ಬೆಂಗಳೂರು :-ಯಶವಂತಪುರ ಎಪಿಎಂಸಿ ಮಾರುಕಟ್ಟೆಯ ಈರುಳ್ಳಿ, ಆಲೂಗಡ್ಡೆ, ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಮಾರಬಹುದಾದ ಉತ್ಪನ್ನಗಳ ಅಧಿಸೂಚಿತ ಪಟ್ಟಿಯಿಂದ ಹೊರಗಿಟ್ಟು, ಮಾರಾಟಗಾರರನ್ನು ದಾಸನಪುರಕ್ಕೆ ಸ್ಥಳಾಂತರಗೊಳ್ಳಲು ಒತ್ತಿಸಲಾಗಿದೆ.
ಗರ್ಭಿಣಿ ಹಸುವಿನ ತಲೆ ಕಡಿದು ಮಾಂಸ ಕದ್ದೊಯ್ದಿದ್ದ ಕೇಸ್ ಗೆ ಟ್ವಿಸ್ಟ್: ತನಿಖೆ ವೇಳೆ ಶಾಕಿಂಗ್ ವಿಚಾರ ಬೆಳಕಿಗೆ!
ಟ್ರಾಫಿಕ್ ದಟ್ಟಣೆ ಇತ್ಯಾದಿ ಕಾರಣಗಳಿಂದ ಈರುಳ್ಳಿ-ಆಲೂಗಡ್ಡೆ ಮಾರಾಟಗಾರರನ್ನು ದಾಸನಪುರ ಉಪ ಮಾರುಕಟ್ಟೆಗೆ ಸ್ಥಳಾಂತರಗೊಳ್ಳಲು ಆರು ವರ್ಷಗಳ ಹಿಂದೆಯೇ ಸೂಚಿಸಲಾಗಿತ್ತು. ಅದರಂತೆ 150ಕ್ಕೂ ಹೆಚ್ಚು ಮಾರಾಟಗಾರರು ದಾಸನಪುರಕ್ಕೆ ಸ್ಥಳಾಂತರಗೊಂಡಿದ್ದಾರೆ. ಇನ್ನುಳಿದ 300-350 ವ್ಯಾಪಾರಸ್ಥರು ಯಶವಂತಪುರ ಎಪಿಎಂಸಿಯಲ್ಲೇ ಉಳಿದಿದ್ದಾರೆ. ಇವರು ದಾಸನಪುರಕ್ಕೆ ಸ್ಥಳಾಂತರಗೊಳ್ಳುವುದಿಲ್ಲಎಂದು ಪಟ್ಟು ಹಿಡಿದಿದ್ದಾರೆ. ಸ್ಥಳಾಂತರ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲನ್ನೂ ಏರಿದ್ದಾರೆ. ಹೀಗಾಗಿ ಎಪಿಎಂಸಿಯು ಹೊಸ ಅಸ್ತ್ರ ಪ್ರಯೋಗಿಸಿದೆ.
ನೆಲಮಂಗಲ ಬಳಿಯ ದಾಸನಪುರ ಮಾರುಕಟ್ಟೆಯಲ್ಲಿ ವರ್ತಕರಿಗೆ ಬೇಕಾದ ಮೂಲ ಸೌಲಭ್ಯಗಳಿಲ್ಲ. ಅಲ್ಲದೆ ಅಂಗಡಿಗಳು ಕಿರಿದಾಗಿದ್ದು, ವ್ಯಾಪಾರಕ್ಕೆ ಬೇಕಾದ ವಾತಾವರಣವೂ ಇಲ್ಲ. ಹಾಗಾಗಿ ಸ್ಥಳಾಂತರಗೊಳ್ಳುವುದಿಲ್ಲ ಎಂಬುದು ವ್ಯಾಪಾರಸ್ಥರ ಹೇಳಿಕೆ.