ಬೆಂಗಳೂರು: ಪರಮೇಶ್ವರ್ ಅಷ್ಟೇ ಅಲ್ಲ ಇನ್ನು ಕೆಲವರು ರನ್ಯಾರಾವ್ ಲಿಂಕ್ ನಲ್ಲಿ ಇರಬಹುದು ಎಂದು ವಿಪಕ್ಷ ನಾಯಕ ಆರ್ ಅಶೋಕ್ ಆರೋಪಿಸಿದ್ದಾರೆ. ನಟಿ ರನ್ಯಾ ರಾವ್ ವಿದೇಶದಿಂದ ಗೋಲ್ಡ್ ಸ್ಮಗ್ಲಿಂಗ್ ಕೇಸ್ ಸಂಬಂಧ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರ ಒಡೆತನದ ಕಾಲೇಜಿನ ಮೇಲೆ ಇಡಿ ದಾಳಿ ನಡೆಸಿದೆ. ಈ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಅವರು,
ಮೊದಲು ಇಡಿ ದಾಳಿ ಮುಗಿದು ತನಿಖೆ ಆಗಲಿ. ತನಿಖೆ ಪೂರ್ತಿ ಆದ ಮೇಲೆ ನಾವು ಪರಮೇಶ್ವರ್ ವಿರುದ್ಧ ಕ್ರಮಕ್ಕೆ ಆಗ್ರಹಿಸ್ತೇವೆ. ಮುಂದಿನ ಹೋರಾಟ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡ್ತೇವೆ. ಇಡಿ ದಾಳಿಯಲ್ಲಿ ಪರಮೇಶ್ವರ್ ಪಾತ್ರ ಸಾಬೀತಾದರೆ ರಾಜೀನಾಮೆ ಕೊಡಬೇಕು. ಈ ಬಗ್ಗೆ ಆಗ್ರಹ ಮಾಡುತ್ತೇವೆ ಎಂದು ಹೇಳಿದರು.
ಬಿಯರ್ ಕುಡಿದರೆ ಕಿಡ್ನಿ ಸ್ಟೋನ್ ಆಗುತ್ತಾ? ಎಣ್ಣೆ ಪ್ರಿಯರು ನೋಡಲೇಬೇಕಾದ ಸ್ಟೋರಿ!
ಈಗ ಪರಮೇಶ್ವರ್ ಮನೆ, ಸಂಸ್ಥೆಗಳ ಮೇಲೆ ಇಡಿ ದಾಳಿ ಆಗಿದೆ. ಮುಂದೆ ಇನ್ನೂ ಯಾರ್ಯಾರ ಮೇಲೆ ದಾಳಿ ಆಗುತ್ತೋ ನೋಡಬೇಕು. ಪರಮೇಶ್ವರ್ ಅಷ್ಟೇ ಅಲ್ಲ ಇನ್ನು ಕೆಲವರು ರನ್ಯಾರಾವ್ ಲಿಂಕ್ ನಲ್ಲಿ ಇರಬಹುದು ಎಂದು ಆರೋಪ ಮಾಡಿದ್ದಾರೆ.