Close Menu
Ain Live News
    Facebook X (Twitter) Instagram YouTube
    Thursday, June 26
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಇದರ ಅರಿವು ಎಷ್ಟೋ ಜನರಿಗಿಲ್ಲ: ಈರುಳ್ಳಿ ರಸ ಈ ರೀತಿ ಬಳಸಿದ್ರೆ ಕೂದಲು ಎರಡು ಪಟ್ಟು ವೇಗವಾಗಿ ಬೆಳೆಯುತ್ತೆ!

    By AIN AuthorJune 26, 2025
    Share
    Facebook Twitter LinkedIn Pinterest Email
    Demo

    ಅನೇಕ ಹೆಣ್ಣುಮಕ್ಕಳು ಉದ್ದ ಮತ್ತು ದಪ್ಪ ಕೂದಲಿಗಾಗಿ ನಾನಾ ಮನೆಮದ್ದುಗಳನ್ನು ಬಳಸುತ್ತಾರೆ. ಅವುಗಳಲ್ಲಿ ಒಂದು ಈರುಳ್ಳಿ. ಆದರೆ ಈರುಳ್ಳಿ ಬಳಸಿದ ನಂತರ ಯಾಕೆ ಕೂದಲು ಸರಿಯಾಗಿ ಬರುತ್ತಿಲ್ಲ ಅಂದುಕೊಳ್ಳುತ್ತೀರಿ. ನಿಜ ಹೇಳಬೇಕೆಂದರೆ ನಮ್ಮಲ್ಲಿ ಹಲವರಿಗೆ ಅದನ್ನು ಬಳಸುವ ಸರಿಯಾದ ವಿಧಾನವೇ ತಿಳಿದಿಲ್ಲ. ಆದ್ದರಿಂದ ಈರುಳ್ಳಿ ರಸ ಸರಿಯಾಗಿ ಬಳಸುವುದು ಹೇಗೆ ಎಂದು ನೋಡೋಣ…

    Home Loan: ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ಬೇಕೇ..? ಹಾಗಾದ್ರೆ ಈ ಬ್ಯಾಂಕ್’ಗಳ ಆಫರ್ ಬಗ್ಗೆ ತಿಳಿಯಿರಿ

    ಪ್ರತಿಯೊಬ್ಬರೂ ಬಯಸುವುದು ಉದ್ದ ಮತ್ತು ದಪ್ಪ ಕೂದಲನ್ನು. ಆದರೆ ಮಾಲಿನ್ಯ, ಕೆಟ್ಟ ಆಹಾರ ಪದ್ಧತಿ ಮತ್ತು ಅಪೂರ್ಣ ನಿದ್ರೆ ಈ ಕನಸನ್ನು ನನಸಾಗಿಸಲು ಬಿಡುವುದಿಲ್ಲ.

    ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಈರುಳ್ಳಿ ಬಳಕೆ ತುಸು ಹೆಚ್ಚೇ ಇದೆ. ಹೆಚ್ಚು ಕಡಿಮೆ ಪ್ರತಿಯೊಂದು ಅಡುಗೆಯೂ ಈರುಳ್ಳಿ ಇಲ್ಲದೆ ಪೂರ್ಣವಾಗುವುದಿಲ್ಲ ಬಿಡಿ. ಜನರು ಅಷ್ಟರಮಟ್ಟಿಗೆ ಈರುಳ್ಳಿಯ ಮೇಲೆ ಅವಲಂಬಿತರಾಗಿದ್ದಾರೆ. ಹೌದು, ದೇಶದಲ್ಲಿ ನಾವು ಹೆಚ್ಚು ಸೇವಿಸುವ ತರಕಾರಿಗಳಲ್ಲಿ ಈರುಳ್ಳಿಯೂ ಒಂದಾಗಿದೆ

    ಆದರೆ ಇದು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತವೆ ಎಂಬ ವಿಷಯ ನಿಮಗೆ ಗೊತ್ತಿದೆಯೇ?. ಈರುಳ್ಳಿ ಕೂದಲು ಕಿರುಚೀಲಗಳನ್ನು ಬಲಪಡಿಸಲು, ಕೂದಲು ಉದುರುವುದನ್ನು ತಡೆಯಲು ಮತ್ತು ಕೂದಲು ತೆಳುವಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ. ಆದರೆ ಇದನ್ನು ಹಚ್ಚುವುದು ಹೇಗೆ ಅಂತೀರಾ?.

