧಾನಿ ಆಗಲಿ. ಯಾರು ಬೇಡ ಅಂತಾರೇ ಎಂದು ಹರಿಹಾಯ್ದರು. ಸಂತೋಷ ಲಾಡ್ ಮೋದಿ ಮುಂದೆ ಬಚ್ಚಾ. ಅವರ ಬಗ್ಗೆ ಹೀಯಾಳಿಸಿ ಮಾತನಾಡಿದರೆ ಸೋನಿಯಾ, ರಾಹುಲ್ ಗಾಂಧಿ ಖುಷಿಯಾಗುತ್ತಾರೆ. ತನ್ನ ಮಂತ್ರಿ ಸ್ಥಾನ ಉಳಿಯುತ್ತೆ ಅಂತ ಆ ರೀತಿ ಮಾತನಾಡುತ್ತಿದ್ದಾರೆ. ಪ್ರಧಾನಿ ಮೋದಿ ಬಗ್ಗೆ ಮಾತನಾಡಲು ಕಾಂಗ್ರೆಸ್ಗೆ ನೈತಿಕತೆ ಇಲ್ಲ ಎಂದು ಕುಟುಕಿದರು.
ಅಂಬೇಡ್ಕರ್ ಹೇಳಿದ್ದು ನೋಡಿದರೆ ಒಬ್ಬ ದಲಿತ ಕೂಡ ಕಾಂಗ್ರೆಸ್ಗೆ ಮತ ಹಾಕಬಾರದು. ರೈಲ್ವೆ ಪರೀಕ್ಷೆಯಲ್ಲಿ ಮಂಗಳಸೂತ್ರ, ಕುಂಕುಮ, ಜನಿವಾರ ನಿಷೇಧ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಯಾರೇ ಈ ರೀತಿ ಮಾಡಿದರು ಕೂಡ ಅದು ತಪ್ಪೆ. ಮಂಗಳಸೂತ್ರ, ಕುಂಕುಮಕ್ಕೆ ಕೈ ಹಾಕಿದವರನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಪಾಕಿಸ್ತಾನವು ಅಣುಬಾಂಬ್ ದಾಳಿ ಮಾಡುವುದಾಗಿ ಹೇಳಿಕೆ ಕುರಿತು, ನಮ್ಮಲ್ಲಿರುವ ಅಣು ಬಾಂಬ್ಗಳು ಪಟಾಕಿ ಹಚ್ಚಲು ಅಲ್ಲ. ಪಾಕಿಸ್ತಾನ ಮೇಲೆ ನಮ್ಮಲ್ಲಿರುವ ನಾಲ್ಕು ಒಗೆದರೆ ಸಾಕು ಅವರು ಸರ್ವನಾಶ ಆಗುತ್ತಾರೆ. ಭಾರತದ ಶಕ್ತಿಯನ್ನು ಯಾರು ಹಗುರವಾಗಿ ಪರಿಗಣಿಸಬಾರದು. ನೆಹರು ಇದ್ದ ಕಾಲದ ಭಾರತ ಈಗಿಲ್ಲ. ವಿಶ್ವದಲ್ಲೇ ಬಲಿಷ್ಠವಾಗಿದೆ ಎಂದರು.