ಮಂಡ್ಯ: ನಿರ್ಮಾಣ ಹಂತದಲ್ಲಿದ್ದ ಹೆಬ್ಬಾಗಿಲು ಕುಸಿದು ಓರ್ವ ಸಾವನ್ನಪ್ಪಿ, ಮೂವರಿಗೆ ಗಾಯಗಳಾಗಿರುವ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ದೇವರಹಳ್ಳಿ ದೇವರಹಳ್ಳಿ ಗ್ರಾಮದಲ್ಲಿ ನಡೆದಿದೆ. ಶರಣ(35) ಸ್ಥಳದಲ್ಲೇ ಸಾವನ್ನಪ್ಪಿದ ದುರ್ಧೈವಿಯಾಗಿದ್ದು,
ಗ್ರಾಮದ ತಪಸ್ವೀರಾಯ ದೇಗುಲದ ಮುಂಭಾಗ ನಿರ್ಮಿಸಲಾಗ್ತಿದ್ದ ಹೆಬ್ಬಾಲಿಗೆ ಎರಡು ಕಡೆ ಫಿಲ್ಲರ್ ನಿರ್ಮಿಸಿ ಅದರ ಮೇಲೆ ಕಬ್ಬಿಣ ಕಟ್ಟಿ ಕಾಂಕ್ರಿಟ್ ಹಾಕಲಾಗ್ತಿತ್ತು. ಈ ವೇಳೆ ಭಾರದಿಂದ ಏಕಾಏಕಿ ಕೆಲಸ ಮಾಡ್ತಿದ್ದ ಕಾರ್ಮಿಕರ ಮೇಲೆ ಹೆಬ್ಬಾಗಿಲು ಕುಸಿದಿದೆ.
ದೇಹಕ್ಕೆ ಒಳ್ಳೆಯದು ಅಂತ ಹೆಚ್ಚು ಖರ್ಜೂರ ತಿನ್ನೋ ಮುನ್ನ ಹುಷಾರ್! ಈ ಭಾಗಕ್ಕೆ ಹಾನಿಕಾರಕ!
ಗಾಯಾಳುಗಳನ್ನು ಬೆಳ್ಳೂರಿನ ಏಮ್ಸ್ ಆಸ್ಪತ್ರೆಗೆ ರವಾನೆ ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.