    ಕೆಲವರು ಈರುಳ್ಳಿಯನ್ನು ರುಬ್ಬಿ ಅಥವಾ ಅದರ ರಸ ಹೊರ ತೆಗೆದು ನೇರವಾಗಿ ಕೂದಲಿಗೆ ಹಚ್ಚುತ್ತಾರೆ. ಆದರೆ ಈರುಳ್ಳಿಯನ್ನು ಹಚ್ಚುವ ಅತ್ಯುತ್ತಮ ವಿಧಾನವೆಂದರೆ ಅದು ಈರುಳ್ಳಿ ಎಣ್ಣೆ ಎನ್ನುತ್ತಾರೆ ತಜ್ಞರು. ಈರುಳ್ಳಿ ಎಣ್ಣೆ ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿಲ್ಲ. ಹಾಗಂತ ನೀವು ಬೇಸರಗೊಳ್ಳುವುದು ಬೇಡ. ಏಕೆಂದರೆ ನೀವು ಇದನ್ನು ಮನೆಯಲ್ಲಿಯೇ ತಯಾರಿಸಬಹುದು.

    ತಯಾರಿಕೆಯ ಪ್ರಕ್ರಿಯೆಯು ತುಂಬಾ ಸುಲಭ. ಈರುಳ್ಳಿ ಎಣ್ಣೆಯನ್ನು ನಿಯಮಿತವಾಗಿ ಬಳಸುವುದರಿಂದ ನಿಮ್ಮ ಕೂದಲನ್ನು ಬಲವಾಗಿ ಮತ್ತು ದಪ್ಪವಾಗಿಡಲು ಸಹಾಯ ಮಾಡುತ್ತದೆ. ಹಾಗಾದರೆ ಮನೆಯಲ್ಲಿ ಈರುಳ್ಳಿ ಎಣ್ಣೆಯನ್ನು ಹೇಗೆ ತಯಾರಿಸಬೇಕೆಂದು ಮುಂದೆ ನೋಡೋಣ ಬನ್ನಿ

    ಮೊದಲಿಗೆ ಈರುಳ್ಳಿ ತೆಗೆದುಕೊಳ್ಳಿ. ಆ ನಂತರ ಗ್ರೈಂಡರ್ ಅಥವಾ ಜ್ಯೂಸ್ ಮೇಕರ್ ಬಳಸಿ ಈರುಳ್ಳಿ ರಸವನ್ನು ಹೊರತೆಗೆಯಿರಿ. ಹೆಚ್ಚು ರಸ ಸಿಗದಿದ್ದರೆ, ಎಣ್ಣೆಯನ್ನು ತಯಾರಿಸಲು ನೀವು ಈರುಳ್ಳಿ ಪೇಸ್ಟ್ ಸಹ ತೆಗೆದುಕೊಳ್ಳಬಹುದು.

    ಈಗ ಬಾಣಲೆಯಲ್ಲಿ ತೆಂಗಿನ ಎಣ್ಣೆ ಸೇರಿಸಿ, ನಂತರ ಎಣ್ಣೆಯಲ್ಲಿ ಈರುಳ್ಳಿ ರಸ ಅಥವಾ ಪೇಸ್ಟ್ ಸೇರಿಸಿ. ಚೆನ್ನಾಗಿ ಬೆರೆಸಿ. ನಂತರ ಕೆಳಗಿಳಿಸಿ, ಅದನ್ನು ತಣ್ಣಗಾಗಲು ಬಿಡಿ. ಜಾಲರಿ ಬಳಸಿ ಎಣ್ಣೆಯನ್ನು ಸೋಸಿ. ನಂತರ ಒಂದು ಪಾತ್ರೆಯಲ್ಲಿ ಎಣ್ಣೆ ಸಂಗ್ರಹಿಸಿ. ನೀವು ಈ ಎಣ್ಣೆಯನ್ನು 6 ತಿಂಗಳು ಬಳಸಬಹುದು.

