ಬಾಗಲಕೋಟೆ : ಇಂದಿನ ದಿನಮಾನಗಳಲ್ಲಿ ಸಂಸ್ಕಾರ ಸಂಸ್ಕೃತಿ ಯೋಗಾಭ್ಯಾಸ ಬೆಳೆಸಿಕೊಂಡರೆ ಮಾತ್ರ ಉಳಿಗಾಲವಿದೆ ಎಂದು ಹಳೇ ಹುಬ್ಬಳ್ಳಿಯ ಶ್ರೀ ವೀರಭಿಕ್ಷಾವರ್ತಿ ಮಠದ ಜಗದ್ಗುರು ಯೋಗಾಚಾರ್ಯ ಶ್ರೀ ಶಿವಶಂಕರ ಶಿವಾಚಾರ್ಯರು ಹೇಳಿದರು
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದ ಶ್ರೀ ನೀಲಕಂಠೇಶ್ವರ ಮಠದಲ್ಲಿ ಜರುಗಿದ ಯೋಗ ಹಾಗೂ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಸಂಸ್ಕಾರ ಬೆಳೆಸಿಕೊಳ್ಳಬೇಕು ಅಂದಾಗ ಮಾತ್ರ ಪ್ರಬುದ್ಧ ವ್ಯಕ್ತಿಯಾಗಿ ಬಾಳಲು ಸಹಕಾರಿಯಾಗಲಿದೆ. ಇಂದಿನ ಯುವಕರು ದುಶ್ಚಟಗಳಿಗೆ ಬಲಿಯಾಗದೆ, ಯೋಗ-ಧ್ಯಾನದಲ್ಲಿ ತೋಡಗಿಕೊಳ್ಳಬೇಕು. ಸದೃಢ ಸಮಾಜ ನಿರ್ಮಾಣವಾಗುವಲ್ಲಿ ಯುವಕರ ಪಾತ್ರ ಪ್ರಮುಖವಾಗಿದೆ. ಪಾಲಕರು ತಮ್ಮ ಮಕ್ಕಳನ್ನು ಇಂತಹ ಶಿಬಿರಗಳಲ್ಲಿ ಸೇರಿಸುವ ಮೂಲಕ ಸನ್ಮಾರ್ಗದ ಹಾದಿ ತೋರಿಸಬೇಕೆಂದೆರು. ಈ ಸಂದರ್ಭದಲ್ಲಿ ಶಿಬಿರಾರ್ಥಿಗಳು ಪಾಲಕರ ಪಾದ ಪೂಜೆ ನೇರೆವೆರಿಸಿದರು. ನಂತರ ಹುಲ್ಯಾಳ ಗುರುದೇವಾಶ್ರಮದ ಪಪೂ ಹರ್ಷಾನಂದ ಮಹಾಸ್ವಾಮಿಗಳು ಮಾತನಾಡಿ ತಂದೆ ತಾಯಿಗೆ ಗೌರವ ನೀಡುವುದರಿಂದ ಸಕಲವು ದೊರೆಯುತ್ತದೆ,ಇಂತಹ ಶಿಬಿರಗಳಲ್ಲಿ ಪಾಲ್ಗೋಳ್ಳುವ ಮೂಲಕ ಆಚಾರ,ವಿಚಾರ,ಸಂಸ್ಕಾರ ಸಂಸ್ಕೃತಿ ಸೇರಿದಂತೆ ಆಧ್ಯಾತ್ಮದ ಹಾದಿ ಹಿಡಿಯಬೇಕೆಂದರು.
ಉಗ್ರರನ್ನು ಹುಡುಕಿ ಹುಡುಕಿ ಕೇಂದ್ರ ಸರ್ಕಾರ ಕೊಲ್ಲುತ್ತದೆ ; ತೇರದಾಳ ಶಾಸಕ ಸಿದ್ದು ಸವದಿ
ಇದೇ ಸಂದರ್ಭದಲ್ಲಿ ಕನ್ಹೇರಿ ಮಠದ ಬಸವರಾಜ ಶ್ರೀಗಳು,ಬಸಪ್ಪ ಎಂಟೆತ್ತಿನವರ,ಸುಭಾಸ ಕಂಪು ಮಲ್ಲಪ್ಪ ಗಣಿ, ದಾನಪ್ಪ ಆಸಂಗಿ, ಹಣಮಂತ ಮಗದುಮ್ , ಗುರು ಮರಡಿಮಠ, ಆನಂದ ಕಂಪು,ಗಿರೀಶ್ ಕಾಂತಿ, ಗಂಗಪ್ಪ ಅಮ್ಮಲಜೇರಿ, ನಿಂಗಪ್ಪ ಕಾಂತಿ,ಕಾಶಪ್ಪ ನಾಯಕ,ಸಿದ್ದು ಕಂಚು ಈರಪ್ಪ ಕಡಕಬಾನಿ, ಮಲ್ಲಪ್ಪ ಗಂಗಾವತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.