ಚಿತ್ರದುರ್ಗ: ಬೆಂಗಳೂರಿನ ಎಂಪಿಎಂಸಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಇಳಿಕೆಯಾಗಿದ್ದು, ಬೆಳೆಗಾರರನ್ನು ಕಂಗಾಲು ಮಾಡಿದೆ. ಚಿತ್ರದುರ್ಗ ಜಿಲ್ಲೆಯ ಈರುಳ್ಳಿ ಬೆಳೆದ ರೈತರ ಗೋಳು ಕೋಳೋರು ಯಾರು ಎಂಬಂತಾಗಿದೆ.. ಪ್ರತಿ ಈರುಳ್ಳಿ ಕ್ವಿಂಟಾಲ್ ರೂಪಾಯಿ 3 ನೂರರಿಂದ ನಾಲ್ಕು ನೂರು ಇದೆ. ಬಿತ್ತನೆ ಬೀಜ, ಗೊಬ್ಬರ,
ಈ 3 ರಾಶಿಯವರು ತಾಮ್ರದ ಉಂಗುರ ಧರಿಸುವುದರಿಂದ ಬದಲಾಗುತ್ತೆ ಅದೃಷ್ಟ: ಹಣದ ರಾಶಿಯೇ ಹರಿದು ಬರುತ್ತಂತೆ!
ಕೂಲಿ ಆಳಿನ ಸಂಬಳ ಹೆಚ್ಚಾಗಿದೆ. ಮಾರುಕಟ್ಟೆಗೆ ತೆಗೆದುಕೊಂಡು ಹೋದ ವಾಹನದ ಬಾಡಿಗೆ ಸಹ ದೊರೆಯದಂತ್ತಾಗಿ ಈರುಳ್ಳಿ ಬೆಲೆ ಪಾತಾಳಕ್ಕೆ ಕುಸಿದಿದ್ದು ಬೆಳೆಗಾರರಿಗೆ ಸಾಲದ ಹೊರೆ ಹೆಚ್ಚಾಗಿದೆ ಎಂದು ರೈತ ನಿಜಲಿಂಗಪ್ಪ ಅಳಲು ತೋಡಿಕೊಂಡಿದ್ದಾರೆ. ಹೀಗಾಗಿ ಕೇಂದ್ರ ರಾಜ್ಯ ಸರ್ಕಾರ ಈರುಳ್ಳಿಗೆ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಜಿಲ್ಲೆತ ರೈತರು ಆಗ್ರಹಿಸಿದ್ದಾರೆ.