    ನಿಮ್ಮ ಕೂದಲನ್ನು ಮಧ್ಯದಿಂದ ಭಾಗ ಮಾಡಿ. ಈಗ ನಿಮ್ಮ ನೆತ್ತಿಗೆ ಎಣ್ಣೆಯನ್ನು ಹಚ್ಚಲು ಪ್ರಾರಂಭಿಸಿ. ನಿಧಾನವಾಗಿ ಮಸಾಜ್ ಮಾಡಿ, ನೆತ್ತಿ ಈ ಎಣ್ಣೆ ಹೀರಿಕೊಳ್ಳಲು ಬಿಡಿ. ಈರುಳ್ಳಿ ಎಣ್ಣೆಯಿಂದ ನಿಮ್ಮ ಕೂದಲಿಗೆ ಅನೇಕ ಪ್ರಯೋಜನಗಳಿವೆ ಅದೇನೆಂದು ನೋಡೋಣ ಬನ್ನಿ…

    ಈರುಳ್ಳಿ ಎಣ್ಣೆ ನಿಮ್ಮ ಕೂದಲಿನ ಆಳಕ್ಕಿಳಿದು ಪೋಷಣೆ ನೀಡುತ್ತದೆ. ಒಣ ಕೂದಲಿಗೆ ಈ ಎಣ್ಣೆ ಬಹಳ ಒಳ್ಳೆಯದು. ಒಣ ಕೂದಲು ಹೆಚ್ಚು ಒಡೆಯುತ್ತದೆ. ಆದರೆ ನೆತ್ತಿಯ ಮೇಲೆ ಈರುಳ್ಳಿ ಎಣ್ಣೆಯನ್ನು ಬಳಸುವುದರಿಂದ ಕೂದಲು ಒಡೆಯುವುದನ್ನು ತಡೆಯುತ್ತದೆ. ಎಲ್ಲರಿಗೂ ಗೊತ್ತಿರುವ ಹಾಗೆ ಶುಷ್ಕತೆ ತಲೆಹೊಟ್ಟುಗೆ ಕಾರಣವಾಗುತ್ತದೆ.

    ಆದರೆ ಈರುಳ್ಳಿ ಎಣ್ಣೆಯನ್ನು ನಿಯಮಿತವಾಗಿ ಹಚ್ಚುವುದರಿಂದ ತಲೆಹೊಟ್ಟು ತಡೆಯುತ್ತದೆ. ನಿಮ್ಮ ತಲೆಯಲ್ಲಿ ಈರುಳ್ಳಿ ಎಣ್ಣೆ ದೀರ್ಘಕಾಲ ಇರಲು ಸಮಯವಿಲ್ಲದಿದ್ದರೆ ಚಿಂತಿಸಬೇಡಿ, ನೀವು ತಲೆಗೆ ಶಾಂಪೂ ಹಾಕುವ ಮೊದಲು ಈ ಎಣ್ಣೆಯನ್ನು ನಿಮ್ಮ ಕೂದಲಿಗೆ ಹಚ್ಚಿದರೂ ಸಹ, ಇದು ನಿಮ್ಮ ಕೂದಲಿಗೆ ಕಂಡಿಷನರ್ ಆಗಿ ಕೆಲಸ ಮಾಡುತ್ತದೆ ಜೊತೆಗೆ ನಿಮ್ಮ ಕೂದಲನ್ನು ಮೃದುವಾಗಿಡುತ್ತದೆ.

