ವಿಜಯನಗರ:- ಈರುಳ್ಳಿಗೆ ಬೆಂಬಲ ಬೆಲೆ ಸಿಗದ ಹಿನ್ನಲೆ ರೈತ ಕಣ್ಣೀರು ಹಾಕುತ್ತಿದ್ದು, ಅನ್ನದಾತನ ಸ್ಥಿತಿ ನೋಡಿದ್ರೆ ಮರುಕ ಹುಟ್ಟುವಂತೆ ಮಾಡಿದೆ.
ಚಲಿಸುತ್ತಿರುವಾಗಲೇ ಪಲ್ಟಿ: ಏಕಾಏಕಿ ಬೆಂಕಿ ಹೊತ್ತಿಕೊಂಡು ಧಗಧಗನೇ ಉರಿದ ಲಾರಿ!
ಅದರಂತೆ ಇಲ್ಲೋರ್ವ ರೈತ, ಈರುಳ್ಳಿ ಬೆಲೆ ಸಿಗದ ಹಿನ್ನೆಲೆ, ಬೆಳೆ ಬೆಳೆದಿದ್ದ ಹೊಲವನ್ನ ಕುರಿಗಳನ್ನು ಬಿಟ್ಟು ಮೇಯಿಸಿದ್ದಾನೆ. ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಉತ್ತಂಗಿ ಗ್ರಾಮದಲ್ಲಿ ಜರುಗಿದೆ. ಅನ್ನದಾತ ಶರಣಪ್ಪ ಎಂಬಾತನೇ ಬೆಳೆದ ಬೆಳೆಯನ್ನು ತಾನೇ ನಾಶ ಮಾಡಿದ್ದಾರೆ.
ರೈತ ಶರಣಪ್ಪ, ಮೂರು ಎಕರೆ ಹೊಲದಲ್ಲಿ ಈರುಳ್ಳಿ ಬೆಳೆ ಬೆಳೆದು ಲಾಭದ ನಿರೀಕ್ಷೆಯಲ್ಲಿದ್ದ. ಆದ್ರೆ ಬೆಲೆ ಕುಸಿತದಿಂದ ದಾರಿ ತೋಚದೆ ಕುರಿಗಳಿಗೆ ಈರುಳ್ಳಿ ಬೆಳೆಯನ್ನೆ ಆಹಾರವಾಗಿಸಿದ. ರಾಜ್ಯ ಸರ್ಕಾರಕ್ಕೆ ಹಲವು ಭಾರೀ ವಿಜಯನಗರದ ರೈತರು ಈರುಳ್ಳಿ ಶೈಥಿಕರಣ ಘಟಕ ತೆರೆಯುವಂತೆ ಒತ್ತಾಯಿಸಿದ್ರು.
ಆದ್ರೆ ರೈತರ ಕಷ್ಟಕ್ಕೆ ಸ್ಪಂದಿಸದ ಸರ್ಕಾರಕ್ಕೆ ಅನ್ನದಾತರು ಹಿಡಿಶಾಪ ಹಾಕ್ತಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ರೈತರ ಕಷ್ಟಕ್ಕೆ ಅಧಿವೇಶನಗಳು ಧ್ವನಿಯಾಗುತ್ತಿಲ್ಲ. ಪ್ರತಿಭಾರಿಯೂ ಈ ಭಾಗದ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಿದ ಜನಪ್ರತಿನಿಧಿಗಳ ವಿರುಧ್ದವು ರೈತರು ಸಿಡಿದೆದ್ದಿದ್ದಾರೆ. ಹಾಗಿದ್ರೆ ಕಲ್ಯಾಣ ಕರ್ನಾಟಕ ಭಾಗದ ರೈತರ ಸಮಸ್ಯೆಗಳಿಗೆ ಕೊನೆ ಎಂದು ? ಪರಿಹಾರ ಯಾವಾಗ? ಎಂದು ಬಡ ಅನ್ನಧಾತರು ಪ್ರಶ್ನೆ ಮಾಡುತ್ತಿದ್ದಾರೆ.