ಬೆಂಗಳೂರು: ದಾಳಿ ನಂತರ ಪ್ರೆಸ್‌ಮೀಟ್ ಮಾಡಿಲ್ಲ ಪ್ರಧಾನಿ ಬಿಹಾರದಲ್ಲಿ ಪ್ರಚಾರ ಮಾಡಿದ್ರು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಮೊನ್ನೆ ಮೆರವಣಿಗೆ ಮಾಡಿದ್ರು.
ನಿಮ್ಮದೇ ಆಡಳಿತ ಇದ್ದಾಗ ಹಿಂದೂಗಳು ಸುರಕ್ಷಿತವಾಗಿಲ್ಲ ಅಂತಾರೆ. ಪಹಲ್ಗಾಮ್ ಘಟನೆ ಆದ ಬಳಿಕ ಪ್ರಧಾನಿಗಳು ಕಾಶ್ಮೀರಕ್ಕೆ ಹೋಗಿ ಪ್ರೆಸ್ ಮೀಟ್ ಮಾಡಲಿಲ್ಲ. ಬದಲಾಗಿ ಬಿಹಾರಕ್ಕೆ ಹೋಗಿ ಭಾಷಣ ಮಾಡಿದ್ರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ನಡುವೆ ಮಾಧ್ಯಮಗಳಲ್ಲಿ ಯುದ್ಧ ಶುರುವಾಗತ್ತೆ, ಫೈಟರ್ ಜೆಟ್ ರೆಡಿ ಇದೆ ಅಂತ ಸುದ್ದಿ ಆಗುತ್ತಿದೆ. ಪಾಕಿಸ್ತಾನಕ್ಕೆ ನೀರು ಹೋಗುತ್ತಿಲ್ಲ ಎಂದು ಯಾವುದೋ ಕೆರೆ ನೀರು ತೋರಿಸುತ್ತಿದ್ದಾರೆ. ಈಗ ಟೆರಿರಿಸ್ಟ್ ಮನೆ ಧ್ವಂಸ ಮಾಡ್ತಿದ್ದಾರೆ ಅಂತ ಸುದ್ದಿ ಆಗ್ತಿದೆ. ಟೆರರಿಸ್ಟ್‌ಗಳ ಮನೆಗಳ ಬಗ್ಗೆ ಮೊದಲು ಇದ್ದದ್ದು ಗೊತ್ತಿರಲಿಲ್ಲವೇ? ಎಂದು ಪ್ರಶ್ನಿಸಿದರು.