ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್ ಟಿಆರ್ ಈ ಕ್ರೇಜಿ ಕಾಂಬೋದ ಮೆಗಾ ಪ್ರಾಜೆಕ್ಟ್ ಮೇಲೆ ಈಗಾಗಲೇ ನಿರೀಕ್ಷೆಗಳು ದುಪ್ಪಟ್ಟಿವೆ. ನೀಲ್-ತಾರಕ್ ಜೋಡಿ ದೊಡ್ಡದಾಗಿ ಏನೋ ಮಾಡೋದಿಕ್ಕೆ ಹೊರಟಿರುವ ಸೂಚನೆಯಂತೂ ಸಿಕ್ಕಿದೆ. ಇತ್ತೀಚೆಗಷ್ಟೇ ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಶೂಟಿಂಗ್ ಗೆ ಕಿಕ್ ಸ್ಟಾರ್ಟ್ ಸಿಕ್ಕಿತ್ತು. ಆದ್ರೆ ಜೂನಿಯರ್ ಎನ್ ಟಿಆರ್ ಇನ್ನೂ ಸೆಟ್ ಗೆ ಎಂಟ್ರಿಯಾಗಿಲ್ಲ.
ಅತ್ತ ಹೃತಿಕ್ ರೋಷನ್ ವಾರ್ ಶೂಟಿಂಗ್ ಜೊತೆ ಜೊತೆಯಲಿಯೇ ನೀಲ್ ಸಿನಿಮಾದ ಚಿತ್ರೀಕರಣದಲ್ಲಿ ಯಂಗ್ ಟೈಗರ್ ಭಾಗಿಯಾಗಲಿದ್ದಾರೆ. ಭರದಿಂದ ಚಿತ್ರೀಕರಣ ನಡೆಯುತ್ತಿದ್ದು, ಚಿತ್ರಕ್ಕೆ ಡ್ರ್ಯಾಗನ್ ಎಂಬ ಶೀರ್ಷಿಕೆ ಫೈನಲ್ ಆಗಿದೆ ಎನ್ನಲಾಗ್ತಿದೆ. ಬಟ್ ಚಿತ್ರತಂಡ ಈ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಶೂಟಿಂಗ್ ಹಂತದಲ್ಲಿರುವ ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್ ಟಿಆರ್ ಬಹುನಿರೀಕ್ಷಿತ ಪ್ರಾಜೆಕ್ಟ್ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ.
ನೀಲ್ ಹಾಗೂ ಯಂಗ್ ಟೈಗರ್ ಹೊಸ ಸಿನಿಮಾ ಮುಂದಿನ ವರ್ಷ ಬಿಡುಗಡೆಯಾಗಲಿದೆ. 2026ರ ಜನವರಿ 9 ರಂದು ಸಿನಿಮಾ ತೆರೆಗೆ ಬರಲಿದೆ. ನಂದಮೂರಿ ಕಲ್ಯಾಣ್ ರಾಮ್ ಅವರ ಎನ್ ಟಿಆರ್ ಆರ್ಟ್ಸ್ ಬ್ಯಾನರ್ ನಡಿ ಚಿತ್ರ ನಿರ್ಮಾಣವಾಗುತ್ತಿದೆ. ಕನ್ನಡತಿ ರುಕ್ಮಿಣಿ ವಸಂತ ಜೂನಿಯರ್ ಎನ್ ಟಿಆರ್ ಗೆ ಜೋಡಿಯಾಗಿ ಅಭಿನಯಿಸಲಿದ್ದಾರೆ ಎನ್ನಲಾಗುತ್ತಿದೆ. ಪ್ರಶಾಂತ್ ನೀಲ್ ಸಿನಿಮಾಗಳಲ್ಲಿ ಕೆಲಸ ಮಾಡಿರುವ ರವಿ ಬಸ್ರೂರ್, ಭುವನ್ ಈ ಚಿತ್ರದಲ್ಲಿಯೂ ದುಡಿಯಲ್ಲಿದ್ದಾರೆ.
ಸಂಕ್ರಾಂತಿ ಹಬ್ಬಕ್ಕೆ ಈಗಾಗಲೇ ದಳಪತಿ ವಿಜಯ್ ಕೊನೆಯ ಸಿನಿಮಾ ಬಿಡುಗಡೆಯಾಗುತ್ತಿದೆ. ‘ಜನನಾಯಗನ್’ ಚಿತ್ರ 2026ರ ಜನವರಿ9ರಂದು ತೆರೆಗೆ ಬರ್ತಿದ್ದು, ಹೀಗಾಗಿ ಎರಡು ದೊಡ್ಡ ನಟರ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಕಾದಾಟ ಜೋರಾಗಿ ನಡೆಯಲಿದೆ ಎಂಬ ಲೆಕ್ಕಾಚಾರ ಶುರುವಾಗಿದೆ.