ಶಿವಮೊಗ್ಗ: ಶಿವಮೊಗ್ಗದಲ್ಲಿ ಸ್ಮಾರ್ಟ್ ಸಿಟಿ ಅಧಿಕಾರಿಯೊಬ್ಬರು ಲಂಚ ಸ್ವೀಕರಿಸುತ್ತಿದ್ದಾಗಲೇ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇಂದು ತನ್ನ ವೃತ್ತಿಯ ಕೊನೆಯ ದಿನವಾಗಿದ್ದು, ಇಂದೇ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಸ್ಮಾರ್ಟ್ ಸಿಟಿ ಮುಖ್ಯಸ್ಥನಾಗಿದ್ದ ಕೃಷ್ಣಪ್ಪ ಅವರಿಗೆ ಇಂಧು ವೃತ್ತಿಯ ಕೊನೆಯ ದಿನವಾಗಿತ್ತು. ಇಂದು ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಿಗೆ ಅಧಿಕಾರ ಹಸ್ತಾಂತರಿಸಿ ನಿವೃತ್ತಿ ಪಡೆಯಬೇಕಿತ್ತು. ಆದರೆ ಲಂಚದ ಆಸೆಯಿಂದ ಕೊನೆಯ ದಿನ ಅರೆಸ್ಟ್ ಆಗಿದ್ದಾರೆ.
ಕೋರ್ಟ್ ಬರೋದಿಕ್ಕೆ ಬೆನ್ನು ನೋವು ಸಿನಿಮಾ ನೋಡೋದಿಕ್ಕೆ ಇರೋಲ್ವಾ? ಶಿಷ್ಯನ ಚಿತ್ರ ನೋಡ್ತಾರೆ ದರ್ಶನ್? ಎಲ್ಲಿ ಯಾವಾಗ?
ಶಿವಮೊಗ್ಗ ನಗರದಲ್ಲಿ ಟಿವಿ, ಎಲ್‍ಇಡಿ ಪರದೆ ಅಳವಡಿಸುವ ಸಂಬಂಧ ಬಿಲ್ ಮಾಡಲು ಮುಂಬೈ ಮೂಲದ ಕಂಪೆನಿ ಬಳಿ 1 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಪಡೆಯುವಾಗಲೇ ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ. ಅಲ್ಲದೇ ಹಣ ಕೊಡದೇ ಇದ್ದರೆ, ಮುಂಬೈ ಮೂಲದ ಕಂಪೆನಿ ಸರಿಯಾಗಿ ಸರ್ವಿಸ್ ಮಾಡಿಲ್ಲ ಎಂದು ಷರಾ ಬರೆಯುವುದಾಗಿ ಅವರು ಬೆದರಿಕೆ ಹಾಕಿದ್ದರು ಎನ್ನಲಾಗಿದೆ.