    ನಿಮ್ಮ ನೆತ್ತಿಯಲ್ಲಿ ರಕ್ತ ಪರಿಚಲನೆ ಸುಧಾರಿಸುವ ಮೂಲಕ, ಈರುಳ್ಳಿ ಎಣ್ಣೆ ಬಲವಾದ ಮತ್ತು ದಪ್ಪ ಕೂದಲನ್ನು ಪಡೆಯಲು ಸಹಾಯ ಮಾಡುತ್ತದೆ. ನೀವು ಮಂದ ಕೂದಲು ಹೊಂದಿದ್ದರೆ ಈರುಳ್ಳಿ ಎಣ್ಣೆಯನ್ನು ಬಳಸಿ. ಈ ಎಣ್ಣೆಯಿಂದ ನಯವಾದ ಮತ್ತು ಹೊಳೆಯುವ ಕೂದಲು ನಿಮ್ಮದಾಗುತ್ತದೆ.

    ಈರುಳ್ಳಿ ಎಣ್ಣೆ ಹಚ್ಚಿದರೆ ಸ್ವಲ್ಪ ಕೆಟ್ಟ ವಾಸನೆ ಬರಬಹುದು. ಆದರೆ ಇದು ಎಷ್ಟೆಲ್ಲಾ ಅದ್ಭುತ ಪ್ರಯೋಜನಗಳನ್ನು ಹೊಂದಿದೆ ಎಂಬುದನ್ನು ಗಮನಿಸಿ. ನಿಮ್ಮ ಕೂದಲಿನಿಂದ ಸರಿಯಾಗಿ ಎಣ್ಣೆ ಹೋಗಬೇಕೆಂದರೆ ನೀವು ನಿಮ್ಮ ಕೂದಲನ್ನು ಚೆನ್ನಾಗಿ ತೊಳೆಯಬೇಕಾಗುತ್ತದೆ. ನಿಮ್ಮ ಕೂದಲಿಗೆ ನಿಯಮಿತವಾಗಿ ಈರುಳ್ಳಿ ಎಣ್ಣೆಯನ್ನು ಬಳಸುವುದರಿಂದ ಹೊಸ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಅಲ್ಲದೆ, ಈರುಳ್ಳಿ ಎಣ್ಣೆ ಬ್ಯಾಕ್ಟೀರಿಯಾದ ಸೋಂಕನ್ನು ತಡೆಯುತ್ತದೆ ಮತ್ತು ನಿಮ್ಮ ಕೂದಲನ್ನು ಆರೋಗ್ಯವಾಗಿರಿಸುತ್ತದೆ.

    ಕೂದಲು ಉದುರುವುದು, ತಲೆಹೊಟ್ಟು, ಕೂದಲು ನಷ್ಟ ಇವು ನಾವು ಇಂದು ಎದುರಿಸುತ್ತಿರುವ ಕೆಲವು ಸಾಮಾನ್ಯ ಕೂದಲು ಸಮಸ್ಯೆಗಳು. ಈ ಸಮಸ್ಯೆ ನಿವಾರಣೆಗೆ ನೀವು ಯಾವುದಾದರೂ ಅದ್ಭುತ ಮನೆಮದ್ದುಗಳನ್ನು ಹುಡುಕುತ್ತಿದ್ದರೆ ಈರುಳ್ಳಿ ಎಣ್ಣೆಯನ್ನು ಮರೆಯದೆ, ತಪ್ಪದೆ ಬಳಸಿ. ಇದರಿಂದ ನಿಮಗೆ ಅತ್ಯದ್ಭುತ ಫಲಿತಾಂಶ ಸಿಗುವುದಂತೂ ಖಚಿತ.

    Demo
    Share. Facebook Twitter LinkedIn Email WhatsApp

    Related Posts

    ಡೇಂಜರ್.. ಡೇಂಜರ್: ಹೃದಯ, ಕಣ್ಣು ಎರಡಕ್ಕೂ ಅಪಾಯಕಾರಿ ಅಧಿಕ ರಕ್ತದೊತ್ತಡ!

    June 26, 2025

    Medicine: ಮೆಡಿಸಿನ್ ತೆಗೆದುಕೊಳ್ಳುವಾಗ ನಿಮಗೆ ನೆನಪಿರಲಿ.. ರಾಜ್ಯದಲ್ಲಿ ಸೌಂದರ್ಯ ವರ್ಧಕಗಳು ಸೇರಿ 15 ಔಷಧಿಗಳು ಬ್ಯಾನ್..!

    June 26, 2025

    Green Tea: ರಾತ್ರಿ ಮಲಗುವ ಮುನ್ನ ಗ್ರೀನ್ ಟೀ ಕುಡಿಯುವುದು ಒಳ್ಳೆಯದಾ? ಇಲ್ಲಿದೆ ನೋಡಿ ಉತ್ತರ

    June 26, 2025

    ಮೊಬೈಲ್ ಬ್ಯಾಟರಿ ಬೇಗ ಖಾಲಿಯಾಗುತ್ತದೆಯೇ?: ಹಾಗಿದ್ರೆ ಈ ಸಲಹೆ ಅನುಸರಿಸಿ!

    June 25, 2025

    ನಿತ್ಯ ಖಾಲಿ ಹೊಟ್ಟೆಯಲ್ಲಿ ಟೊಮೆಟೋ ಜ್ಯೂಸ್ ಕುಡಿಯೋದ್ರಿಂದ ಎಷ್ಟೆಲ್ಲಾ ಬೆನಿಫಿಟ್ ಇದೆ ಗೊತ್ತಾ?

    June 25, 2025

    ಕೂದಲು ಸಿಕ್ಕಾಪಟ್ಟೆ ಉದುರುತ್ತಿದೆಯಾ? ಹಾಗಾದ್ರೆ ಈ ಇದನ್ನು ಒಮ್ಮೆ ಟ್ರೈ ಮಾಡಿ!

    June 25, 2025

    ತಲೆಯಲ್ಲಿ ವಿಪರೀತ ಹೇನಿದ್ಯಾ? ಹಾಗಿದ್ರೆ ಹೀಗೆ ಮಾಡಿ, ತಕ್ಷಣವೇ ಒಂದೂ ಉಳಿಯದಂತೆ ಉದುರಿಹೋಗುತ್ತೆ!

    June 25, 2025

    ಬೆಳಿಗ್ಗೆ ಎದ್ದಾಕ್ಷಣ ಈ ರೀತಿಯ ಲಕ್ಷಣ ಕಂಡುಬಂದ್ರೆ ಇದು ಥೈರಾಯ್ಡ್ ಸಮಸ್ಯೆ ಎಂದರ್ಥ

    June 25, 2025

    ಅಬ್ಬಬ್ಬಾ.. ಜನರು ಹೆಚ್ಚು ಖರ್ಚು ಮಾಡೋದು ಇದಕ್ಕೇನಾ..? ವರದಿಯಲ್ಲಿ ಶಾಕಿಂಗ್ ವಿಷಯ ಬಯಲು

    June 25, 2025

    ಚಳಿಗಾಲದಲ್ಲಿ ಮೂಲಂಗಿ ಸೇವನೆ ಒಳ್ಳೆಯದು, ಆದ್ರೆ ತಪ್ಪಿಯೂ ಈ ಆಹಾರಗಳ ಜೊತೆ ತಿನ್ನಬೇಡಿ..!

    June 25, 2025

    ಮಳೆಗಾಲದಲ್ಲಿ ಮೊಸರು ಸೇವನೆ ಒಳ್ಳೆಯದೇ? ತಜ್ಞರು ಹೇಳಿದಿಷ್ಟು!

    June 24, 2025

    ಮೊಡವೆಯಿಂದ ಮುಖದ ಕಳೆ ಕುಂದಿದ್ಯಾ!? ಹಾಗಿದ್ರೆ ವಾರ ಪೂರ್ತಿ ಹೀಗೆ ಮಾಡಿ!

    June 24, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.